ವಿಜಯ್ ಕಾರ್ತಿಕ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ವಿಜಯಸಾರಥಿ ಮತ್ತು ಕೌಸಲ್ಯ ದಂಪತಿಗಳ ಪುತ್ರನಾಗಿ ಬಳ್ಳಾರಿಯಲ್ಲಿ ಜನಿಸಿದರೂ ಬೆಳೆದಿದದ್ದೆಲ್ಲಾ ಬೆಂಗಳೂರಿನಲ್ಲಿ. ಮೂಲತಃ ಕೋರಿಯೋಗ್ರಾಫರ್ ಆಗಿರುವ ಇವರು ,ಬೆಂಗಳೂರಿನಲ್ಲಿ ಒಂದು ಡ್ಯಾನ್ಸ್ ಸ್ಟುಡಿಯೋ ನಡೆಸುತ್ತಿದ್ದಾರೆ.2014 ರಲ್ಲಿ ತೆರೆಕಂಡ `ಮೆಲಡಿ' ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಗಾಯಕ ಎಲ್.ಎನ್.ಶಾಸ್ತ್ರೀ ಈ ಚಿತ್ರದಲ್ಲಿ ಅವಕಾಶ ಕೊಡಿಸಿದ್ದರು.ನಂತರ ಕೆಲವು ಚಿತ್ರಗಳಲ್ಲಿ ನಟಿಸಿದರೂ ಅವು ತೆರೆ ಕಾಣಲಿಲ್ಲ. ಕನ್ನಡ ಮಾತ್ರವಲ್ಲದೇ ತೆಲಗು,ಹಿಂದಿ,ಇಂಗ್ಲಿಷ್ ಮತ್ತು ತುಳು ಭಾಷೆಗಳನ್ನು ಮಾತನಾಡುತ್ತಾರೆ. 2018 ರಲ್ಲಿ `ಸೇಡ್' ಚಿತ್ರದಲ್ಲಿ ನಟಿಸಿದರು..ಪ್ರಸ್ತುತ `ಕಲಾಧಿಪತಿ',`ಆರ್ಧನಾರಿ' ಚಿತ್ರಗಳೊಂದಿಗೆ ಬಹುಭಾಷೆಯ ಕನ್ನಡ ಚಿತ್ರದಲ್ಲಿ ಸಕ್ರಿಯವಾಗಿದ್ದಾರೆ.