For Quick Alerts
  ALLOW NOTIFICATIONS  
  For Daily Alerts

  ಜೇಬಿನಲ್ಲಿ ಮೊಬೈಲ್ ಇದ್ದಂತೆ ಕಾಂಡೋಮೂ ಇರಲಿ

  By Rajendra
  |

  ಜೇಬಿನಲ್ಲಿ ಸದಾ ಮೊಬೈಲ್ ಫೋನ್ ಇದ್ದಂತೆ ಜೊತೆಗೆ ಕಾಂಡೋಮ್‌ಗಳನ್ನು ಇಟ್ಟುಕೊಳ್ಳಿ ಎಂದು ಮೋಹಕ ತಾರೆ ಅನುಷ್ಕಾ ಶೆಟ್ಟಿ ಸಲಹೆ ನೀಡಿದ್ದಾರೆ. ಏಡ್ಸ್ ನಿಯಂತ್ರಣದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಯುವಕರಿಗೆ ಈ ಕಿವಿಮಾತು ಹೇಳಿದರು. ಹೈದರಾಬಾದ್‌ನಲ್ಲಿ ಈ ಕಾರ್ಯಕ್ರಮವನ್ನು ನಿಮ್ಮಗಡ್ಡ ಪ್ರಸಾದ್ ಸಂಸ್ಥೆ ಆಯೋಜಿಸಿತ್ತು.

  ಈಗ ಯುವಕರು ಹೆಚ್ಚಾಗಿ ವಿವಾಹ ಪೂರ್ವ ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರನ್ನು ಸರಿದಾರಿಗೆ ತರಲು ಹಾಗೂ ಅವರಿಗೆ ಸೂಕ್ತ ಶಿಕ್ಷಣ ನೀಡಲು ಸಾಕಷ್ಟು ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ. ಆದರೆ ಅಂಕಿಅಂಶಗಳನ್ನು ನೋಡಿದಾಗ ಗಾಬರಿ ಹುಟ್ಟಿಸುವಂತಿದ್ದು, ದೇಶದಲ್ಲಿ ಏಡ್ಸ್ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

  ಏಡ್ಸ್ ರೋಗವನ್ನು ಕಡೆಗಣಿಸುತ್ತಿರುವುದೇ ಈ ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕೆಂದರೆ, ಮೊಬೈಲ್ ಫೋನ್‌ಗಳಂತೆ ಕಾಂಡೋಮ್‌ಗಳನ್ನು ಸದಾ ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು. ಏಡ್ಸ್ ಮಹಾಮಾರಿ ಹೊಡೆದೋಡಿಸಲು ಇರುವ ದಾರಿ ಇದೊಂದೇ. ಶಾಲಾ, ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡವ ಬಗ್ಗೆಯೂ ಅನುಷ್ಕಾ ಒತ್ತಿ ಹೇಳಿದ್ದಾರೆ.

  English summary
  Sensuous actress Anushka Shetty advised the youngsters to keep condom ready with them. Because nowadays many of them having premarital sex with unknown persons. Keep condoms in your pocket like cellphones to reduce the risk says Anushka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X