»   » ಹೊಸ ತಿರುವು ಪಡೆದ 'ಆದಿ 'ಪುರಾಣ

ಹೊಸ ತಿರುವು ಪಡೆದ 'ಆದಿ 'ಪುರಾಣ

Posted By:
Subscribe to Filmibeat Kannada

ಕನ್ನಡದ ಹೆಸರಾಂತ ನಟ ಮೈಸೂರು ಲೋಕೇಶ್ ಮಗ ಆದಿ ಲೋಕೇಶ್ ಯುವತಿಯೊಬ್ಬಳನ್ನು ವಂಚಿಸಿದ್ದಾಗಿ ಟಿವಿ 9 ಸುದ್ದಿ ವಾಹಿನಿ ವರದಿ ಮಾಡಿತ್ತು. ಈ ಸಂಬಂಧ ಆದಿ ಲೋಕೇಶ್ ಟಿವಿ 9 ವಿರುದ್ಧ ಬೆಂಗಳೂರು ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ. ತಮ್ಮನ್ನು ನೈಜ ಖಳ ನಟ ಎಂಬಂತೆ ಟಿವಿ 9ನಲ್ಲಿ ತೋರಿಸಲಾಗಿದೆ. ಅಷ್ಟೇ ಅಲ್ಲ ತಾವೊಬ್ಬ ಲಂಪಟ ಎಂಬಂತೆ ಬಿತ್ತರಿಸಲಾಗಿದೆ ಎಂಬು ಆದಿ ಲೋಕೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಆದಿ ಲೋಕೇಶ್ ತನ್ನನ್ನು ವಂಚಿಸಿದ್ದಾನೆ ಎಂದು ಶಾಲಿನಿ ಎಂಬ ಯುವತಿ ಟಿವಿ 9ನಲ್ಲಿ ಹೇಳಿಕೊಂಡಿದ್ದರು. ಮದುವೆಯಾಗುವುದಾಗಿ ನಂಬಿಸಿ ಆದಿ ಲೋಕೇಶ್ ಈಕೆಯಿಂದ 85 ಗ್ರಾಂ ಚಿನ್ನಾಭರಣ ತೆಗೆದುಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿತ್ತು. ಪೊಲೀಸರು ಈ ಚಿನ್ನಾಭರಣಗಳನ್ನು ಆದಿ ಲೋಕೇಶ್ ನಿಂದ ಈಕೆಗೆ ಮರಳಿಸಿದ್ದಾಗಿ ಟಿವಿ 9ನಲ್ಲಿ ಶಾಲಿನಿ ಹೇಳಿಕೊಂಡಿದ್ದರು.

ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮರು ದಿನ ತಮ್ಮ ಎರಡನೆ ಪತ್ನಿ ಅನುಷಾರೊಂದಿಗೆ ಆದಿ ಲೋಕೇಶ್ ಟಿವಿ 9 ಕಚೇರಿಗೆ ಭೇಟಿ ನೀಡಿ ಶಾಲಿನಿ ಮಾಡುತ್ತಿರುವ ಆಪಾದನೆ ಸುಳ್ಳು. ತಾನು ಆಕೆಯೊಂದಿಗೆ ಇಂಟರ್ನೆಟ್ ನಲ್ಲಿ ಚಾಟಿಂಗ್ ಮಾಡಿಲ್ಲ.ಪೊಲೀಸ್ ಠಾಣೆಯಲ್ಲಿ ವಿಷದ ಬಾಟಲಿ ಇಟ್ಟುಕೊಂಡು 85 ಗ್ರಾಂ ಚಿನ್ನ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಪೊಲೀಸರು ತಮ್ಮನ್ನು ಮಿಸುಕಾಡದಂತೆ ಮಾಡಿಬಿಟ್ಟರು.

ಕಡೆಗೆ 85 ಗ್ರಾಂ ಚಿನ್ನ ತಂದು ಕೊಟ್ಟರಷ್ಟೇ ನಿಮ್ಮನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ ಮುಚ್ಚಳಿಕೆ ಬರೆಸಿಕೊಂಡರು. ಆ ಪ್ರಕಾರ ಅವರು ತಮ್ಮ ಬಳಿ 85 ಗ್ರಾಂ ಚಿನ್ನಾಭರವನ್ನು ಆಕೆಗೆ ಕೊಡಿಸಿದ್ದಾರೆ. ಆಕೆ ಯಾರು ಎಂಬುದೇ ನನಗೆ ಗೊತ್ತಿಲ್ಲ. ಆಕೆಗೆ ಅಷ್ಟೆಲ್ಲಾ ಮೋಸವಾಗಿದ್ದರೆ ಆಕೆ ಮುಸುಕು ತೆಗೆದು ಮಾತನಾಡಬಹುದಲ್ಲಾ? ಎಂದು ಆದಿ ಪ್ರಶ್ನಿಸಿದ್ದರು. ಅಂತಹ ಪರಿಸ್ಥಿತಿ ಬಂದರೆ ಖಂಡಿತ ಮುಖ ತೋರಿಸುತ್ತೇನೆ ಎಂದು ಶಾಲಿನಿ ಉತ್ತರ ಕೊಟ್ಟಿದ್ದಾಳೆ.

ನಮ್ಮ ಮದುವೆ ಫೋಟೊಗಳೆ ಇಲ್ಲ. ಅಂತಹದ್ದು ನಾನು ಅನುಷಾ ಮದುವೆ ಫೋಟೋಗಳು ಇವರಿಗೆ ಎಲ್ಲಿ ಸಿಕ್ಕಿದವು? ಎಂದು ಆದಿ ಲೋಕೇಶ್ ಪ್ರಶ್ನಿಸಿದ್ದಾರೆ. ಅದಕ್ಕೆ ಶಾಲಿನಿ ಉತ್ತರ ಕೊಡುತ್ತಾ 'ಮೈಸೂರು ಕಹಳೆ' ಹಾಗೂ ಮೈಸೂರಿನ ಸ್ಥಳೀಯ ಪತ್ರಿಕೆಗಳಲ್ಲಿ ಬಂದ ಫೋಟೊಗಳನ್ನು ನೋಡಿದ ಬಳಿಕವೇ ಇವರಿಗೆ ಮದುವೆಯಾಗಿದೆ ಎಂದು ತಿಳಿದಿದ್ದು ಎಂದು ಹೇಳಿದ್ದಾರೆ. ಎಂಟು ವರ್ಷಗಳಿಂದ ಆದಿ ಲೋಕೇಶ್ ಗೊತ್ತು ಎಂದು ಹೇಳುತ್ತಿರುವ ಈಕೆ ಈಗ ಬರಲು ಕಾರಣವೇನು? ಎಂಬ ಪ್ರಶ್ನೆಗೂ ಮುಂದೆ ಯಾವುದೇ ಹುಡುಗಿಗೆ ಹೀಗೆ ಮೋಸ ಆಗಬಾರದು ಎಂಬ ಕಾರಣಕ್ಕೆ ಈಗ ಮುಂದೆ ಬಂದಿದ್ದೆನೆ ಎಂದಿದ್ದಾರೆ ಶಾಲಿನಿ.

ಪೊಲೀಸರ ಎದುರುಗಡೆಯೇ ನಮಗೆ ಮೋಸವಾಗಿದೆ. ಇದೊಂದು ಪೂರ್ವ ನಿಯೋಜಿತ ಸಂಜು ಎಂದು ಆದಿ ಲೋಕೇಶ್ ಟಿವಿ 9 ಜತೆ ಹೇಳಿಕೊಂಡಿದ್ದಾರೆ. ನನಗೆ ಇಂಟರ್ ನೆಟ್ ನಲ್ಲಿ ಚಾಟ್ ಮಾಡುವ ಅಭ್ಯಾಸವಿದೆ. ಆದರೆ ಯಾವುದೇ ಹುಡುಗಿಗೂ ಮೋಸ ಮಾಡಿಲ್ಲ.ಇದೆಲ್ಲಾ ನನ್ನ ಇಮೇಜ್ ಹಾಳು ಮಾಡಲು ಹೂಡಿದ ಸಂಚು ಎಂದು ಆದಿ ಲೋಕೇಶ್ ಹೇಳಿದ್ದಾರೆ.

ಆದರೆ ಶಾಲಿನಿ ಮಾತ್ರ ನನಗೆ ದುಡ್ಡಿನ ಆಸೆ ಇಲ್ಲ. ಲೋಕೇಶ್ ಇಮೇಜ್ ಹಾಳು ಮಾಡುವ ಉದ್ದೇಶವೇ ಇಲ್ಲ. ಕಷ್ಟದಲ್ಲಿದ್ದೇನೆ ಎಂದು ನನ್ನ ಬಳಿ ಆದಿ ಲೋಕೇಶ್ ಹೇಳಿಕೊಂಡು ಚಿನ್ನಾಭರಣ ತೆಗೆದುಕೊಂಡಿದ್ದರು. ಅವರಿಗೆ ಈಗಾಗಲೇ ಮದುವೆಯಾಗಿದೆ ಎಂದು ಗೊತ್ತಾದ ಮೇಲೆ ನ್ಯಾಯಕ್ಕಾಗಿ ಟಿವಿ 9 ಬಾಗಿಲು ತಟ್ಟಿದ್ದೇನೆ ಎಂದು ಶಾಲಿನಿ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಇಲ್ಲಿ ಯಾರಿಗೆ ಯಾರು ಅನ್ಯಾಯ ಮಾಡಿದ್ದಾರೆ ಎಂಬುದು ಗೊತ್ತಾಗಬೇಕಿದೆ. ಇದೀಗ ಈ ಪ್ರಕರಣ ಪೊಲೀಸ್ ಕಮೀಷನರ್ ಶಂಕರ ಬಿದರಿ ಅವರ ಮುಂದೆ ಬಂದಿದೆ. ಸತ್ಯಾ ಸತ್ಯತೆಗಳು ಏನು ಎಂಬುದು ತಿಳಿಯಬೇಕಾಗಿದೆ. ಬಿದರಿ ಅವರು ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಹೊರಬೀಳುವವರೆಗೂ ಆದಿ ಲೋಕೇಶ್ ಸುದ್ದಿಯನ್ನು ಬಿತ್ತರಿಸದಂತೆ ಟಿವಿ 9ಗೆ ಎಚ್ಚರಿಕೆ ನೀಡಲಾಗಿದೆ. ಆದರೆ ಆದಿ ಲೋಕೇಶ್ ಮಾತ್ರ ಮತ್ತೊಂದು ಸುದ್ದಿ ವಾಹಿನಿ ಸುವರ್ಣದ ಕದ ತಟ್ಟಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada