Don't Miss!
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತಕ್ಕೊಬ್ಬರೇ 'ಜೇಮ್ಸ್ ಬಾಂಡ್'.. ಅದು ಅಣ್ಣಾವ್ರು: ಬೇರೆ ಭಾಷೆಗಳಲ್ಲಿ ಬಾಂಡ್ ಚಿತ್ರಗಳು ಗೆಲ್ಲಲಿಲ್ಲ!
ಆಡುಮುಟ್ಟದ ಸೊಪ್ಪಿಲ್ಲ, ಅಣ್ಣಾವ್ರು ಮಾಡಲು ಪಾತ್ರಗಳಿಲ್ಲ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಅಣ್ಣಾವ್ರು ಮಾಡಿದ ಕೆಲ ಸಿನಿಮಾಗಳನ್ನು, ಪಾತ್ರಗಳನ್ನು ಭಾರತೀಯ ಚಿತ್ರರಂಗದಲ್ಲಿ ಮತ್ಯಾರು ಮಾಡಲಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು. ಭಾರತೀಯ ಚಿತ್ರರಂಗದಮಟ್ಟಿಗೆ ಮೊದಲು ಬಾಂಡ್ ಶೈಲಿಯ ಸ್ಪೈ ಥ್ರಿಲ್ಲರ್ ಚಿತ್ರಗಳಲ್ಲಿ ನಟಿಸಿದವರು ಡಾ. ರಾಜ್‌ಕುಮಾರ್.
'ಡಾ. ನೋ' ಹಾಲಿವುಡ್ ಬಾಂಡ್ ಸಿನಿಮಾ ನೋಡಿ ಕನ್ನಡದಲ್ಲಿ ಅಂತಹ ಸಿನಿಮಾ ಮಾಡುವ ಪ್ರಯತ್ನ ನಡೀತು. ದೊರೆ - ಭಗವಾನ್ ನಿರ್ದೇಶಕದ್ವಯರು, ಡಾ. ರಾಜ್‌ಕುಮಾರ್, ವರದಪ್ಪ ಎಲ್ಲರೂ ಮದ್ರಾಸ್‌ನಲ್ಲಿ 'ಡಾ. ನೋ' ಸಿನಿಮಾ ನೋಡಿ ಬಂದಿದ್ದರು. ಹೋಟೆಲ್‌ನಲ್ಲಿ ತಿಂಡಿ ತಿನ್ನುತ್ತ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಆದ ದೊರೆ ಇದ್ದಕ್ಕಿದ್ದಂತೆ ನಾವು ಯಾಕೆ ಇಂತಹ ಸಿನಿಮಾ ಮಾಡಬಾರದು ಎಂದರಂತೆ. ಅದನ್ನು ಕೇಳಿ ಅಣ್ಣಾವ್ರು ನಕ್ಕಿದ್ದರಂತೆ. ಅಲ್ಲ ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿಕೊಂಡಂತೆ ಇದೆ ನಿಮ್ಮ ಮಾಡು ಎಂದಿದ್ದರಂತೆ.
ಇಲ್ಲಿವೆ
ಕನ್ನಡ
ಚಿತ್ರರಂಗದ
ಕೆಲವು
ಮೊದಲುಗಳು
ಯಾಕೆ ಅಂದಾಗ "ಇಂಗ್ಲೀಷ್ ಸಿನಿಮಾ ನೋಡಿ ಕನ್ನಡ ಸಿನಿಮಾ ಮಾಡ್ಬೇಕು ಎನ್ನುತ್ತೀರಲ್ಲ" ಎಂದು ಡಾ. ರಾಜ್‌ಕುಮಾರ್ ಹೇಳಿದ್ದರಂತೆ. ಆದರೆ ದೊರೆ ಅವರು ನೀವು ಹ್ಞೂಂ ಎನ್ನಿ ನಾವು ಮಾಡಿ ತೋರಿಸುತ್ತೇನೆ ಎಂದರಂತೆ. ಅಣ್ಣಾವ್ರು ಒಪ್ಪಿಕೊಂಡರಂತೆ. ಆ ರೀತಿ ಶುರುವಾಯಿತು ಭಾರತದ ಮೊದಲ ಬಾಂಡ್ ಸಿನಿಮಾ 'ಜೇಡರ ಬಲೆ' ಪ್ರೀ ಪ್ರೊಡಕ್ಷನ್ ವರ್ಕ್.

'ಜೇಡರ ಬಲೆ' ಶುರುವಾಗಿದ್ದು ಹೇಗೆ?
ಸಾಕಷ್ಟು ಜೇಮ್ಸ್ ಬಾಂಡ್ ಪುಸ್ತಕಗಳನ್ನು ಓದಿ ದೊರೆ ಹಾಗೂ ಭಗವಾನ್ 'ಜೇಡರ ಬಲೆ' ಚಿತ್ರದ ಕಥೆ, ಚಿತ್ರಕಥೆ ಬರೆಯಲು ಆರಂಭಿಸಿದ್ದರು. ಇತ್ತ ಡಾ. ರಾಜ್ ಸಹೋದರನ ಜೊತೆ ನಾಲ್ಕೈದು ಬಾರಿ ಥಿಯೇಟರ್‌ಗೆ ಹೋಗಿ ಹಾಲಿವುಡ್ ಜೇಮ್ಸ್ ಬಾಂಡ್ ಸಿನಿಮಾಗಳನ್ನು ನೋಡಿ ಪಾತ್ರಕ್ಕಾಗಿ ತಯಾರಿ ನಡೆಸಿದ್ದರು. ನಾಯಕನ ಸ್ಟೈಲ್, ಬಾಡಿ ಲಾಂಗ್ವೇಜ್ ಹೇಗಿರುತ್ತೆ? ಅನ್ನುವುದನ್ನೆಲ್ಲಾ ಗಮನಿಸೋಕೆ ಶುರು ಮಾಡಿದ್ದರು. 2 ಲಕ್ಷದ 25 ಸಾವಿರ ರೂ. ಬಜೆಟ್‌ನಲ್ಲಿ 'ಜೇಡರ ಬಲೆ' ಸಿನಿಮಾ ನಿರ್ಮಾಣ ಆಗಿತ್ತು.

ದಾಖಲೆ ಬರೆದ 'ಜೇಡರ ಬಲೆ'
ಜನವರಿ 12, 1968ರಲ್ಲಿ 'ಜೇಡರ ಬಲೆ' ಸಿನಿಮಾ ತೆರೆ ಕಂಡಿತ್ತು. ಥೇಟ್ ಜೇಮ್ಸ್ ಬಾಂಡ್ ಸ್ಟೈಲ್‌ನಲ್ಲೇ ಅಣ್ಣಾವ್ರು ಮಿಂಚಿದ್ದರು. CID 999 ಪಾತ್ರದಲ್ಲಿ ಮೋಡಿ ಮಾಡಿದ್ದರು. 3ನೇ ಕ್ಲಾಸ್ ಓದಿದ್ದ ಅಣ್ಣಾವ್ರನ್ನು ಬಾಂಡ್ ಅವತಾರದಲ್ಲಿ ನೋಡಿ ಪ್ರೇಕ್ಷಕರು ಬೆರಗಾಗಿದ್ದರು. ಅಲ್ಲಿವರೆಗೂ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಸಿನಿಮಾಗಳಲ್ಲಿ ಮಾತ್ರ ಡಾ. ರಾಜ್‌ಕುಮಾರ್ ನಟಿಸಿದ್ದರು. ಬಾಂಡ್ ಆಗಿ ಅವರ ಬಾಡಿ ಲಾಂಗ್ವೇಜ್, ಸ್ಟೈಲ್, ಆಕ್ಷನ್ ಎಲ್ಲಾ ನೋಡಿ ಹುಬ್ಬೇರಿಸಿದ್ದರು. ಆರ್ಟ್ ಡೈರೆಕ್ಟರ್ ಚಲಂ ಕೆಲಸ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ಆಟೊಮ್ಯಾಟಿಕ್ ಆಗಿ ಮಂಚ ತಿರುಗುವುದು, ಬಾಗಿಲುಗಳು ಓಪನ್ ಆಗುವುದು ಹೀಗೆ ಹಲವು ಚಮತ್ಕಾರಗಳನ್ನು ಚಿತ್ರದಲ್ಲಿ ತೋರಿಸಿದ್ದರು. ಇದೆಲ್ಲಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿತ್ತು.

ಡಬ್ಬಿಂಗ್ ರೈಟ್ಸ್ 4 ಲಕ್ಷಕ್ಕೆ ಮಾರಾಟ
ಅಷ್ಟರಲ್ಲಾಗಲೇ ಬೇರೆ ಭಾಷೆಗಳಲ್ಲಿ ಸ್ಪೈ ಥ್ರಿಲ್ಲರ್ ಸಿನಿಮಾಗಳನ್ನು ಮಾಡುವ ಪ್ರಯತ್ನಗಳು ನಡೆದಿತ್ತು. ಆದರೆ ಪಕ್ಕಾ ದೇಸಿ ಬಾಂಡ್ ಸ್ಟೈಲ್‌ನಲ್ಲಿ ಸ್ಪೈ ಥ್ರಿಲ್ಲರ್ ಸಿನಿಮಾ ಮೊದಲು ರೂಪುಗೊಂಡಿದ್ದು ಕನ್ನಡದಲ್ಲಿ. 'ಜೇಡರ ಬಲೆ' ಸೂಪರ್ ಹಿಟ್ ಆಗಿತ್ತು. ಅವತ್ತಿನ ಕಾಲಕ್ಕೆ ಚಿತ್ರದ ಡಬ್ಬಿಂಗ್ ರೈಟ್ಸ್ 4 ಲಕ್ಷ ಕ್ಕೆ ಮಾರಾಟವಾಗಿ ದಾಖಲೆ ಬರೆದಿತ್ತು. ಕ್ಯಾಬರೆ ಡ್ಯಾನ್ಸ್‌ನ ಕೂಡ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ವಿಭಿನ್ನ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿತ್ತು. ಇದು ಪರಭಾಷೆಗಳಲ್ಲಿ ಬಾಂಡ್ ಸಿನಿಮಾಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತ್ತು.

CID 999 ಸರಣಿಯ 4 ಚಿತ್ರಗಳು
'ಜೇಡರ ಬಲೆ' ಸಕ್ಸಸ್ ನಂತರ ಡಾ. ರಾಜ್ ಮಾಡಿದ್ದ CID 999 ಪಾತ್ರ ಜನಪ್ರಿಯವಾಗಿತ್ತು. ಮುಂದೆ ಇದೇ ಪಾತ್ರವನ್ನು 'ಗೋವಾದಲ್ಲಿ CID 999', 'ಆಪರೇಷನ್ ಜಾಕ್‌ಪಾಟ್‌ನಲ್ಲಿ CID 999', ಹಾಗೂ 'ಆಪರೇಷನ್ ಡೈಮಂಡ್ ರಾಕೆಟ್' ಸಿನಿಮಾಗಳಲ್ಲಿ ಮುಂದುವರೆಸಲಾಯಿತು. ಒಂದೇ ಪಾತ್ರವನ್ನು ಹೀಗೆ 3 ಸಿನಿಮಾಗಳಲ್ಲಿ ಮುಂದುವರೆಸಿದ್ದು ಭಾರತೀಯ ಚಿತ್ರರಂಗದಲ್ಲೇ ಮೊದಲ ಪ್ರಯತ್ನ ಎನ್ನಿಸಿಕೊಂಡಿತ್ತು. ಮೊದಲ 3 ಸಿನಿಮಾ ಕಪ್ಪು ಬಿಳುಪಿಲ್ಲಿ ಬಂದಿದ್ದರೆ 'ಆಪರೇಷನ್ ಡೈಮಂಡ್ ರಾಕೆಟ್' ಕಲರ್‌ನಲ್ಲಿ ಮೂಡಿ ಬಂದಿತ್ತು. ಈ ಸಿನಿಮಾ ನಂತರ 'ಆಪರೇಷನ್ ಗೋಲ್ಡನ್ ಗ್ಯಾಂಗ್' ಎನ್ನುವ ಮತ್ತೊಂದು ಸಿನಿಮಾವನ್ನು ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿರ್ಮಾಣವಾಗಲಿಲ್ಲ.

ಬೇರೆ ಭಾಷೆಗಳಲ್ಲಿ ಸಕ್ಸಸ್ ಸಿಗಲಿಲ್ಲ
'ಜೇಡರ ಬಲೆ' ಸಿನಿಮಾ ನೋಡಿ ಮಲಯಾಳಂನಲ್ಲಿ ಪ್ರೇಮ್ ನಜೀರ್, ತೆಲುಗಿನಲ್ಲಿ ಕೃಷ್ಣ, ತಮಿಳಿನಲ್ಲಿ ಜೈಶಂಕರ್, ಹಿಂದಿಯಲ್ಲಿ ರಾಜೇಶ್ ಖನ್ನಾ ಬಾಂಡ್ ಸಿನಿಮಾಗಳನ್ನು ಮಾಡುವ ಸಾಹಸ ಮಾಡಿದ್ದರು. ಆದರೆ ಕನ್ನಡದಲ್ಲಿ ಸಿಕ್ಕ ಸಕ್ಸಸ್ ಬೇರೆ ಭಾಷೆಗಳಲ್ಲಿ ಸಿಗಲಿಲ್ಲ. ಅದಾಗಲೇ ಅಣ್ಣಾವ್ರ ಬಾಂಡ್ ಸಿನಿಮಾಗಳ ಡಬ್ ವರ್ಷನ್ ನೋಡಿದ್ದವರಿಗೆ ಬೇರೆ ನಟರು ಆ ಪಾತ್ರಗಳಲ್ಲಿ ಇಷ್ಟವಾಗಲಿಲ್ಲ. ಅದಕ್ಕೆ ಹೇಳಿದ್ದು ಭಾರತಕ್ಕೋಬ್ಬರೇ ಜೇಮ್ಸ್ ಬಾಂಡ್. ಅದು ನಮ್ಮ ಡಾ. ರಾಜ್‌ಕುಮಾರ್ ಎಂದು.