For Quick Alerts
  ALLOW NOTIFICATIONS  
  For Daily Alerts

  'ಸೆಕ್ಸಿ ಡಾಲ್' ಸಿಲ್ಕ್ ಸ್ಮಿತಾ ಹುಟ್ಟುಹಬ್ಬ: ನಟಿಯ ಬಗ್ಗೆ ಯಾರಿಗೂ ತಿಳಿಯದ ವಿಷಯಗಳು!

  By ಫಿಲ್ಮಿಬೀಟ್ ಡೆಸ್ಕ್
  |

  ನಟಿ, ಐಟಂ ಡ್ಯಾನ್ಸರ್ ಸಿಲ್ಕ್ ಸ್ಮಿತಾ ಹುಟ್ಟುಹಬ್ಬ ಇಂದು. ನಟಿ ಬದುಕಿದ್ದಿದ್ದರೆ ಇಂದಿಗೆ ಅವರಿಗೆ 62 ವರ್ಷಗಳಾಗಿರುತ್ತಿತ್ತು.

  ಸಾಧಾರಣ ಕುಟುಂಬದಿಂದ ಬಂದು ಅಸಾಧಾರಣ ಮಹಿಳೆಯಾಗಿ ಬೆಳೆದವರು ಸಿಲ್ಕ್ ಸ್ಮಿತಾ, ಆಕೆಯ ಜೀವನ ಕೆಲವರಿಗೆ ಸ್ಪೂರ್ತಿಯಂತೆ ಕಂಡರೆ ಕೆಲವರಿಗೆ ಅಸಹ್ಯ. ಯಾರ ಆಲೋಚನೆ ಹೇಗೆಯೇ ಇರಲಿ ಸಿಲ್ಕ್ ಸ್ಮಿತಾ ದಕ್ಷಿಣ ಭಾರತ ಚಿತ್ರರಂಗ ಇತಿಹಾಸದ ಪ್ರಮುಖ ನಟಿ ಎಂಬುದನ್ನು ಅಲ್ಲಗಳೆಯುವಂತಿಲ್ಲ.

  ಸಿನಿಮಾಗಳಲ್ಲಿ ಮಹಿಳೆಯರ ಪಾತ್ರವನ್ನು, ಮಹಿಳೆಯರ ಪ್ರಾಧಾನ್ಯತೆಯನ್ನು ಬದಲಾಯಿಸಿದ ಶ್ರೇಯ ಸಿಲ್ಕ್ ಸ್ಮಿತಾಗೆ ಸಲ್ಲಬೇಕು. ಇಂದು ಸಿಲ್ಕ್ ಸ್ಮಿತಾ ಹುಟ್ಟುಹಬ್ಬ. ಸಿಲ್ಕ್ ಸ್ಮಿತಾ ಜನಿಸಿದ್ದು ಡಿಸೆಂಬರ್ 02, 1960 ರಲ್ಲಿ. ಆಕೆಯ ಕುರಿತಾದ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ.

  ಗಂಡನ ಮನೆ ಬಿಟ್ಟು ಓಡಿಬಂದಿದ್ದೇಕೆ ಸಿಲ್ಕ್?

  ಗಂಡನ ಮನೆ ಬಿಟ್ಟು ಓಡಿಬಂದಿದ್ದೇಕೆ ಸಿಲ್ಕ್?

  * ಸಿಲ್ಕ್ ಸ್ಮಿತಾ ಜನಿಸಿದ್ದು ಆಂಧ್ರಪ್ರದೇಶದ ಎಲೂರಿನ ಕೊವ್ವಳ್ಳಿ ಗ್ರಾಮದಲ್ಲಿ. ತಂದೆ ರಾಮುಲು. ತಾಯಿ ಸರಸಮ್ಮ.

  * ಸಿಲ್ಕ್ ಸ್ಮಿತಾ ಮೂಲ ಹೆಸರು ವಿಜಯಲಕ್ಷ್ಮಿ ವಡ್ಲಪಟ್ಲ. ಓದಿದ್ದು ಕೇವಲ ನಾಲ್ಕನೇ ತರಗತಿ ವರೆಗೆ ಮಾತ್ರ.

  * ತನ್ನ ವಾರಗೆಯವರಿಗಿಂತಲೂ ಬೇಗ ಫ್ರೌಡಾವಸ್ಥೆ ತಲುಪಿದ ಮಗಳ ಮೇಲೆ ಊರವರ ಕಣ್ಣು ಬೀಳತೊಡಗಿದಾಗ ಬೇಗನೆ ಮದುವೆ ಮಾಡಿ ಬಿಟ್ಟರು ಸಿಲ್ಕ್ ಸ್ಮಿತಾ ಪೋಷಕರು.

  * ಆದರೆ ಗಂಡನ ಮನೆಯಲ್ಲಿ ಹಿಂಸೆ ತಾಳಲಾರದೆ ಮನೆಬಿಟ್ಟು ಓಡಿ ಹೋದರು ಸಿಲ್ಕ್ ಸ್ಮಿತಾ.

  ಹಿಟ್ಟಿನ ಗಿರಣಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಸಿಲ್ಕ್

  ಹಿಟ್ಟಿನ ಗಿರಣಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಸಿಲ್ಕ್

  * ಮನೆಬಿಟ್ಟು ಓಡಿಬಂದ ಸಿಲ್ಕ್ ಸ್ಮಿತಾ ಹಿಟ್ಟಿನ ಗಿರಣಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಆ ಹಿಟ್ಟಿನ ಗಿರಣಿ ಎವಿಎಮ್ ಸ್ಟುಡಿಯೋ ಬಳಿಯೇ ಇತ್ತು.

  * ಸಿನಿಮಾ ಬಗ್ಗೆ ಕುತೂಹಲ ಇದ್ದ ಸಿಲ್ಕ್ ಸ್ಮಿತಾ ಶೂಟಿಂಗ್ ನೋಡುವ ಸಲುವಾಗಿ ಎಂದು ನಟಿಯೊಬ್ಬಾಕೆಗೆ ಟಚ್‌ ಅಪ್ ಕಲಾವಿದೆಯಾಗಿ ಸೇರಿಕೊಂಡರು.

  * ಹಾಗೆಯೇ ಎವಿಎಂ ಸ್ಟುಡಿಯೋ ಒಳಗೆ ಪರಿಚಯಗಳು ಬೆಳೆಯುತ್ತಾ ಸಾಗಿದಂತೆ. ಕೆಲವು ಸಿನಿಮಾಗಳಲ್ಲಿ ಎಕ್ಟ್ರಾ ಆಗಿ ಕಾಣಿಸಿಕೊಂಡರು.

  ಇಂಗ್ಲೀಷ್ ಕಲಿತ ಸಿಲ್ಕ್ ಸ್ಮಿತಾ

  ಇಂಗ್ಲೀಷ್ ಕಲಿತ ಸಿಲ್ಕ್ ಸ್ಮಿತಾ

  * ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಮಿತಾರನ್ನು ನಿರ್ದೇಶಕ ವಿನು ಚಕ್ರವರ್ತಿ ತಮ್ಮ ಸುಪರ್ಧಿಗೆ ತೆಗೆದುಕೊಂಡು ತಮ್ಮ ಪತ್ನಿಯ ಮೂಲಕ ಸಿಲ್ಕ್ ಸ್ಮಿತಾಗೆ ನೃತ್ಯಾಭ್ಯಾಸ ಮಾಡಿಸಿದರು. ಇಂಗ್ಲೀಷ್ ಸಹ ಕಲಿಸುವ ಯತ್ನ ಮಾಡಿಸಿದರು. ಅದರಲ್ಲಿ ಸಫಲವೂ ಆದರು.

  * ನಾಯಕಿಯಾಗುವ ಆಸೆಯಿಂದ ಸಿಲ್ಕ್ ಸ್ಮಿತಾ ಸಹ ನೃತ್ಯಾಭ್ಯಾಸ ಮಾಡಿದರು. ಆದರೆ ಸಿಲ್ಕ್ ಸ್ಮಿತಾರ ಮಾದಕ ಲುಕ್‌ನಿಂದಾಗಿ ಅವರಿಗೆ ಮಾದಕ ನಟಿಯ ಪಾತ್ರಗಳೇ ಧಕ್ಕಿದವು.

  * ಯಾವುದೇ ಹಿಂಜರಿಕೆ ಇಲ್ಲದೆ ಸಿಲ್ಕ್ ಸ್ಮಿತಾ ಆ ಪಾತ್ರಗಳನ್ನು ಒಪ್ಪಿಕೊಂಡು ನಟಿಸಿದರು. ಕ್ಯಾಬರೇ ನೃತ್ಯಗಳನ್ನು ಮಾಡಿದರು. ಅದೆ ಅವರಿಗೆ ದೊಡ್ಡ ಹೆಸರು, ಬೇಡಿಕೆ, ಹಣ ಗಳಿಸಿಕೊಟ್ಟಿತು.

  ಸಿಲ್ಕ್ ಸ್ಮಿತಾ ಹೆಸರು ಬಂದಿದ್ದು ಹೇಗೆ?

  ಸಿಲ್ಕ್ ಸ್ಮಿತಾ ಹೆಸರು ಬಂದಿದ್ದು ಹೇಗೆ?

  * 1979ರಲ್ಲಿ ಮೂಡಿಬಂದ 'ವಂಡಿಚಕ್ರಮ್' ಚಿತ್ರದಲ್ಲಿನ ಪಾತ್ರವಾದ 'ಸಿಲ್ಕ್' ಹೆಸರಿನಿಂದ ಸಿಲ್ಕ್ ಸ್ಮಿತಾ ಎಂಬ ಹೆಸರು ಪ್ರಖ್ಯಾತಗೊಂಡಿತು. ಅಲ್ಲಿನಿಂದ ಆಕೆಯ ಹೆಸರು ಸಿಲ್ಕ್ ಸ್ಮಿತಾ ಎಂದೇ ಆಗಿಬಿಟ್ಟಿತು. ನಿರ್ದೇಶಕ ಆಂಥೊನಿ ಸ್ಮಿತಾ ಎಂಬ ಹೆಸರು ಇಟ್ಟಿದ್ದರು.

  * ಸಿಲ್ಕ್ ಸ್ಮಿತಾ ಹಾಡು ಇದ್ದರಷ್ಟೆ ಸಿನಿಮಾ ಓಡುವುದು ಎಂಬ ಪರಿಸ್ಥಿತಿ 80 ರ ದಶಕದಲ್ಲಿ ಸೃಷ್ಟಿಯಾಗಿಬಿಟ್ಟಿತು. ದೊಡ್ಡ ನಟರಿಗೂ ಸಿಲ್ಕ್ ಸ್ಮಿತಾ ಬೇಕಾಗಿತ್ತು.

  * ಫ್ಲಾಪ್ ಆಗಿದ್ದ ಸಿನಿಮಾಗಳಿಗೆ ಸಿಲ್ಕ್ ಸ್ಮಿತಾ ಹಾಡನ್ನು ಸೇರಿಸಿ ಮರು ಬಿಡುಗಡೆ ಮಾಡಲಾಯ್ತು. ಅವೂ ಸಹ ಚಿತ್ರ ಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಂಡಿತು.

  * ಸಿನಿಮಾಗಳ ಪೋಸ್ಟರ್‌ನಲ್ಲಿ ನಾಯಕ ನಟನ ಚಿತ್ರಗಳಿಗಿಂತಲೂ ದೊಡ್ಡದಾಗಿ ಸಿಲ್ಕ್ ಸ್ಮಿತಾ ಫೋಟೊ ಹಾಕಲಾಗುತ್ತಿತ್ತು.

  * ಕನ್ನಡ, ತೆಲುಗು, ಮಲಯಾಳಂ, ತಮಿಳು ಹೀಗೆ ಹಲವು ಭಾಷೆಗಳಲ್ಲಿ ಸಿಲ್ಕ್ ಸ್ಮಿತಾ ನಟಿಸಿದ್ದಾರೆ. ಕ್ಯಾಬರೆ ನೃತ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ.

  ಸಿಲ್ಕ್ ಸ್ಮಿತಾ ಸಾವು ಆಗಿದ್ದು ಹೇಗೆ?

  ಸಿಲ್ಕ್ ಸ್ಮಿತಾ ಸಾವು ಆಗಿದ್ದು ಹೇಗೆ?

  * ಡಿಸ್ಕೋ ಶಾಂತಿ ಹಾಗೂ ಇನ್ನಿತರ ನಟಿಯರ ಎಂಟ್ರಿ ಚಿತ್ರರಂಗಕ್ಕೆ ಆಗುತ್ತಲೂ ಹಾಗೂ ನಾಯಕ ನಟರುಗಳು ಕೆಲವರು ಸಿಲ್ಕ್ ಸ್ಮಿತಾ ಹಾಡುಗಳಿಗೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದ ಮೇಲೆ ಅವರಿಗೆ ಬೇಡಿಕೆ ಕಡಿಮೆಯಾಯಿತು.

  * ಸಿನಿಮಾದ ನಾಯಕಿಯರೇ ಗ್ಲಾಮರಸ್ ಆಗಿ ನಟಿಸಲು ಆರಂಭಿಸಿದ್ದರಿಂದ ಸಿಲ್ಕ್‌ಗೆ ಅವಕಾಶಗಳು ಕಡಿಮೆಯಾದವು.

  * ಸಿಲ್ಕ್ ಸ್ಮಿತಾ ಬಹಳ ಸಿಟ್ಟಿನ ವ್ಯಕ್ತಿ, ಆರೋಗೆಂಟ್ ಎಂಬೆಲ್ಲ ಮಾತುಗಳು ಸಹ ಚಿತ್ರರಂಗದಲ್ಲಿ ಕೇಳಲು ಆರಂಭವಾಯ್ತು. ಆದರೆ ಆಕೆಯ ಗೆಳೆಯರು, ಹತ್ತಿರದವರು ಇದನ್ನು ಇಂದಿಗೂ ಒಪ್ಪರು.

  * ಅವಕಾಶಗಳು ಕಡಿಮೆಯಾಗುತ್ತಾ ಬಂದಂತೆ ಮದ್ಯ ಹಾಗೂ ಸಿಗರೇಟಿನ ಚಟವೂ ಸಿಲ್ಕ್‌ಗೆ ಹೆಚ್ಚಾಯಿತು.

  * ಸೆಪ್ಟೆಂಬರ್ 26, 1996 ರಂದು ಸಿಲ್ಕ್ ಸ್ಮಿತಾ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು. ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಬಹಳ ಕುಡಿದಿದ್ದರೆಂಬುದು ಗೊತ್ತಾಯಿತು. ಒಂದು ಡೆತ್ ನೋಟ್ ಸಹ ದೊರೆತಿದ್ದಾದರೂ ಅದರಲ್ಲಿನ ಅಂಶಗಳು ಹೊರಬೀಳಲಿಲ್ಲ.

  English summary
  Actress Silk Smitha Birthday today: Here is some interesting things about her. She was a bold woman.
  Friday, December 2, 2022, 13:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X