twitter
    For Quick Alerts
    ALLOW NOTIFICATIONS  
    For Daily Alerts

    ಕಣಗಾಲ್ ಪ್ರಶಸ್ತಿಗೆ ನೋ ಥ್ಯಾಂಕ್ಸ್ ಎಂದ ಕಾರ್ನಾಡ್

    By Rajendra
    |

    ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಟ, ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದಗಿರೀಶ್ ಕಾರ್ನಾಡ್ ಒಲ್ಲೆ ಎಂದಿದ್ದಾರೆ. ಶುಕ್ರವಾರವಷ್ಟೇ (ಡಿ.3) ಗಿರೀಶ್ ಕಾರ್ನಾಡ್ ಅವರನ್ನು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಭಾರ್ಗವ ಘೋಷಿಸಿದ್ದರು.

    ಪತ್ರಿಕಾ ಪ್ರಕಟಣೆಯಲ್ಲಿ ಕಾರ್ನಾಡ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. "ಪ್ರಶಸ್ತಿ ನೀಡಿದ್ದಕ್ಕೆ ಆಯ್ಕೆ ಸಮಿತಿ ಅಧ್ಯಕ್ಷರಿಗೆ ಧನ್ಯವಾದಗಳು. ಆದರೆ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ " ಎಂದು ತಮ್ಮ ಅಸಮಾಧಾನವನ್ನು ಇ ಮೇಲ್ ಮೂಲಕ ರವಾನಿಸಿದ್ದಾರೆ.

    ಪ್ರಶಸ್ತಿಯನ್ನು ತಿರಸ್ಕರಿಸುತ್ತಿರುವ ಬಗ್ಗೆ ಕಾರ್ನಾಡ್ ಅವರು ಯಾವುದೇ ಕಾರಣವನ್ನೂ ನೀಡಿಲ್ಲ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯು ರು.2,00000 ನಗದು ಬಹುಮಾನ ಹಾಗೂ ಚಿನ್ನದ ಪದಕವನ್ನು ಒಳಗೊಂಡಿದೆ. ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆಯಲ್ಲಿ ನಡೆದಗೊಂದಲವೇ ಇದಕ್ಕೆ ಕಾರಣ ಎನ್ನಲಾಗಿದೆ.

    ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಭಾರ್ಗವ ಅವರು ಶುಕ್ರವಾರ ಪ್ರಶಸ್ತಿಗಳನ್ನು ಪ್ರಕಟಿಸಿದ್ದರು. ಜೀವಮಾನ ಸಾಧನೆಗಾಗಿ ಕೆಎಸ್ಆರ್ ದಾಸ್ ಅವರಿಗೆ ನೀಡಲಾಗಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಕೆಲ ಕ್ಷಣಗಳಲ್ಲಿಯೇ ಹಿಂದಕ್ಕೆ ಪಡೆದು ಅದನ್ನು ಗಿರೀಶ್ ಕಾರ್ನಾಡ್ ಅವರಿಗೆ ನೀಡಲಾಗಿತ್ತು.

    ದಾಸ್ ಅವರಿಗೆ ಪ್ರಶಸ್ತಿ ನೀಡಿದ್ದನ್ನು ಘೋಷಿಸಿದ ಕೂಡಲೆ ಪತ್ರಕರ್ತರಿಂದ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಅದನ್ನು ಕೂಡಲೆ ಹಿಂದೆ ಪಡೆದು ಅದನ್ನು ಕಾರ್ನಾಡ್ ಅವರಿಗೆ ನೀಡುವುದಾಗಿ ಭಾರ್ಗವ ಹೇಳಿದರು. ಕೆಎಸ್ಆರ್ ದಾಸ್ ಅವರು ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿಲ್ಲವೆಂಬುದು ಪತ್ರಕರ್ತರ ಆರೋಪವಾಗಿತ್ತು. ಇದನ್ನು ಭಾರ್ಗವ ಅವರು ಕೂಡ ನಂತರ ಒಪ್ಪಿಕೊಂಡಿದ್ದರು.

    English summary
    Jnanapeeth awardee and well known theater personality Girish Karnad rejects Puttanna Kanagal Award". Today he said that, would not accept the "Puttanna Kanagal Award" given by the Karnataka government. Karnad did not cite any reason for his decision.
    Saturday, December 4, 2010, 15:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X