For Quick Alerts
  ALLOW NOTIFICATIONS  
  For Daily Alerts

  ಎಂಧಿರನ್ ಚಿತ್ರಮಂದಿರಗಳ ಮೇಲೆ ವಾಣಿಜ್ಯ ತೆರಿಗೆ ದಾಳಿ

  By Rajendra
  |

  ರಾಜ್ಯದಲ್ಲಿ ಬಿಡುಗಡೆ ಕಂಡಿರುವ 'ಎಂಧಿರನ್' ಚಿತ್ರದ ಟಿಕೆಟ್‌ಗಳನ್ನು ಮೂರರಿಂದ ನಾಲ್ಕು ಪಟ್ಟು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು 'ಎಂಧಿರನ್' ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

  ಟೆಕೆಟ್ ಮಾರಾಟದ ಬಗ್ಗೆ ಚಿತ್ರಮಂದಿರದ ಮಾಲೀಕರು ಸೂಕ್ತ ದಾಖಲೆಗಳನ್ನು ಒದಗಿಸುತ್ತಿಲ್ಲ ಎನ್ನಲಾಗಿದೆ. ಈ ಸಂಬಂಧ ಹೆಚ್ಚುವರಿ ಅಧಿಕಾರಿಗಳನ್ನು ವಾಣಿಜ್ಯ ತೆರಿಗೆ ಇಲಾಖೆ ನೇಮಿಸಿದ್ದು ನಿಖರ ಮಾಹಿತಿಗಳನ್ನು ಕಲೆಹಾಕುತ್ತಿದೆ. ರಜನಿಕಾಂತ್ ಮತ್ತು ಐಶ್ವರ್ಯ ರೈ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಟಿಕೆಟ್ ಗಳು ಈಗಾಗಲೆ ಮುಂಗಡ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

  ಪರಭಾಷಾ ಚಿತ್ರಗಳಿಗೆ ರಾಜ್ಯದಲ್ಲಿ ಶೇ.30ರಷ್ಟು ಮನರಂಜನಾ ತೆರಿಗೆ ವಿಧಿಸಲಾಗುತ್ತದೆ. 'ಎಂಧಿರನ್' ಒಟ್ಟಾರೆ ಗಳಿಕೆಯಲ್ಲಿ ರಾಜ್ಯದ ಬೊಕ್ಕಸಕ್ಕೆ 1/3 ಭಾಗದಷ್ಟು ಮನರಂಜನೆ ತೆರಿಗೆ ರೂಪದಲ್ಲಿ ಹರಿದುಬರುತ್ತಿದೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದ ವಿತರಣೆ ಹಕ್ಕುಗಳು ಕರ್ನಾಟಕದಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿವೆ.

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಾನುಸಾರ(25 ಚಿತ್ರಮಂದಿರಗಳಲ್ಲಿ) 'ಎಂಧಿರನ್' ಬಿಡುಗಡೆಯಾಗಿದೆ. ವಿತರಕರ ಜೇಬಿಗೆ ಇದರಿಂದ ಹೊಡೆತ ಬಿದ್ದಿದ್ದು, ಹೇಗಾದರೂ ಮಾಡಿ ಹೆಚ್ಚು ಹಣವನ್ನು ಲಫಟಾಯಿಸಬೇಕು ಎಂದು ಟಿಕೆಟ್ ದರವನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಇದೆ. ಇದರಿಂದ ವಿತರಕರಿಗೆ ಲಾಭವಾಗುತ್ತದೆಯೇ ವಿನಃ ರಾಜ್ಯ ಸರಕಾರಕ್ಕೆ ಹಾಗೂ ಪ್ರೇಕ್ಷಕರಿಗೆ ಯಾವುದೇ ವಿಧದಲ್ಲೂ ಎಳ್ಳಷ್ಟೂ ಲಾಭವಿಲ್ಲ. ಪ್ರತಿ ಟೆಕೆಟ್‌ಗೆ ರು.60ರಷ್ಟು ವಾಣಿಜ್ಯ ತೆರಿಗೆ ಇಲಾಖೆಯ ಕೈತಪ್ಪುತ್ತಿದೆ.

  ಗಾಂಧಿನಗರದ ಮೂಲಗಳ ಪ್ರಕಾರ, ಚಿತ್ರೋದ್ಯಮದಕೆಲವರು ಈಗಾಗಲೆ 'ಎಂಧಿರನ್' ಯಾವ್ಯಾವ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಎಂಬ ಮಾಹಿತಿಯನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳ ಕಿವಿಗೆ ಮುಟ್ಟಿಸಿದ್ದಾರೆ.

  ಯಾವ ಚಿತ್ರಮಂದಿರಗಳಲ್ಲಿ ಅವ್ಯವಹಾರ ನಡೆದಿದೆಯೋ ಅಲ್ಲೆಲ್ಲಾ ದಾಳಿ ಮಾಡಿದ್ದೇವೆ. ಅಂತಹ ಚಿತ್ರಮಂದಿರದ ಮಾಲೀಕರಿಗೆ ದಂಡ ವಿಧಿಸಿದ್ದೇವೆ. ಉತ್ತರಹಳ್ಳಿಯಲ್ಲಿರುವ ಎರಡು ಅವಳಿ ಜವಳಿ ಚಿತ್ರಮಂದಿರದ ಮಾಲೀಕರ ಮೇಲೆ ರು.5 ಲಕ್ಷ ದಂಡ ವಿಧಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X