twitter
    For Quick Alerts
    ALLOW NOTIFICATIONS  
    For Daily Alerts

    ಶ್ವೇತನಾಗು ರೂಪದಲ್ಲಿ ಹೆಡೆಯೆತ್ತಿದ್ದ ಡಬ್ಬಿಂಗ್ ವಿವಾದ

    By Staff
    |

    'ಶ್ವೇತ ನಾಗರ' ರೂಪದಲ್ಲಿ ಕನ್ನಡ ಚಿತ್ರೋದ್ಯಮದ ಗಣ್ಯರನ್ನು ದೊಡ್ಡ ವಿವಾದವೊಂದು ಸುತ್ತ್ತಿಕೊಂಡಿದೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್, ಸಿನಿಮಾ ಅಕಾಡೆಮಿ ಸದಸ್ಯ ಎಚ್ ಎನ್ ಮಾರುತಿ ಮತ್ತು ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷ 'ಅಜಂತ' ನಾಗರಾಜ್ ವಿವಾದಕ್ಕೆ ತೆರೆ ಎಳೆಯಲು ಗುರುವಾರ ಪತ್ರಿಕಾಗೋಷ್ಠಿ ಕರೆದಿದ್ದರು.

    ಈ ಸಂದರ್ಭದಲ್ಲಿ 'ಶ್ವೇತ ನಾಗರ' ಚಿತ್ರವನ್ನು ತಾವು ಉದ್ದೇಶಪೂರ್ವಕವಾಗಿ ಕನ್ನಡಕ್ಕೆ ಡಬ್ಬಿಂಗ್ ಮಾಡಿಲ್ಲ ಎಂದು ಚಂದ್ರಶೇಖರ್ ಸ್ಪಷ್ಟಪಡಿಸಿದರು.ನಮಗೆ ಡಬ್ಬಿಂಗ್ ಚಿತ್ರ ಮಾಡುವ ಉದ್ದೇಶವಿರಲಿಲ್ಲ. ಡಬ್ಬಿಂಗ್ ಚಿತ್ರಗಳನ್ನು ಪ್ರೋತ್ಸಾಹಿಸಬೇಕೆಂದಾಗಲಿ, ನಿಷೇಧವಿರುವ ಡಬ್ಬಿಂಗ್ ಚಿತ್ರಗಳನ್ನು ಹಿಂಬಾಗಿಲ ಮೂಲಕ ತರುವುದಾಗಲಿ ನಮ್ಮ ಉದ್ದೇಶವಾಗಿರಲಿಲ್ಲ. ಎಲ್ಲೋ ತಪ್ಪಾಗಿದೆ ಎಂದರು.

    ಈ ರೀತಿಯ ಘಟನೆ ಮುಂದೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದು ಚಂದ್ರಶೇಖರ್ ತಿಳಿಸಿದರು. ಎಚ್ ಎನ್ ಮಾರುತಿ ಮಾತನಾಡುತ್ತಾ, ಈ ಸುದ್ದಿಯನ್ನು ಬರೆಯುವಾಗ ದಯವಿಟ್ಟು ನನ್ನ ಹೆಸರಿನೊಂದಿಗೆ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಎಂದು ಸೇರಿಸಬೇಡಿ ಎಂದು ವಿನಂತಿಸಿಕೊಂಡರು.ಅಂದಹಾಗೆ ಶ್ವೇತನಾಗ ಚಿತ್ರದಲ್ಲಿ ನಟಿ ಸೌಂದರ್ಯ, ಶರತ್ ಬಾಬು ಮತ್ತು ಅಬ್ಬಾಸ್ ನಟಿಸಿದ್ದರು.

    ಏನಿದು ಶ್ವೇತನಾಗರ ವಿವಾದ
    ಕನ್ನಡದಲ್ಲಿ ಡಬ್ಬ್ಬಿಂಗ್ ಚಿತ್ರಗಳಿಗೆ ನಿಷೇಧವಿದ್ದರೂ ಶ್ವೇತ ನಾಗರ ಚಿತ್ರ ಟಿವಿಯಲ್ಲಿ ಪ್ರಸಾರವಾದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಸುವರ್ಣ ವಾಹಿನಿ ಎರಡು ಸಲ ಈ ಚಿತ್ರವನ್ನು ಪ್ರಸಾರ ಮಾಡಿತ್ತು. ಮೂಲತಃ ಇದು ತೆಲುಗು (ಶ್ವೇತ ನಾಗು)ಚಿತ್ರವಾಗಿದ್ದು, ಅದರ ಸಂಭಾಷಣೆಯನ್ನಷ್ಟೇ ಕನ್ನಡಕ್ಕೆ ಬದಲಾಯಿಸಲಾಗಿತ್ತು. ಈ ಸಂಬಂಧ ಸುವರ್ಣ ವಾಹಿನಿ ನಿರ್ಮಾಪಕರ ವಿರುದ್ಧ ಕ್ರಮಕೈಗೊಳ್ಳುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿತ್ತು.

    ಕನ್ನಡ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಮಹೇಶ್ ಕೊಠಾರಿ ಎಂಬ ಮಧ್ಯವರ್ತಿಯಿಂದ ಮಾರಾಟ ಮಾಡಲಾಗಿತ್ತು. ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ದಶಕ ಹಿಂದೆ 'ಭಾರತ್ 2000' ಎಂಬ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ್ದರು. ಚಂದ್ರಶೇಖರ್, ಸಿಂಗ್ ಬಾಬು ಮತ್ತು ಎಚ್ ಎನ್ ಮಾರುತಿ ಹೊಸದಾಗಿ ನಿರ್ಮಾಣವಾಗಿರುವ ಕರ್ನಾಟಕ ಸಿನಿಮಾ ಅಕಾಡೆಮಿಯ ಸದಸ್ಯರು. ಇವರನ್ನು ಕ್ಷಮಿಸುವ ಅಧಿಕಾರ ಇರುವುದು ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಭರಣ ಅವರಿಗೆ ಮಾತ್ರ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Friday, July 3, 2009, 13:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X