ಸೌಮ್ಯಾಗೆ ಚೂರಿ ಇರಿತ: ಪೇಪರ್ ಮೇಲೆ ಕೇಸ್

ಹಲವಾರು ಆಂಧ್ರ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಿದ್ದರು. ಆದರೆ ಅವೆಲ್ಲಾ ತೆಲುಗು ನಟಿ ಸೌಮ್ಯ ಬೊಲ್ಲಪ್ರಗಡ ಎಂಬ ನಟಿಯ ಫೋಟೋ ಪ್ರಕಟಿಸಿದ್ದವು. ತೆಲುಗು ನಟಿಗೆ ಒಮ್ಮಿಂದೊಮ್ಮೆಲೆ ಫೋನ್ ಕರೆಗಳು ಬಂದಿವೆ. ಆಕೆ ಕೂಡ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಏನೆಲ್ಲಾ ಅದ್ವಾನ್ನಗಳು ಆಗಬೇಕೋ ಅವೆಲ್ಲಾ ಆಗಿ, ಕಡೆಗೂ ಸತ್ಯ ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಸ್ನಾನಮುಗಿಸಿ ಇನ್ನೇನು ಬೆಳಗಿನ ಉಪಹಾರ ಸೇವಿಸುವ ಅಂತಿದ್ದರೇನೋ ಅಷ್ಟರಲ್ಲಿ ಈಕೆಗೆ ಕರೆಗಳ ಮೇಲೆ ಕರೆಗಳು ರಿಂಗಣಿಸಿ ಸಾಕಪ್ಪಾ ಅನ್ನಿಸಿಬಿಟ್ಟಿದೆ. ಈ ಘಟನೆಯಿಂದ ರೋಸಿಹೋಗಿರುವ ಆಕೆ ತಪ್ಪು ಸುದ್ದಿಯನ್ನು ಪ್ರಕಟಿಸಿರುವ ಪತ್ರಿಕೆಗಳ ವಿರುದ್ಧ ಕೇಸು ಜಡಿಯುವುದಾಗಿ ಸಿಡಿದಿದ್ದಾರೆ.
ಕಡೆಗೆ ಬೇಸತ್ತ ತೆಲುಗು ನಟಿ ಸೌಮ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಚಾಕುವಿನಿಂದ ಇರಿದಿರುವುದು ನನಗಲ್ಲ ಎಂದಿದ್ದಾರೆ. ತಮ್ಮ ಬಗ್ಗೆ ತಪ್ಪು ಮಾಹಿತಿ ನೀಡಿದ ಸುದ್ದಿ ಪತ್ರಿಕೆಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿಯೂ ಸೌಮ್ಯ ಎಚ್ಚರಿಸಿದ್ದಾರೆ. ಇದು ನಡೆದ ಕತೆ. (ಏಜೆನ್ಸೀಸ್)


Click it and Unblock the Notifications











