Don't Miss!
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Automobiles
ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ತೋತಾಪುರಿ'ಯಿಂದ 'ಬನಾರಸ್'ವರೆಗೆ: 2022ರಲ್ಲಿ ನಿರೀಕ್ಷೆ ಹುಟ್ಟುಹಾಕಿ ಮುಗ್ಗರಿಸಿದ ಚಿತ್ರಗಳ ಪಟ್ಟಿ
ನೋಡ ನೋಡುತಲೇ 2022ರ ವರ್ಷ ಮುಗಿದು 2023 ಶುರುವಾಗುವ ಸಮಯ ಹತ್ತಿರ ಬರ್ತಿದೆ. ಈ ವರ್ಷ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜೋರಾಗಿ ಸದ್ದು ಮಾಡಿವೆ. KGF- 2 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ರೆ, 'ಕಾಂತಾರ' 400 ಕೋಟಿಗೂ ಅಧಿಕ ಗಳಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು.
'ಜೇಮ್ಸ್', 'ವಿಕ್ರಾಂತ್ ರೋಣ', '777 ಚಾರ್ಲಿ' ಸಿನಿಮಾಗಳು ಸಹ ನೂರಾರು ಕೋಟಿ ಕಲೆಕ್ಷನ್ ಮಾಡಿ ಗಮನ ಸೆಳೆಸಿತ್ತು. ಅದೇ ರೀತಿ ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾಗಳು ಈ ವರ್ಷ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ. ಸ್ಟಾರ್ ನಟರ ಸಿನಿಮಾಗಳೇ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿ ಒಂದೇ ವಾರಕ್ಕೆ ಥಿಯೇಟರ್‌ನಿಂದ ಎತ್ತಂಗಡಿಯಾದ ಉದಾಹರಣೆಗಳು ಇವೆ. ಟೀಸರ್, ಟ್ರೈಲರ್, ಸಾಂಗ್ಸ್‌ನಿಂದ ಇಂಪ್ರೆಸ್ ಮಾಡಿದ ಸಿನಿಮಾಗಳು ತೆರೆಮೇಲೆ ಮ್ಯಾಜಿಕ್ ಮಾಡಲೇಯಿಲ್ಲ.
ಈ
ವರ್ಷ
ವಿವಾಹ
ಬಂಧನಕ್ಕೆ
ಸಿಲುಕಿದ
ಸ್ಯಾಂಡಲ್‌ವುಡ್
ಸೆಲೆಬ್ರಿಟಿಗಳಿವರು
ಸಿನಿಮಾ ಸಕ್ಸಸ್ ಸೂತ್ರ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಅದು ಗೊತ್ತಿದ್ದರೆ ಯಾವ ಸಿನಿಮಾ ಕೂಡ ಸೋಲುತ್ತಿರಲಿಲ್ಲ ಅನ್ನಿಸುತ್ತದೆ. ಪ್ರೇಕ್ಷಕರು ಯಾವ ಚಿತ್ರವನ್ನು ಯಾವ ಕಾರಣಕ್ಕೆ ಒಪ್ಪಿಕೊಳ್ಳುತ್ತಾರೆ ಎಂದು ಹೇಳುವುದು ಕಷ್ಟ. ಪ್ರೇಕ್ಷಕರ ನಾಡಿ ಮಿಡಿತ ಅರಿತು ಸಿನಿಮಾ ಮಾಡಬೇಕು ಎನ್ನುವವರು ಇದ್ದಾರೆ.

ನಡೆಯಲಿಲ್ಲ ಬೋಪಣ್ಣ ಮ್ಯಾಜಿಕ್
ಸ್ಯಾಂಡಲ್‌ವುಡ್ ಹಠವಾದಿ ಕ್ರೇಜಿಸ್ಟಾರ್ ಡಾ. ರವಿಚಂದ್ರನ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ 'ರವಿಬೋಪಣ್ಣ'. ಸ್ವತಃ ರವಿಚಂದ್ರನ್ ಚಿತ್ರಕಥೆ, ಸಂಭಾಷಣೆ, ಸಂಗೀತ, ಸಾಹಿತ್ಯ ಬರೆದು ಸಿನಿಮಾ ನಿರ್ದೇಶಿಸಿ, ನಿರ್ಮಿಸಿ ನಟಿಸಿದ್ದರು. ರಾಧಿಕಾ ಕುಮಾರಸ್ವಾಮಿ ಹಾಗೂ ಕಾವ್ಯಾ ಶೆಟ್ಟಿ ನಾಯಕಿಯರಾಗಿ ಮಿಂಚಿದ್ದರು. ಆಗಸ್ಟ್ 12ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಸೋಲುಂಡಿತ್ತು. ಅದೇ ದಿನ ತೆರೆಗಪ್ಪಳಿಸಿದ 'ಗಾಳಿಪಟ- 2' ಸೂಪರ್ ಹಿಟ್ ಆಗಿತ್ತು. ಕ್ರೇಜಿಸ್ಟಾರ್ ಮತ್ತೆ ಎದ್ದು ಬರುವ ಮಾತುಗಳನ್ನಾಡಿದ್ದಾರೆ.

'ಮಾನ್ಸೂನ್ ರಾಗ' ಗೆಲ್ಲಲಿಲ್ಲ
ಈ ಹಿಂದೆ 'ಪುಷ್ಪಕ ವಿಮಾನ' ಸಿನಿಮಾ ಮಾಡಿ ಗೆದ್ದಿದ್ದ ಅದೇ ತಂಡ 'ಮಾನ್ಸೂನ್ ರಾಗ' ಸಿನಿಮಾ ಕಟ್ಟಿಕೊಟ್ಟಿತ್ತು. ಚಿತ್ರದಲ್ಲಿ ಡಾಲಿ ಧನಂಜಯ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದರು. ಚಿತ್ರದಲ್ಲಿ ಸೆಕ್ಸ್ ವರ್ಕರ್ ಆಗಿ ಚಾಲೆಂಜಿಂಗ್ ರೋಲ್‌ನಲ್ಲಿ ರಚಿತಾ ಮಿಂಚಿದ್ದರು. ಚಿತ್ರದ ಟೀಸರ್, ಟ್ರೈಲರ್ ಸಾಂಗ್ಸ್ ಹಿಟ್ ಆಗಿತ್ತು. ಸಿನಿಮಾ ಕ್ಲಾಸಿಕ್ ಹಿಟ್ ಆಗುತ್ತೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಥಿಯೇಟರ್‌ಗಳಲ್ಲಿ ಸಿನಿಮಾ ಗೆಲ್ಲಲಿಲ್ಲ.

'ತೋತಾಪುರಿ' ರುಚಿಸಲಿಲ್ಲ
ದಸರಾ ಹಬ್ಬದ ಸಂಭ್ರಮದಲ್ಲಿ ಜಗ್ಗೇಶ್, ಡಾಲಿ ಧನಂಜಯ, ಸುಮನ್ ರಂಗನಾಥ್ ನಟನೆಯ 'ತೋತಾಪುರಿ' ಸಿನಿಮಾ ತೆರೆಗೆ ಬಂದಿತ್ತು. ಈ ಹಿಂದೆ ಜಗ್ಗಣ್ಣನ ಜೊತೆ 'ನೀರ್‌ದೋಸೆ' ಸಿನಿಮಾ ಮಾಡಿ ಗೆದ್ದಿದ್ದ ವಿಜಯ್ ಪ್ರಸಾದ್ ಈ ಬಾರಿ ಸೋಲುಂಡರು. ಸೆಪ್ಟೆಂಬರ್ 30ಕ್ಕೆ 'ತೋತಾಪುರಿ' ಜೊತೆಗೆ ಬಂದ 'ಕಾಂತಾರ' ಸಿನಿಮಾ ಸೆನ್ಸೇಷನ್ ಕ್ರಿಯೇಟರ್ ಮಾಡಿತ್ತು. ಆದರೆ ನವರಸ ನಾಯಕನ ಸಿನಿಮಾ ಮೊದಲ ವಾರವೇ ಪ್ರೇಕ್ಷಕರ ಬರ ಎದುರಿಸುವಂತಾಯಿತು. ಡಬಲ್ ಮೀನಿಂಗ್ ಡೈಲಾಗ್, 'ಬಾಗ್ಲು ತೆಗಿಮೇರಿ ಜಾನ್' ಸಾಂಗ್‌ನಿಂದ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲೇಯಿಲ್ಲ. ಚಿತ್ರದ ಸೀಕ್ವೆಲ್ ಕೂಡ ಮುಂದಿನ ದಿನಗಳಲ್ಲಿ ತೆರೆಗೆ ಬರಲಿದೆ.

ಪ್ರಥಮ ಚುಂಬನಂ ದಂತಭಗ್ನಂ
ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ 'ಬನಾರಸ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಜಯತೀರ್ಥ ನಿರ್ದೇಶನದ ಈ ಚಿತ್ರದಲ್ಲಿ ಸೋನಲ್ ಮಂತೆರಿಯೋ ನಾಯಕಿಯಾಗಿ ಮಿಂಚಿದ್ದರು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ದೊಡ್ಡಮಟ್ಟದಲ್ಲಿ ಪ್ರಮೋಷನ್, ಪ್ರೀ ರಿಲೀಸ್ ಈವೆಂಟ್ ನಡೆದಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದರು. ಚಿತ್ರದಲ್ಲಿ ಟೈಮ್ ಟ್ರಾವೆಲ್ ಕಥೆ ಹೇಳಲಾಗಿತ್ತು. ಝೈದ್ ನಟನೆಗೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಸಿನಿಮಾ ಮಾತ್ರ ಸದ್ದು ಮಾಡಲೇಯಿಲ್ಲ.

'ಪೆಟ್ರೋಮ್ಯಾಕ್ಸ್' ಬೆಳಗಲಿಲ್ಲ
ಡಬಲ್ ಮೀನಿಂಗ್ ಡೈಲಾಗ್ಸ್ ಇದ್ದ ಮಾತ್ರಕ್ಕೆ ಸಿನಿಮಾ ಗೆಲ್ಲಲ್ಲ ಎನ್ನುವುದು 'ಪೆಟ್ರೋಮ್ಯಾಕ್ಸ್' ಚಿತ್ರದಿಂದ ಮತ್ತೊಮ್ಮೆ ಸಾಬೀತಾಯಿತು. ವಿಜಯ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ನೀನಾಸಂ ಸತೀಶ್, ಹರಿಪ್ರಿಯಾ, ಕಾರುಣ್ಯಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಡಬಲ್ ಮೀನಿಂಗ್ ಡೈಲಾಗ್‌ಗಳಿಂದ ಟ್ರೈಲರ್ ಹಿಟ್ ಆಗಿತ್ತು. ದ್ವಂದ್ವಾರ್ಥದ ಡೈಲಾಗ್ಸ್ ಬಿಟ್ಟು ಬೇರೆ ಕಥೆಯನ್ನೇ ಚಿತ್ರದಲ್ಲಿ ಹೇಳಿದರೂ ಪ್ರಯೋಜನವಾಗಲಿಲ್ಲ. ಈ ಸಿನಿಮಾ ಸೋಲಿಗೆ ನಾನೇ ಕಾರಣ ಎಂದು ನಿರ್ದೇಶಕ ವಿಜಯ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಮೆಚ್ಚುಗೆ ಸಿಕ್ಕಿದ್ರು ಸಕ್ಸಸ್ ಸಿಗಲಿಲ್ಲ
ಮೊದಲ ದಿನ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಾತ್ರ ಸದ್ದು ಮಾಡಲಿಲ್ಲ. ಸುನಿ ನಿರ್ದೇಶನದ 'ಅವತಾರ ಪುರುಷ', ಶಿವಣ್ಣ - ಡಾಲಿ ನಟನೆಯ 'ಬೈರಾಗಿ', ಧನಂಜಯ ನಟಿಸಿದ್ದ ಸಸ್ಪೆನ್ಸ್ ಥ್ರಿಲ್ಲರ್ '24 ಅವರ್ಸ್', ರಿಷಬ್ ಶೆಟ್ಟಿ ನಟನೆಯ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರಗಳಿಗೂ ಇದೇ ಲಿಸ್ಟ್‌ಗೆ ಸೇರುತ್ತವೆ. ಇನ್ನು ರವಿಚಂದ್ರನ್ ಪುತ್ರ ವಿಕ್ರಂ(ತ್ರಿವಿಕ್ರಮ), ರಾಮ್‌ಕುಮಾರ್ ಪುತ್ರ ಧೀರೆನ್ (ಶಿವ 143) ನಟಿಸಿದ ಚೊಚ್ಚಲ ಚಿತ್ರಗಳು ಗೆಲ್ಲಲಿಲ್ಲ.