Just In
Don't Miss!
- Lifestyle
ವಾಸ್ತು ಪ್ರಕಾರ ನಿಮ್ಮ ಮನೆಯ ಬಣ್ಣ ಈ ರೀತಿ ಇದ್ದರೆ ಒಳ್ಳೆಯದು
- Automobiles
ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ
- News
ಡೊನಾಲ್ಡ್ ಟ್ರಂಪ್ರನ್ನು ಮತ್ತೆ ಕೆಣಕಿದ ಗ್ರೆಟಾ ಥನ್ಬರ್ಗ್
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- Finance
ದಿನದ ಗರಿಷ್ಠ ಮಟ್ಟದಿಂದ 500ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಿಚ್ಚ ಸುದೀಪ್‌ಗೂ ಜೋಗಿ ಪ್ರೇಮ್‌ಗೂ ಸಣ್ಣ ಕಿತ್ತಾಟ!
ಸರಿಸುಮಾರು ತಿಂಗಳ ಹಿಂದಿನ ಮಾತು. ಅಂದು ನಾಗವಾರದ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ಶಿವಣ್ಣನ ಮನೆಯಲ್ಲಿ ಇಡೀ ಕನ್ನಡ ಚಿತ್ರೋದ್ಯಮದ ಹೆಚ್ಚಿನ ಗಣ್ಯರು ಪಾಲ್ಗೊಂಡಿದ್ದರು. ಅಂದು ಸ್ವತಃ ಶಿವಣ್ಣ ಅಲ್ಲಿಗೆ ರವಿಚಂದ್ರನ್, ರಮೇಶ್, ಜಗ್ಗೇಶ್ ಮೊದಲಾದವರನ್ನು ಆಹ್ವಾನಿಸಿದ್ದರು.
ಅಂದು ಅಲ್ಲಿ ನಡೆದ ಚರ್ಚೆ ಏನೆಂದರೆ, ಶಿವಣ್ಣ ಇದೇ ಮಾರ್ಚ್ ಎರಡಕ್ಕೆ ಆಚರಿಸಿಕೊಳ್ಳುತ್ತಿರುವ ಮಹಾಶಿವರಾತ್ರಿ ಸಮಾರಂಭದಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಮತ್ತು ಯಾರ‍್ಯಾರು ಏನೇನು ಫರ್‌ಫಾರ್ಮ್ ಮಾಡುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆಸಲು. ಯಶ್, ಲೂಸ್ ಮಾದ ಯೋಗೀಶ್, ರಾಧಿಕಾ ಪಂಡಿತ್ ಮೊದಲಾದ ನಟ, ನಟಿಯರು ಶಿವಣ್ಣನ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕುವುದಾಗಿ ಹೇಳಿದರು.
ನಿಮಗೆ ಗೊತ್ತಿರಲಿ. ಇವೆಲ್ಲವೂ ಜೋಗಿ ಪ್ರೇಮ್ ಕೊಟ್ಟಿರುವ ಐಡಿಯಾ. ಅಂದರೆ, ಶಿವಣ್ಣನ ಹುಟ್ಟುಹಬ್ಬದ ಹೆಸರಲ್ಲಿ 'ಜೋಗಯ್ಯ' ಆಡಿಯೋ ರಿಲೀಸು. ಒಂಥರಾ ಸ್ವಾಮಿ ಕಾರ್ಯ ಸ್ವಕಾರ್ಯ!ಇಷ್ಟಾಗಿದ್ದರೆ ಇದು ಸುದ್ದಿಯಾಗುತ್ತಿರಲಿಲ್ಲ. ಎಲ್ಲಾ ಮೀಟಿಂಗ್ ಮುಗಿದು, ಇನ್ನೇನು ಎಲ್ಲರೂ ಹೊರಡಬೇಕು ಎನ್ನುವ ಹೊತ್ತಿಗೆ ಅಲ್ಲಿಗೆ ಉದ್ದುದ್ದ ಕಾಲುಗಳನ್ನಿಡುತ್ತ ಎಂಟ್ರಿ ಕೊಟ್ಟಿದ್ದಾರೆ ಕಿಚ್ಚ ಸುದೀಪ್.
ಅವರನ್ನು ನೋಡಿದ್ದೇ ತಡ, ಜೋಗಿ ಪ್ರೇಮ್ ಕೇಳಿಯೇಬಿಟ್ಟರು, ಅಲ್ಲಾ ಬಾಸ್.. ನೀವು ಸಿವಣ್ಣಂಗೋಸ್ಕರ ಏನ್ ಸ್ಪೆಸಲ್ ಪ್ರೋಗ್ರಾಮ್ ಮಾಡ್ತೀರಿ? ಏಳಿ ಬಾಸ್..ಸುದೀಪ್‌ಗೆ ಎಲ್ಲಿತ್ತೋ ಸಿಟ್ಟು.. ಹಲೋ ಸ್ವಾಮೀ.. ಶಿವಣ್ಣನಿಗೋಸ್ಕರ ಏನ್ ಮಾಡ್ಬೇಕು ಅಂತ ನಮಿಗ್ ಗೊತ್ತು. ಅದನ್ನ ನಿಮ್ಮಿಂದ ಹೇಳೀಸ್ಕೋಬೇಕಿಲ್ಲ. ನಿಮ್ ಸಿನ್ಮಾ ಪಬ್ಲಿಸಿಟಿಗೆ ಯಾಕ್ ಈ ಥರದ ಚೀಪ್ ಗಿಮಿಕ್ ಮಾಡ್ತೀರಾ?ಹೀಗೆ ಕೇಳಿದ್ದೇ ತಡ, ಜೋಗಿ ಪ್ರೇಮ್ ಪೆಚ್ಚು ಮೋರೆ ಹಾಕಿಕೊಂಡು, ರಕ್ಷಿತಾ ಕಡೆ ಮಿಕ ಮಿಕ ನೋಡತೊಡಗಿದರು!ಇದು ನಿಜಕ್ಕೂ ನಡೆದ ಸಂಗತಿ.. ಇದು ಗಾಸಿಪ್ ಸುದ್ದಿ ಖಂಡಿತಾ ಅಲ್ಲ!