»   » ನಮ್ ದೇವ್ರ ಹೆಸ್ರು ಕೆಡ್ಸಿದ್ರೆ ಮರ್ಡರ್ : ವಿಷ್ಣು ಸೇನೆ

ನಮ್ ದೇವ್ರ ಹೆಸ್ರು ಕೆಡ್ಸಿದ್ರೆ ಮರ್ಡರ್ : ವಿಷ್ಣು ಸೇನೆ

Posted By:
Subscribe to Filmibeat Kannada

"ದ್ವಾರಕೀಶ್ ಇರುವುದು ವ್ಯಾಪಾರಿ ಬುದ್ಧಿ. ದುಡ್ಡು ಮಾಡುವ ಆಸೆಯಿಂದ ವಿಷ್ಣುವರ್ಧನ್ ಹೆಸರು ಬಳಸಿಕೊಳ್ಳುತ್ತಿದ್ದಾರೆ. ವಿಷ್ಣುವರ್ಧನ ಹೆಸರಿನಲ್ಲಿ ನಾವೇ ಒಂದು ಸಿನಿಮಾ ನಿರ್ಮಾಣ ಮಾಡುತ್ತೇವೆ" ಎಂದು ಭಾರತಿ ವಿಷ್ಣುವರ್ಧನ್ ಅವರು ಮಾಧ್ಯಮಗಳ ಮುಂದೆ ಹೇಳಿರುವುದು ಸರ್ವವಿದಿತ.

ಆದರೆ, ನೆನ್ನೆ ಮಾಧ್ಯಮಗಳಲ್ಲಿ ಈ ಸುದ್ದಿಪ್ರಸಾರವಾದ ಕೂಡಲೇ ರೊಚ್ಚಿಗೆದ್ದ ವಿಷ್ಣುವರ್ಧನ್ ಅವರ ಅಭಿಮಾನಿಗಳು ವಿಷ್ಣು ಅವರ ನಿವಾಸದೆದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದು ಕೆಟ್ಟ ಸಂದೇಶ ರವಾನೆ ಮಾಡಿದ್ದಂತಾಗಿದೆ. ಅಲ್ಲದೆ, ಸುದ್ದಿವಾಹಿನಿಗಳು ಪದೇ ಪದೇ ಅ ಸುದ್ದಿಯನ್ನೇ ಪ್ರಸಾರ ಮಾಡುವುದರಿಂದ ಸಣ್ಣ ಕಿಡಿಗೆ ತುಪ್ಪ ಸುರಿದ್ದಂತಾಗುತ್ತದೆ ಎಚ್ಚರ.

ಅತ್ತ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ 'ಪ್ರೊಡಕ್ಷನ್ ನಂ.47' ಎಂಬ ಹೆಸರಿನಲ್ಲಿ ಚಿತ್ರದ ಮಹೂರ್ತ ಸಾಂಗವಾಗಿ ನೆರವೇರಿದೆ. ಇತ್ತ ವಿಷ್ಣುಸೇನಾ ಕಾರ್ಯಕರ್ತರು ದ್ವಾರಕೀಶ್ ಮೇಲಿನ ಹಳೆ ದ್ವೇಷವನ್ನು ಮುಂದು ಮಾಡಿಕೊಂಡು ಗುಡುಗಿದ್ದಾರೆ.

ವಿಷ್ಣು ಎಂದೂ ತನಗಾಗಿ ಒಂದು ಸಂಘ ಕಟ್ಟಿ, ಗುಡಿ ಕಟ್ಟಿ ಪೂಜೆ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದವರಲ್ಲ. ಸಂಗೀತ ಅಭಿರುಚಿವುಳ್ಳವರಿಗಾಗಿ ಕರೋಕೆ ತಂಡ, ಕ್ರೀಡಾಭಿಮಾನಿಗಳಿಗಾಗಿ ಕ್ರಿಕೆಟ್ ಪಂದ್ಯ, ಹುಟ್ಟುಹಬ್ಬದಂದು ಬಡವರಿಗೆ ಬಟ್ಟೆಬರೆ ಹೊಟ್ಟೆ ತುಂಬಾ ಊಟ ಹಾಕಿ ಅಭಿಮಾನಿಗಳ ಆಶೀರ್ವಾದ ಬೇಡುತ್ತಿದ್ದ ವಿಷ್ಣುವರ್ಧನ್ ನಿಜವಾಗಿಯೂ ಎಲ್ಲಾ ವಿವಾದಗಳಿಂದ ದೂರವಿದ್ದವರು.

ಆದರೆ,'ವಿಷ್ಣುವರ್ಧನ' ಚಿತ್ರ ಶೀರ್ಷಿಕೆಯ ಬಗ್ಗೆ ಯಾವುದೇ ವಿವೇಚನೆ ಇಲ್ಲದೆ ಕುಡಿದುಕೊಂಡು ಬಂದಿದ್ದ ಒಂದಷ್ಟು ಅಭಿಮಾನಿಗಳು ವಿಷ್ಣುವರ್ಧನ್ ಹೆಸರು ಕೊಡಿಸಲು ಹೋದರೆ ಅವನು ಯಾರೇ ಇರ್ಬೌದು ಮರ್ಡರ್ ಮಾಡ್ಬಿಡ್ತೀವಿ. ಸ್ಟುಡಿಯೋದಲ್ಲಿ ನಮ್ ದೇವ್ರ ಗುಡಿ ಕಾರ್ಯ ಹೇಗೆ ನಡೆದಿದೆ ಎಂದು ನೋಡೊಕೆ ಬರದಿದ್ದವರೆಲ್ಲ ಈಗ ಸಿನಿಮಾ ಮಾಡೋಕೆ ಹೊರಟ್ಟಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.

ಅವನೇನು ಮಾಡಿದ ದುಡ್ಡು ತೆಗೆದುಕೊಂಡು ಕೆಲ್ಸ ಮಾಡಿದ ಎಂದು ವಿಷ್ಣು ಅಣ್ಣನ ಬೈದು ಹೋಗಿದ್ದ ದ್ವಾರಕೀಶ್ ನಿಯತ್ತಿನ ಬಗ್ಗೆ ನಮಗೆ ಗೊತ್ತು ಎಂದು ಆಕ್ರೋಶದಿಂದ ಮಾಧ್ಯಮಗಳ ಮುಂದೆ ಬೇಕಾಬಿಟ್ಟಿ ಹಲಬುತ್ತಿದ್ದವರನ್ನು ವಿಷ್ಣು ಅಭಿಮಾನಿಗಳೆಂದು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.

ವೈಯಕ್ತಿಕವಾಗಿ ದ್ವಾರಕೀಶ್, ವಿಷ್ಣುವರ್ಧನ್ ಕುಟುಂಬದ ಸಮಸ್ಯೆ ಏನೇ ಇರಲಿ ಅದು ಬೀದಿಗಿಳಿದು, ಹುಚ್ಚು ಅಭಿಮಾನಿಗಳ ಪಿತ್ತ ನೆತ್ತಿಗೇರಿಸದ್ದಂತಾಗಲಿ, ವಿಷ್ಣುವರ್ಧನ ಶೀರ್ಷಿಕೆ ಬಗ್ಗೆ ಭಾರತಿ ಅವರೊಟ್ಟಿಗೆ ಮಾತನಾಡುತ್ತೇನೆ.

ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಅಭಿಮಾನಿಗಳು ತಾಳ್ಮೆಯಿರಲಿ, ಯಾರಿಗೂ ನೋವು ಮಾಡುವುದು ನಮ್ಮ ಉದ್ದೇಶವಲ್ಲ. ವಿಷ್ಣುವರ್ಧನ ಹೆಸರು ಸೂಚಿಸಿದ್ದು ನಾನೇ ಎಂದಿದ್ದಾರೆ.

ಆದ್ದರಿಂದ 'ವಿಷ್ಣುವರ್ಧನ'ನನ್ನು ಬಿಟ್ಟು ನಟ ಡಾ.ವಿಷ್ಣುವರ್ಧನ್ ಆದರ್ಶದ ಮಾರ್ಗಾದ್ಲ್ಲಿ ವಿಷ್ಣುಸೇನೆ ಸಾಗಿದರೆ ಅಗಲಿದ ಮಹಾನ್ ನಟನ ಆತ್ಮಕ್ಕೆ ಶಾಂತಿ ಸಿಕ್ಕಂತೆಯೇ ಸೈ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada