twitter
    For Quick Alerts
    ALLOW NOTIFICATIONS  
    For Daily Alerts

    2020ರಲ್ಲಿ ಗಮನ ಸೆಳೆದ ಬಾಲಿವುಡ್‌ ಮಹಿಳಾ ಪ್ರಧಾನ ಚಿತ್ರಗಳು

    |

    ಈ ವರ್ಷ ಸಿನಿ ಜಗತ್ತಿನಲ್ಲಿ ತೆರೆಕಂಡ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ರಿಲೀಸ್ ಆದ ಚಿತ್ರಗಳ ಪೈಕಿ ಮಹಿಳಾ ಪ್ರಧಾನ ಸಿನಿಮಾಗಳು ಗಮನ ಸೆಳೆದಿದೆ. ಹಿಂದಿ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಕಥೆಗಳಿಗೆ ಪ್ರೇಕ್ಷಕರು ಹೆಚ್ಚು ಮಣೆ ಹಾಕ್ತಾರೆ. ಸ್ಟಾರ್ ಹೀರೋಗಳಂತೆ ನಟಿಯನ್ನು ನಂಬಿ ನಿರ್ಮಾಪಕರು ಸಿನಿಮಾ ಮಾಡ್ತಾರೆ, ಪ್ರೇಕ್ಷಕರು ಸಿನಿಮಾ ನೋಡ್ತಾರೆ.

    ಹಾಗ್ನೋಡಿದ್ರೆ ಈ ವರ್ಷ ಕೆಲವು ಮಹಿಳಾ ಪ್ರಧಾನ ಚಿತ್ರಗಳು ಸ್ವಲ್ಪ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ದೀಪಿಕಾ ಪಡುಕೋಣೆ, ಕಂಗನಾ ರಣಾವತ್, ತಾಪ್ಸಿ ಪನ್ನು ನಟನೆಯ ಚಿತ್ರಗಳು ಪ್ರೇಕ್ಷಕರು ಮನ ಗೆಲ್ಲುವಲ್ಲಿ ಸಫಲವಾಗಿದೆ. ಕೊರೊನಾ ವರ್ಷದಲ್ಲಿ ಬಿಟೌನ್ ಅಂಗಳದಲ್ಲಿ ಗಮನ ಸೆಳೆದ ಮಹಿಳಾ ಪ್ರಧಾನ ಚಿತ್ರಗಳು ಯಾವುದು ಎಂಬುದರ ಪಟ್ಟಿ ಇಲ್ಲಿದೆ. ಮುಂದೆ ಓದಿ...

    ದೀಪಿಕಾ ಪಡುಕೋಣೆ 'ಚಪಾಕ್'

    ದೀಪಿಕಾ ಪಡುಕೋಣೆ 'ಚಪಾಕ್'

    ಆಸಿಡ್ ದಾಳಿಗೆ ಒಳಗಾಗಿ ಶೋಷಣೆ ಎದುರಿಸಿದ ಯುವತಿಯೊಬ್ಬಳ ನೈಜ ಘಟನೆಯನ್ನಾಧರಿಸಿದ ಮಾಡಿದ ಚಿತ್ರ ಚಪಾಕ್. ಈ ಚಿತ್ರದಲ್ಲಿ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಮಹಿಳೆ ಮೇಲಿನ ದೌರ್ಜನ್ಯ ಹಾಗೂ ಅದರ ವಿರುದ್ಧ ಹೇಗೆ ಹೋರಾಡಿದಳು ಎಂಬುದನ್ನು ತೆರೆಮೇಲೆ ತೋರಿಸಿದ್ದರು.

    2020ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ 26 ಸ್ಯಾಂಡಲ್‌ವುಡ್ ತಾರೆಯರು2020ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ 26 ಸ್ಯಾಂಡಲ್‌ವುಡ್ ತಾರೆಯರು

    'ತಪ್ಪಡ್' ಚಿತ್ರದಲ್ಲಿ ತಾಪ್ಸಿ

    'ತಪ್ಪಡ್' ಚಿತ್ರದಲ್ಲಿ ತಾಪ್ಸಿ

    ತಾಪ್ಸಿ ಪನ್ನು ಅಭಿನಯದ ತಪ್ಪಡ್ ಸಿನಿಮಾ ಈ ವರ್ಷ ಗಮನ ಸೆಳೆದ ಚಿತ್ರಗಳ ಪೈಕಿ ಒಂದು. ಇದು ಮಹಿಳಾ ಪ್ರಧಾನ ಚಿತ್ರ. ಈ ಚಿತ್ರದಲ್ಲಿ ತಾಪ್ಸಿ ಗೃಹಿಣಿ ಪಾತ್ರದಲ್ಲಿ ನಟಿಸಿದ್ದರು. ಗಂಡ ಮತ್ತು ಹೆಂಡತಿ ನಡುವಿನ ಸಂಬಂಧ, ಜೊತೆಗೆ ವೃತ್ತಿ ಹೀಗೆ ಒಬ್ಬ ಕಾರ್ಯನಿರತ ಮಹಿಳೆಯ ಕಥೆ ಇದಾಗಿತ್ತು.

    ಗುಂಜನ್ ಸಕ್ಸೇನಾ ಜಾಹ್ನವಿ

    ಗುಂಜನ್ ಸಕ್ಸೇನಾ ಜಾಹ್ನವಿ

    ಭಾರತದ ಮೊದಲ ಮಹಿಳಾ ಯುದ್ಧ ವಿಮಾನ ಪೈಲೆಟ್ ಗುಂಜನ್ ಸಕ್ಸೇನಾ (ಕಾರ್ಗಿಲ್ ಹುಡುಗಿ) ಅವರ ಜೀವನ ಆಧರಿಸಿದ ಮಾಡಿದ ಚಿತ್ರ 'ಗುಂಜನ್ ಸಕ್ಸೇನಾ. ಜಾಹ್ನವಿ ಕಪೂರ್ ಈ ಪಾತ್ರದಲ್ಲಿ ನಟಿಸಿದ್ದರು. ಆನ್‌ಲೈನ್‌ನಲ್ಲಿ ತೆರೆಕಂಡಿದ್ದ ಈ ಚಿತ್ರ ಮೆಚ್ಚುಗೆ ಪಡೆದುಕೊಂಡಿತ್ತು. ಜಾಹ್ನವಿ ನಟನೆ ಸಹ ಗಮನ ಸೆಳೆದಿತ್ತು.

    2020 ಕನ್ನಡ ಚಿತ್ರರಂಗ; ಕೊರೊನಾ ವರ್ಷದಲ್ಲಿ ತೆರೆಕಂಡ ಕನ್ನಡ ಸಿನಿಮಾಗಳು2020 ಕನ್ನಡ ಚಿತ್ರರಂಗ; ಕೊರೊನಾ ವರ್ಷದಲ್ಲಿ ತೆರೆಕಂಡ ಕನ್ನಡ ಸಿನಿಮಾಗಳು

    ಕಂಗನಾ ಪಂಗಾ

    ಕಂಗನಾ ಪಂಗಾ

    ವಿವಾಹಿತ ಮಹಿಳೆಯೊಬ್ಬಳು ರಾಷ್ಟ್ರೀಯ ಕಬಡ್ಡಿ ತಂಡದಲ್ಲಿ ಸ್ಥಾನ ಪಡೆಯುವ ರೋಚಕ ಕಥೆ ಪಂಗಾ. ಈ ಚಿತ್ರದಲ್ಲಿ ಕಂಗನಾ ರಣಾವತ್ ನಾಯಕಿಯಾಗಿ ನಟಿಸಿದ್ದರು. ಅಶ್ವಿನಿ ಅಯರ್ ತಿವಾರಿ ಈ ಚಿತ್ರ ನಿರ್ದೇಶಿಸಿದ್ದರು. ಏಳು ವರ್ಷದ ಮಗುವಿನ ತಾಯಿ ಪಾತ್ರದಲ್ಲಿ ಕಂಗನಾ ನಟನೆ ಮೆಚ್ಚುಗೆ ಗಳಿಸಿಕೊಂಡಿತ್ತು.

    Recommended Video

    ಜೀವನದಲ್ಲಿ ಯಾವತ್ತು ಒಂದೇ ಗುರಿ ಇರ್ಬೇಕು | Shivraj K R Pete | Filmibeat Kannada
    ಶಕುಂತಲಾ ದೇವಿ ವಿದ್ಯಾ ಬಾಲನ್

    ಶಕುಂತಲಾ ದೇವಿ ವಿದ್ಯಾ ಬಾಲನ್

    'ಹ್ಯೂಮನ್ ಕಂಪ್ಯೂಟರ್' ಎಂದು ಖ್ಯಾತಿ ಗಳಿಸಿಕೊಂಡಿದ್ದ ಶಕುಂತಲಾ ದೇವಿ ಅವರ ಜೀವನ ಕಥೆಯನ್ನು ತೆರೆಗೆ ತರಲಾಗಿತ್ತು. ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಿದ್ದರು. ಖ್ಯಾತ ಗಣಿತಶಾಸ್ತ್ರಜ್ಞೆ ಶಕುಂತಲಾ ಆಗಿ ವಿದ್ಯಾ ನಟನೆ ಅದ್ಭುತ ಎನಿಸಿಕೊಂಡಿತ್ತು.

    English summary
    Deepika in Chhapaak to Taapsee in Thappad, Here are the list of 2020 strong female characters in bollywood. Take a look.
    Tuesday, December 15, 2020, 15:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X