For Quick Alerts
  ALLOW NOTIFICATIONS  
  For Daily Alerts

  2ನೇ ಲಾಕ್‌ಡೌನ್‌ನಲ್ಲಿ ಸಪ್ತಪದಿ ತುಳಿದ ಸಿನಿಮಾ ತಾರೆಯರು

  |

  ಕೊರೊನಾ ವೈರಸ್ ಎರಡನೇ ಅಲೆಯ ಭೀತಿ ಹಿನ್ನೆಲೆ ಲಾಕ್‌ಡೌನ್ ಆಗಿತ್ತು. ಈಗ ನಿಧಾನವಾಗಿ ರಾಜ್ಯಗಳು ಅನ್‌ಲಾಕ್ ಪ್ರಕ್ರಿಯೆ ಆರಂಭಿಸಿದೆ. ಈ ಲಾಕ್‌ಡೌನ್ ಸಮಯದಲ್ಲಿ ಹಲವು ಸೆಲೆಬ್ರಿಟಿಗಳು ದಾಂಪತ್ಯ ಜೀವನ ಪ್ರವೇಶಿಸಿದರು. ಕೇವಲ ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ವಿವಾಹವನ್ನು ಮಾಡಿಕೊಂಡರು.

  ಇನ್ನು ಕೆಲವರು ಜನರು ಸೇರಬಹುದು ಎಂಬ ಆತಂಕದಿಂದ ಗೌಪ್ಯವಾಗಿ ಮದುವೆ ಮಾಡಿಕೊಂಡು, ನಂತರ ಪ್ರಕಟಿಸಿದರು. ಕಳೆದ ವರ್ಷ ಲಾಕ್‌ಡೌನ್‌ ವೇಳೆ ಕಾಜಲ್ ಅಗರ್‌ವಾಲ್, ರಾಣಾ ದಗ್ಗುಬಾಟಿ, ನಿತಿನ್, ನಿರ್ಮಾಪಕ ದಿಲ್ ರಾಜು, ಸಾಹೋ ನಿರ್ದೇಶಕ ಸುಜಿತ್, ವನಿತಾ ವಿಜಯ್ ಕುಮಾರ್ ಸೇರಿದಂತೆ ಹಲವು ಹೊಸ ಜೀವನ ಆರಂಭಿಸಿದರು. ಈಗ 2021ರ ಲಾಕ್‌ಡೌನ್‌ ಸಮಯದಲ್ಲಿ ನೂತನ ಬಾಳಿಗೆ ಕಾಲಿಟ್ಟ ಸೆಲೆಬ್ರಿಟಿಗಳ ಯಾರ್ ಯಾರು ಎಂಬ ವಿವರ ಇಲ್ಲಿದೆ. ಮುಂದೆ ಓದಿ....

  ಮದುವೆಯಾದ 'ಉಲ್ಲಾಸ-ಉತ್ಸಾಹ' ನಾಯಕಿ ಯಾಮಿ ಗೌತಮ್ಮದುವೆಯಾದ 'ಉಲ್ಲಾಸ-ಉತ್ಸಾಹ' ನಾಯಕಿ ಯಾಮಿ ಗೌತಮ್

  ದಾನೀಶ್ ಸೇಠ್ ವಿವಾಹ

  ದಾನೀಶ್ ಸೇಠ್ ವಿವಾಹ

  ಭಾರತದ ಸ್ಟ್ಯಾಂಡ್ ಅಪ್ ಕಾಮಿಡಿಯನ್, ನಿರೂಪಕ ಹಾಗೂ ಸಿನಿಮಾ ನಟ ದಾನೀಶ್ ಸೇಠ್ ಜೂನ್ 9 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ಅವರನ್ನು ರಿಜಿಸ್ಟರ್ ಮ್ಯಾರೇಜ್ ಆದರು.

  ಯಾಮಿ ಗೌತಮ್ ಮದುವೆ

  ಯಾಮಿ ಗೌತಮ್ ಮದುವೆ

  ಬಾಲಿವುಡ್‌ ನಟಿ ಯಾಮಿ ಗೌತಮ್ ಜೂನ್ 5 ರಂದು ಬಹುಕಾಲದ ಗೆಳೆಯ ಆದಿತ್ಯ ಧಾರ್ ಜೊತೆ ವಿವಾಹವಾದರು. ಆದಿತ್ಯ ಧಾರ್ ಸೂಪರ್ ಹಿಟ್ ''ಉರಿ'' ಚಿತ್ರ ನಿರ್ದೇಶಿಸಿದ್ದರು. ಯಾಮಿ ಗೌತಮ್ ಕನ್ನಡದಲ್ಲಿಯೂ ನಟಿಸಿದ್ದಾರೆ. 2009ರಲ್ಲಿ ತೆರೆಕಂಡ 'ಉಲ್ಲಾಸ ಉತ್ಸಾಹ' ಸಿನಿಮಾದಲ್ಲಿ ನಟ ಗಣೇಶ್‌ ಜೊತೆ ಕಾಣಿಸಿಕೊಂಡಿದ್ದರು.

  ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ವರಿಸಿದ ದಾನೀಶ್ ಸೇಠ್ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ವರಿಸಿದ ದಾನೀಶ್ ಸೇಠ್

  ಪ್ರಣಿತಾ ಸರಳ ವಿವಾಹ

  ಪ್ರಣಿತಾ ಸರಳ ವಿವಾಹ

  ಕನ್ನಡದ ಖ್ಯಾತ ನಟಿ ಪ್ರಣಿತಾ ಉದ್ಯಮಿ ನಿತಿನ್ ರಾಜು ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಮೇ 31 ರಂದು ಕನಕಪುರದ ರೆಸಾರ್ಟ್‌ವೊಂದರಲ್ಲಿ ಪ್ರಣಿತಾ ವಿವಾಹವಾದರು. ಕೋವಿಡ್ ಇದ್ದ ಕಾರಣ ಸರಳವಾಗಿ ಮದುವೆ ಮಾಡಿಕೊಳ್ಳಬೇಕಾಯಿತು ಎಂದು ನಂತರ ಸ್ಪಷ್ಟನೆ ನೀಡಿದರು.

  ಎಂಟು ವರ್ಷದ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಮಿಲನಾ-ಕೃಷ್ಣಎಂಟು ವರ್ಷದ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಮಿಲನಾ-ಕೃಷ್ಣ

  ಕೊರೊನಾ ಭೀತಿಯಲ್ಲೇ ಸಪ್ತಪದಿ ತುಳಿದ ಚಂದನ್-ಕವಿತಾ

  ಕೊರೊನಾ ಭೀತಿಯಲ್ಲೇ ಸಪ್ತಪದಿ ತುಳಿದ ಚಂದನ್-ಕವಿತಾ

  ಕೊರೊನಾ ವೈರಸ್ ಭೀತಿಯ ನಡುವೆಯೂ ಬಿಗ್ ಬಾಸ್ ಖ್ಯಾತಿಯ ಕವಿತಾ ಗೌಡ ಮತ್ತು ನಟ ಚಂದನ್ ಕುಮಾರ್ ಸಪ್ತಪದಿ ತುಳಿದರು. ಮೇ 14 ರಂದು ಬೆಂಗಳೂರಿನಲ್ಲಿ ಇವರಿಬ್ಬರ ವಿವಾಹ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಿತು.

  ಜ್ವಾಲಾ ಗುಟ್ಟ-ವಿಷ್ಣು ವಿಶಾಲ್

  ಜ್ವಾಲಾ ಗುಟ್ಟ-ವಿಷ್ಣು ವಿಶಾಲ್

  ತಮಿಳು ಚಲನಚಿತ್ರ ನಟ ವಿಷ್ಣು ವಿಶಾಲ್ ಮತ್ತು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾಗುಟ್ಟಾ ಎರಡನೇ ವಿವಾಹ ಮಾಡಿಕೊಂಡರು. ಕೋವಿಡ್ ಭೀತಿಯ ನಡುವೆಯೇ ಏಪ್ರಿಲ್ 23 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ಬಿಗ್ ಬಾಸ್ ಆಶಿತಾ ಚಂದ್ರಪ್ಪ ಮದುವೆ

  ಬಿಗ್ ಬಾಸ್ ಆಶಿತಾ ಚಂದ್ರಪ್ಪ ಮದುವೆ

  ಕಿರುತೆರೆ ಖ್ಯಾತ ನಟಿ ಆಶಿತಾ ಚಂದ್ರಪ್ಪ ಮಾರ್ಚ್ 31 ರಂದು ವೈವಾಹಿಕ ಬದುಕಿಗೆ ಕಾಲಿಟ್ಟರು. ರೋಹನ್ ರಾಘವೇಂದ್ರ ಎನ್ನುವವರ ಜೊತೆ ಆಶಿತಾ ವೈವಾಹಿಕ ಬದುಕು ಆರಂಭಿಸಿದರು.

  ಮೆಹ್ರಿನ್ ನಿಶ್ಚಿತಾರ್ಥ

  ಮೆಹ್ರಿನ್ ನಿಶ್ಚಿತಾರ್ಥ

  ದಕ್ಷಿಣ ಭಾರತದ ಖ್ಯಾತ ಯುವ ನಟಿ ಮೆಹ್ರೀನ್ ಪಿರ್ಝಾದಾ, ರಾಜಕಾರಣಿ ಭವ್ಯ ಬಿಷ್ಣೋಯಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾರ್ಚ್ 12 ರಂದು ಜೈಪುರದಲ್ಲಿ ಎಂಗೇಜ್‌ಮೆಂಟ್ ನೆರವೇರಿದೆ.

  ಎಸ್ ನಾರಾಯಣ್ ಪುತ್ರನ ಮದುವೆ

  ಎಸ್ ನಾರಾಯಣ್ ಪುತ್ರನ ಮದುವೆ

  ಕನ್ನಡದ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪವನ್ ಕುಮಾರ್ ಫೆಬ್ರವರಿ 22 ರಂದು ದಾಂಪತ್ಯ ಜೀವನ ಆರಂಭಿಸಿದರು. ಬೆಂಗಳೂರಿನಲ್ಲಿ ನಡೆದ ಈ ವಿವಾಹದಲ್ಲಿ ಪವಿತ್ರಾ ಜೊತೆ ಸಪ್ತಪದಿ ತುಳಿದರು.

  ದಿಯಾ ಮಿರ್ಜಾ ಎರಡನೇ ಮದುವೆ

  ದಿಯಾ ಮಿರ್ಜಾ ಎರಡನೇ ಮದುವೆ

  ಬಾಲಿವುಡ್ ನಟಿ ದಿಯಾ ಮಿರ್ಜಾ ಎರಡನೇ ಮದುವೆಯಾದರು. ವೈಭವ್ ರೇಖಿ ಜೊತೆ ಫೆಬ್ರವರಿ 15 ರಂದು ವೈವಾಹಿಕ ಬದುಕು ಆರಂಭಿಸಿದರು. ಈ ವಿವಾಹಕ್ಕೆ ಇಬ್ಬರ ಮದುವೆಗೆ ಕುಟುಂಬದವರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದರು.

  ಗುಟ್ಟಿನ ಮದುವೆಯ ಬಗ್ಗೆ ಮಾತನಾಡಿದ ಪ್ರಣೀತಾ | Filmibeat Kannada
  ಕೃಷ್ಣ-ಮಿಲನ ಮದುವೆ

  ಕೃಷ್ಣ-ಮಿಲನ ಮದುವೆ

  ಕನ್ನಡದ ಖ್ಯಾತ ನಟ ಕೃಷ್ಣ ಮತ್ತು ಮಿಲನ ನಾಗರಾಜ್ ಫೆಬ್ರವರಿ 14 ರಂದು ಸಪ್ತಪದಿ ತುಳಿದರು. ಸುಮಾರು ಏಂಟು ವರ್ಷ ಪ್ರೀತಿ ಎರಡೂ ಮನೆಯವರನ್ನು ಒಪ್ಪಿಸಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನ ಆರಂಭಿಸಿದರು.

  English summary
  List of Indian Celebrities Married in 2021 amid Coronavirus second wave Lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X