»   »  ನಟಿ ಶ್ರುತಿ ಬದುಕು ಮತ್ತೆ ಅತಂತ್ರ; ಗಳಗಳ

ನಟಿ ಶ್ರುತಿ ಬದುಕು ಮತ್ತೆ ಅತಂತ್ರ; ಗಳಗಳ

By: *ದೇವಶೆಟ್ಟಿ ಮಹೇಶ್
Subscribe to Filmibeat Kannada

ನಿರ್ದೇಶಕ ಎಸ್.ಮಹೇಂದರ್‌ಗೆ ಸೋಡ ಚೀಟಿ ನೀಡಿ ಚಂದ್ರಚೂಡ್ ಅಲಿಯಾಸ್ ಚಕ್ರವರ್ತಿ ಜತೆ ಸಹ ಬಾಳ್ವೆ ನಡೆಸುತ್ತಿದ್ದ ನಟಿ ಶ್ರುತಿ ಬದುಕು ಮತ್ತೆ ಅತಂತ್ರವಾಗಿದೆ. ಸದ್ಯಕ್ಕೆ ಚಂದ್ರಚೂಡ್ ಕೂಡ ಆಕೆಯ ಜತೆ ಕಿತ್ತಾಡಿಕೊಂಡು ಮನೆಯಿಂದ ಹೊರ ಬಿದ್ದಿದ್ದಾನೆ. ಅಲ್ಲಿಗೆ ಶ್ರುತಿ ಕತೆ ತಬ್ಬಲಿಯು ನೀನಾದೆ ಮಗಳೇ....

ಮಹೇಂದರ್‌ಗೆ ಮಗಳನ್ನು ಸಾಕುವ ತಾಕತ್ತಿಲ್ಲ. ನನ್ನ ಎಲ್ಲ ವಿಷಯಗಳಲ್ಲಿ ಮೂಗು ತೂರಿಸುತ್ತಾರೆ. ಹಲವಾರು ಬಗೆ ಹರಿಯದ ಸಮಸ್ಯೆಗಳಿವೆ. ಮದುವೆಯಾದ ಹೊಸದರಲ್ಲಿಯೇ ವಿಚ್ಛೇದನ ನೀಡಲು ಮುಂದಾಗಿದ್ದೆ. ಆದರೆ ಧೈರ್ಯ ಸಾಲಲಿಲ್ಲ. ಆಗ ಮಾನಸಿಕ ಧೈರ್ಯ ನೀಡಿದ್ದು ಚಂದ್ರು. ನಾವಿಬ್ಬರೂ ಒಂದೇ ಜಾತಿ ಮತ್ತು ಹಳೆಯಮಿತ್ರರು. ನಮ್ಮಿಬ್ಬರ ಹೊಂದಾಣಿಕೆಯಾ ಗುತ್ತದೆ ಎಂದು ಆಕೆ ಹೇಳಿದ್ದರು.

ಅದೇ ಶ್ರುತಿ ಅದೇ ಚಂದ್ರುವನ್ನು ಮನೆಯಿಂದ ಹೊರ ಹಾಕಿದ್ದಾರೆ. ಕಾರಣ ಪತಿಯಲ್ಲದ ಪತಿ ಚಂದ್ರಚೂಡನ ಹಣದ ಹಪಹಪಿ. ಶ್ರುತಿಯ ಕಾಲ್ ಶೀಟ್ ಕೇಳಿಕೊಂಡು ಫೋನ್ ಮಾಡುವ ನಿರ್ದೇಶ ಕರನ್ನು ಮೊದಲು ಈತನೇ ಮಾತಾಡಿಸುತ್ತಿದ್ದ. ಹಣವನ್ನು ತನಗೇ ತಲುಪಿಸುವಂತೆ ಒತ್ತಾಯಿಸುತ್ತಿದ್ದ. ಹೊಸ ಗಂಡನಲ್ಲವೆ? ಎಲ್ಲವೂ ಚೆನ್ನಾಗಿತ್ತು. ಯಾವಾಗ ತನ್ನ ಹೆಸರಿಗೆ ಮಸಿ ಬಳಿಯುವುದು ಜಾಸ್ತಿಯಾ ಯಿತೊ ಶ್ರುತಿ ಮೆತ್ತಗೆ ಕಿರಿಕಿರಿ ಆರಂಭಿಸಿದ್ದಾರೆ. ಕೊನೆಗೆ ಮನೆ ಬಿಟ್ಟು ಕಳಿಸುವಷ್ಟು ವಿಷಯ ತಾರಕಕ್ಕೇರಿದೆ.

ಆಕೆಯ ಮನೆಯಿಂದ ಹೊರಬಂದಿರುವ ಚಂದ್ರು ಮತ್ತೆ ಮೊದಲ ಪತ್ನಿಯತ್ತ ಮುಖ ಮಾಡಿದ್ದಾನೆ. ವಿಚಿತ್ರ ಅಂದರೆ ಈಗಲೂ ಮೊದಲ ಪತ್ನಿಗೆ ಈತ ಡೈವೋರ್ಸ್ ನೀಡಿಲ್ಲ. ಮುಳುಗುತ್ತಿದ್ದ ದೋಣಿಯಲ್ಲಿ ಕುಳಿತು ಇನ್ನೇನು ಬದುಕು ಮುಗಿಯಿತು ಎನ್ನುವಾಗ ಪಕ್ಕದಲ್ಲಿ ಇನ್ನೊಂದು ದೋಣಿ ಬಂತು. ಅದಕ್ಕೆ ಹಾರಿ ಹೊಸ ಬದುಕನ್ನು ಕಂಡುಕೊಂಡೆ. ಅದು ತಪ್ಪಾ ಎಂದು ಚಂದ್ರುವನ್ನು ಅನಧಿಕೃತವಾಗಿ ವರಿಸಿದದಿನ ಶ್ರುತಿ ಅಮಾಯಕವಾಗಿ ಉತ್ತರಿಸಿದ್ದರು.ಈ ವಿಷಯ ಕುರಿತು ಪ್ರತಿಕ್ರಿಯೆ ಪಡೆಯಲು ಶ್ರುತಿ ಅವರಿಗೆ ಫೋನ್ ಮಾಡಿದರೆ ಅವರು ಸಿಗಲಿಲ್ಲ.

ಪರಿತ್ಯಕ್ತ ಪತಿ ಮಹೇಂದರ್ ಪ್ರತಿಕ್ರಿಯೆ
ಈಗಾಗಲೇ ನಾನು ಆ ಎಲ್ಲ ನೋವಿನಿಂದ ಹೊರಬಂದಿದ್ದೇನೆ. ಮತ್ತೆ ಸಿನಿಮಾಮಾಡುತ್ತಿದ್ದೇನೆ. ವೀರಬಾಹು ಚಿತ್ರಕ್ಕೆ ಸಿದಟಛಿತೆ ನಡೆಯುತ್ತಿದೆ. ಅದರ ಬಗ್ಗೆ ಬೇಕಾದರೆ ಮಾತಾಡುತ್ತೇನೆ. ಆದರೆ ಇದೊಂದು ವಿಷಯ ಬೇಡ, ಪ್ಲೀಸ್...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada