»   » ನಟಿ ಜೊತೆ ನಿತ್ಯಾನಂದ ಸ್ವಾಮೀಜಿ ರಾಸಲೀಲೆ

ನಟಿ ಜೊತೆ ನಿತ್ಯಾನಂದ ಸ್ವಾಮೀಜಿ ರಾಸಲೀಲೆ

Posted By:
Subscribe to Filmibeat Kannada
ಮಾಡ್ರನ್ ಸ್ವಾಮಿಜಿ ಎಂದೇ ಖ್ಯಾತರಾಗಿರುವ ಸ್ವಾಮಿ ನಿತ್ಯಾನಂದ ಅವರು ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋವೊಂದು ಭಾರಿ ಕೋಲಾಹಲ ಉಂಟು ಮಾಡಿದೆ. ಸ್ವಾಮೀಜಿ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಚಿತ್ರವನ್ನು ಮುಂಚೂಣಿ ತಮಿಳು ಸುದ್ದಿ ವಾಹಿನಿ ಸನ್ ನ್ಯೂನ್ ಪ್ರಸಾರ ಮಾಡಿದ್ದು ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಾದ್ಯಂತ ತಲ್ಲಣ ಮೂಡಿಸಿದೆ. ವಿಶ್ವದಾದ್ಯಂತ ಸ್ವಾಮಿ ನಿತ್ಯಾನಂದ ಅವರಿಗೆ ಲಕ್ಷಾಂತರ ಭಕ್ತಾಧಿಗಳಿದ್ದು ಅವರೆಲ್ಲಾ ವಿಡಿಯೋ ನೋಡಿ ವಿಚಲಿತರಾಗಿದ್ದಾರೆ.

ಹೊರ ಜಗತ್ತಿಗೆ ಸ್ವಾಮಿ ನಿತ್ಯಾನಂದರು ಆಧ್ಯಾತ್ಮ ಗುರು ಎಂದೇ ಚಿರಪರಿಚಿತರು. ಇದೀಗ ಇವರು ನಟಿಯೊಬ್ಬಳೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿರುವ ವಿಡಿಯೋ ಚಿತ್ರಣ ಸನ್ ನ್ಯೂನ್ ಮೂಲಕ ಇಡೀ ಜಗತ್ತಿಗೆ ಬಿತ್ತರವಾಗಿದೆ. ವಿಡಿಯೋ ಚಿತ್ರಣದಲ್ಲಿ ನಟಿಯ ಮುಖವನ್ನು ಮಾಸ್ಕ್ ಮಾಡಲಾಗಿದ್ದು ಸ್ವಾಮೀಜಿ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳನ್ನು ತೋರಿಸಲಾಗಿದೆ. ಆದರೆ ನಟಿಯ ಹೆಸರನ್ನು ಬಹಿರಂಗಪಡಿಸದೆ, ಇಂಗ್ಲಿಷ್ ವರ್ಣಮಾಲೆಯ 'R' ಅಕ್ಷರದಿಂದ ನಟಿಯ ಹೆಸರು ಆರಂಭವಾಗುತ್ತದೆ ಎಂಬ ಸಣ್ಣ ಸುಳಿವನ್ನು ಸನ್ ನ್ಯೂಸ್ ಕೊಟ್ಟಿದೆ.

ಬಿಡದಿ:ನಿತ್ಯಾನಂದ ಸ್ವಾಮೀಜಿ ಆಶ್ರಮ ಧ್ವಂಸ

ವಿಶ್ವದಾದ್ಯಂತ ಇರುವ ನಿತ್ಯಾನಂತ ಸ್ವಾಮೀಜಿಯ ಅಪಾರ ಭಕ್ತರು ರಾಸಲೀಲೆಯ ವಿಡಿಯೋ ಚಿತ್ರಣವನ್ನು ನೋಡಿ ಮೂಕವಿಸ್ಮಿತರಾಗಿದ್ದಾರೆ. ಸ್ವಾಮೀಜಿಯ ರಾಸಲೀಲೆಯ ವಿಡಿಯೋ ಚಿತ್ರಣ ಅವರ ಹಿನ್ನೆಲೆ ಮತ್ತು ಜೀವನ ಶೈಲಿ ಕುರಿತು ಹಲವಾರು ಪ್ರಶ್ನೆಗಳನ್ನು ಎತ್ತಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಸಲೀಲೆಯಲ್ಲಿ ತೊಡಗಿಕೊಂಡ ನಟಿಯ ಹೆಸರನ್ನು ಕೆಲವು ಪತ್ರಿಕೆಗಳು ರಾಗಸುಧಾ ಎಂದುಮತ್ತೆ ಕೆಲವರು ರಂಜಿತಾ ಎಂದು ಅನುಮಾನ ವ್ಯಕ್ತಪಡಿಸಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಎಲ್ಲೂ ದಾಖಲಾಗಿಲ್ಲ.

ನಿತ್ಯಾನಂದ ಸ್ವಾಮೀಜಿಯವರ ನಿಜ ನಾಮಧೇಯ ರಾಜಶೇಖರನ್. ಬೆಂಗಳೂರು ಮತ್ತು ತಿರುವಣ್ಣಮಲೈನಲ್ಲಿ ಸ್ವಾಮೀಜಿಯ ಆಶ್ರಮಗಳಿವೆ. ತಮಿಳಿನ ನಕ್ಕೀರನ್ ಪತ್ರಿಕೆಯ ಪ್ರಕಾರ ಸ್ವಾಮೀಜಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿದ್ದ ನಟಿಯ ಹೆಸರು ರಂಜಿತಾ ಎನ್ನಲಾಗಿದೆ. ಈ ಘಟನೆ ಬಗ್ಗೆ ಸ್ವಾಮೀಜಿ ಆಶ್ರಮ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಜನಪ್ರಿಯ ಸಾಮಾಜಿಕ ತಾಣ 'ಯು ಟ್ಯೂಬ್' ನಲ್ಲೂ ರಾಸಲೀಲೆಯ ವಿಡಿಯೋವನ್ನು ಸೇರಿಸಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada