For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್‌ಕುಮಾರ್ ಬಹಳ ಮೆಚ್ಚಿದ್ದ ಹಾಲಿವುಡ್ ಸಿನಿಮಾ ಇದು!

  |

  ಭಾರತ ಚಿತ್ರರಂಗ ನೆನಪಿಡುವ ಹಲವು ಸಿನಿಮಾಗಳನ್ನು ಡಾ.ರಾಜ್‌ಕುಮಾರ್ ನೀಡಿದ್ದಾರೆ. ಆದರೆ ಅವರು ತಮ್ಮ ಸಿನಿಮಾಗಳನ್ನು ಎಂದೂ ನೋಡುತ್ತಿರಲಿಲ್ಲವಂತೆ. ಹಾಗೆಂದು ಅವರು ಸಿನಿಮಾಗಳನ್ನೇ ನೋಡುತ್ತಿರಲಿಲ್ಲ ಎಂದೇನೂ ಇಲ್ಲ.

  ಡಾ.ರಾಜ್‌ಕುಮಾರ್ ತಮ್ಮ ಸಹನಟರ ಸಿನಿಮಾಗಳನ್ನು ನೋಡುತ್ತಿದ್ದರು, ಮೆಚ್ಚುತ್ತಿದ್ದರು, ತಮ್ಮ ಮೆಚ್ಚುಗೆಯನ್ನು ಆಯಾ ನಟ-ನಟಿಯರಿಗೆ ತಿಳಿಸುತ್ತಿದ್ದರು ಸಹ. ತಮ್ಮ 'ಯಜಮಾನ' ಸಿನಿಮಾವನ್ನು ರಾಜ್‌ಕುಮಾರ್ ಬಹುವಾಗಿ ಮೆಚ್ಚಿಕೊಂಡಿದ್ದನ್ನು ವಿಷ್ಣುವರ್ಧನ್ ಹೇಳಿಕೊಂಡಿದ್ದರು.

  ಗಾಜನೂರಿನ ಮನೆಯಲ್ಲಿ ವಾಸಿಸಬೇಕೆಂಬ ಡಾ.ರಾಜ್‌ಕುಮಾರ್ ಆಸೆ ಈಡೇರಲೇ ಇಲ್ಲ ಗಾಜನೂರಿನ ಮನೆಯಲ್ಲಿ ವಾಸಿಸಬೇಕೆಂಬ ಡಾ.ರಾಜ್‌ಕುಮಾರ್ ಆಸೆ ಈಡೇರಲೇ ಇಲ್ಲ

  ಕೇವಲ ಕನ್ನಡ ಮಾತ್ರವಲ್ಲ ಪರಭಾಷೆಯ ಸಿನಿಮಾಗಳನ್ನೂ ರಾಜ್‌ಕುಮಾರ್ ನೋಡುತ್ತಿದ್ದರು. ಭಾರತೀಯ ಭಾಷೆಗಳ ಸಿನಿಮಾಗಳನ್ನು ಮಾತ್ರವಲ್ಲ, ವಿದೇಶಿ ಸಿನಿಮಾಗಳ ಬಗ್ಗೆಯೂ ಅವರಿಗೆ ಆಸಕ್ತಿ ಇತ್ತು. ಹಾಲಿವುಡ್ ಸಿನಿಮಾಗಳನ್ನೂ ಅಣ್ಣಾವ್ರು ನೋಡುತ್ತಿದ್ದರು. ಅವರ ಮೆಚ್ಚಿನ ಇಂಗ್ಲೀಷ್‌ ಸಿನಿಮಾಗಳಲ್ಲಿ ಒಂದು ಟಾಮ್ ಹ್ಯಾಂಕ್ಸ್ ನಟನೆಯ 'ಫಾರೆಸ್ಟ್ ಗಂಫ್'.

  1994ರಲ್ಲಿ ಬಿಡುಗಡೆ ಆದ 'ಫಾರೆಸ್ಟ್ ಗಂಫ್' ಸಿನಿಮಾವನ್ನು ರಾಜ್‌ಕುಮಾರ್ ಹಲವು ಬಾರಿ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರಂತೆ. ಈ ವಿಷಯವನ್ನು ದಿವಂಗತ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಬಳಿ ಹೇಳಿದ್ದಾಗಿ ನಟಿ ಮಾಳವಿಕಾ ಅವಿನಾಶ್ ತಮ್ಮ ಇತ್ತೀಚಿನ ಫೇಸ್‌ಬುಕ್ ಬರಹದಲ್ಲಿ ದಾಖಲಿಸಿದ್ದಾರೆ.

  ಮಾಳವಿಕಾ ಬಳಿ ಹೇಳಿದ್ದರಂತೆ ಪುನೀತ್ ರಾಜ್‌ಕುಮಾರ್

  ಮಾಳವಿಕಾ ಬಳಿ ಹೇಳಿದ್ದರಂತೆ ಪುನೀತ್ ರಾಜ್‌ಕುಮಾರ್

  ರಾಜ್‌ಕುಮಾರ್ ಅವರಿಗೆ 'ಫಾರೆಸ್ಟ್ ಗಂಫ್' ಸಿನಿಮಾ ಇಷ್ಟವಾಗಿದ್ದಕ್ಕೆ ಕಾರಣ ವಿಶ್ಲೇಷಿಸಿರುವ ಮಾಳವಿಕಾ ಅವಿನಾಶ್, ''ದಂತಕತೆ ಡಾ.ರಾಜ್‌ಕುಮಾರ್ 'ಫಾರೆಸ್ಟ್ ಗಂಫ್' ಸಿನಿಮಾವನ್ನು ಅದೆಷ್ಟು ಇಷ್ಟ ಪಡುತ್ತಿದ್ದರು ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದ ನನೆಪು ನನಗಿದೆ. ಕಲೆಯ ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳಲು ಭಾಷೆಯ ಅಗತ್ಯ ಇಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ'' ಎಂದಿದ್ದಾರೆ ಮಾಳವಿಕಾ.

  ರಾಜ್‌ಕುಮಾರ್‌ ಅವರಿಗೆ ಆ ಸಿನಿಮಾ ಹಿಡಿಸಿದ್ದೇಕೆ?

  ರಾಜ್‌ಕುಮಾರ್‌ ಅವರಿಗೆ ಆ ಸಿನಿಮಾ ಹಿಡಿಸಿದ್ದೇಕೆ?

  ಮುಂದುವರೆದು, ''ಫಾರೆಸ್ಟ್ ಗಂಫ್' ಸಿನಿಮಾ ಭಗವದ್ಗೀತೆಯ 'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ। ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋSಸ್ತ್ವಕರ್ಮಣಿ' (ಕರ್ಮ ಮಾಡುವುದಷ್ಟೆ ನಿನ್ನ ಕೆಲಸ, ಫಲಾಫಲ ದೇವರಿಗೆ ಬಿಡು) ಆಧಾರದಲ್ಲಿದೆ. ಇದೇ ಕಾರಣಕ್ಕೆ ಡಾ.ರಾಜ್‌ಕುಮಾರ್ ಅವರಿಗೆ 'ಫಾರೆಸ್ಟ್ ಗಂಫ್' ಸಿನಿಮಾ ಅಷ್ಟಾಗಿ ಕನೆಕ್ಟ್ ಆಯಿತು ಎನಿಸುತ್ತದೆ. ಏಕೆಂದರೆ ರಾಜ್‌ಕುಮಾರ್ ಅವರು ಸ್ವತಃ ಅದೇ ನೀತಿಯ ಮೇಲೆ ಬದುಕು ಸಾಗಿಸಿದವರು'' ಎಂದಿದ್ದಾರೆ ಮಾಳವಿಕಾ ಅವಿನಾಶ್.

  'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್ 'ಲಾಲ್ ಸಿಂಗ್ ಛಡ್ಡಾ'

  'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್ 'ಲಾಲ್ ಸಿಂಗ್ ಛಡ್ಡಾ'

  ಮಾಳವಿಕಾ ಅವಿನಾಶ್ ಈಗ 'ಫಾರೆಸ್ಟ್ ಗಂಫ್' ಸಿನಿಮಾ ಬಗ್ಗೆ ಮಾತನಾಡಲು ಕಾರಣ, ಹಿಂದಿಯಲ್ಲಿ ಅದರ ರೀಮೇಕ್ ಬಿಡುಗಡೆ ಆಗಲಿರುವುದು. ಅಮೀರ್ ಖಾನ್ 'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್ 'ಲಾಲ್ ಸಿಂಗ್ ಛಡ್ಡಾ' ನಿರ್ಮಾಣ ಮಾಡಿ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾವು ಆಗಸ್ಟ್ 11 ರಂದು ತೆರೆಗೆ ಬರಲಿದೆ. ಆದರೆ ಅಮೀರ್ ಖಾನ್‌ರ ಈ ರೀಮೆಕ್‌ ಸಾಹಸದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ನಟಿ ಮಾಳವಿಕಾ ಅವಿನಾಶ್.

  ಅಮೀರ್ ಖಾನ್ ನಟನೆ ಬಗ್ಗೆ ಮಾಳವಿಕಾ ಅಸಮಾಧಾನ

  ಅಮೀರ್ ಖಾನ್ ನಟನೆ ಬಗ್ಗೆ ಮಾಳವಿಕಾ ಅಸಮಾಧಾನ

  ''ಈ ಒಟಿಟಿ ಕಾಲದಲ್ಲಿ ರೀಮೇಕ್‌ ಸಿನಿಮಾಗಳ ಅವಶ್ಯಕತೆಯಾದರೂ ಏನಿದೆ? ಯಾವುದೇ ಭಾಷೆಯ ಸಿನಿಮಾವನ್ನು ಯಾವುದೇ ಮೂಲೆಯಲ್ಲಿ ಕುಳಿತು ಸಬ್‌ಟೈಟಲ್‌ಗಳ ಜೊತೆ ನೋಡಬಹುದಾಗಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಅಮೀರ್ ಖಾನ್ ಅಂಥಹಾ ಒಳ್ಳೆಯ ನಟ ಸಹ ಜಿಡ್ಡುಗಟ್ಟಿದ ಮುಖಭಾವದೊಂದಿಗೆ ನಟಿಸಿರುವುದು ಟ್ರೇಲರ್‌ನಲ್ಲಿ ಕಾಣುತ್ತಿದೆ. ಅವರ ನಟನೆ ಬಹಳ ಕೃತಕವಾಗಿದೆ. ಗಂಫ್ ಪಾತ್ರದಲ್ಲಿ ನಟಿಸಿದ್ದ ಟಾಮ್ ಹ್ಯಾಂಕ್ಸ್‌ನ ಮಟ್ಟಕ್ಕೆ ಹೋಗಲು ಇನ್ನೂ ಬಹಳ ಎತ್ತರಕ್ಕೆ ಅಮೀರ್ ಖಾನ್ ಏರಬೇಕಾಗುತ್ತದೆ'' ಎಂದಿದ್ದಾರೆ ಮಾಳವಿಕಾ ಅವಿನಾಶ್.

  ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಲ್ಲಿ ಒಂದು 'ಫಾರೆಸ್ಟ್ ಗಂಫ್'

  ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಲ್ಲಿ ಒಂದು 'ಫಾರೆಸ್ಟ್ ಗಂಫ್'

  1994 ರಲ್ಲಿ ಬಿಡುಗಡೆ ಆಗಿದ್ದ 'ಫಾರೆಸ್ಟ್ ಗಂಫ್' ಸಿನಿಮಾ ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಫಾರೆಸ್ಟ್ ಗಂಫ್ ಪಾತ್ರದಲ್ಲಿ ಟಾಮ್ ಹ್ಯಾಂಕ್ಸ್ ನೀಡಿದ ನಟನೆ ಸಹ ಅತ್ಯುತ್ತಮ ಪರ್ಫಾಮೆನ್ಸ್‌ಗಳಲ್ಲಿ ಒಂದು. ಮಗುವಿನ ಮನಸ್ಸಿನ ವ್ಯಕ್ತಿ, ಎಲ್ಲರನ್ನೂ, ಎಲ್ಲವನ್ನೂ ಮಗುವಿನಂಥಹಾ ಶುದ್ಧ ಮನಸ್ಸಿನಿಂದ ಪ್ರೀತಿಸುವ, ತನಗೆ ಅನಿಸಿದ್ದು ಮಾಡುವ ಕತೆಯೇ 'ಫಾರೆಸ್ಟ್ ಗಂಫ್'. ಆ ಸಿನಿಮಾದ ರೀಮೇಕ್ 'ಲಾಲ್ ಸಿಂಗ್ ಚಡ್ಡಾ'. ಅಂದಹಾಗೆ 'ಫಾರೆಸ್ಟ್ ಗಂಫ್' ಸಿನಿಮಾ ಅಮೆಜಾನ್ ಪ್ರೈಂ ಹಾಗೂ ನೆಟ್‌ಫ್ಲಿಕ್ಸ್‌ಗಳಲ್ಲಿ ಎರಡರಲ್ಲೂ ಲಭ್ಯವಿದ್ದು, ಚಂದಾದಾರಾಗಿರುವವರು ಉಚಿತವಾಗಿ ನೋಡಬಹುದಾಗಿದೆ.

  English summary
  Dr Rajkumar's most favorite Hollywood movie is Forrest Gump. Malavika Avinash wrote, Puneeth Rajkumar told her how much Dr Rajkumar loved that movie.
  Wednesday, June 1, 2022, 15:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X