»   » ಮಾರುಕಟ್ಟೆಗೆ ಬರಲಿದೆ ಕಾಮಿ ಸ್ವಾಮಿ ವಿಡಿಯೋ

ಮಾರುಕಟ್ಟೆಗೆ ಬರಲಿದೆ ಕಾಮಿ ಸ್ವಾಮಿ ವಿಡಿಯೋ

Posted By:
Subscribe to Filmibeat Kannada

ಇದು ತಮಾಷೆಯಲ್ಲ ಸ್ವಾಮಿ, ನಿತ್ಯಾನಂದನ ರಾಸಲೀಲೆ ವಿಡಿಯೋ ಶೀಘ್ರದಲ್ಲೆ ಮಾರುಕಟ್ಟೆಗೆ ದಾಂಗುಡಿಯಿಡಲಿದೆ. ಪ್ರಸಿದ್ಧ ಆಡಿಯೋ ಕಂಪನಿ ಆನಂದ್ ಆಡಿಯೋದವರು ಸ್ವಾಮಿ ನಿತ್ಯಾನಂದನ ರಾಸಲೀಲೆಯನ್ನು ವಿಡಿಯೋ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡಿಸಿದ್ದಾರೆ.

ಇದೇನಿದು ನಿತ್ಯಾನಂದನ ರಾಸಲೀಲೆ ವಿಡಿಯೋ ಹಕ್ಕುಗಳು ಆನಂದ್ ಆಡಿಯೋ ಪಾಲಾದವೆ?! ಎಂದು ಆಶ್ಚರ್ಯಪಡುವಂತಹದ್ದೇನು ಇಲ್ಲ. ಆನಂದ್ ಆಡಿಯೋದವರು 'ಕಾಮಿ ಸ್ವಾಮಿ' ಹೆಸರಿನಲ್ಲಿ ವಿಡಿಯೋ ಒಂದನ್ನು ತರುತ್ತಿದ್ದಾರೆ. ಮಾಸ್ಟರ್ ಹಿರಣ್ಣಯ್ಯ, ಮಿಮಿಕ್ರಿ ದಯಾನಂದ್ ಹಾಗೂ ವೆಂಕಟಾದ್ರಿ ಈ ವಿಡಿಯೋದ ಪಾತ್ರಧಾರಿಗಳು.

ಈ ವಿಡಿಯೋ ನಿರ್ದೇಶನದ ಜವಾಬ್ದಾರಿಯನ್ನು ದಯಾನಂದ್ ಹೊತ್ತಿದ್ದಾರೆ. ಕಾಮಿ ಸ್ವಾಮಿ ವಿಡಿಯೋ ಸಿಡಿ ಶೀಘ್ರದಲ್ಲೆ ಮಾರುಕಟ್ಟೆಗೆ ಬರಲಿದೆ ಎಂದು ಆನಂದ್ ಆಡಿಯೋ ಮಾಲೀಕ ಮೋಹನ್ ತಿಳಿಸಿದ್ದಾರೆ. ಈಗಾಗಲೆ ಸ್ವಾಮಿ ನಿತ್ಯಾನಂದನ ಬಗ್ಗೆ ಸಾಧು ಕೋಕಿಲ 'ಸ್ವಾಮೀಜಿ' ಹೆಸರಿನಲ್ಲಿ ಚಿತ್ರವೊಂದನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada