»   »  'ಪೆರೋಲ್' ಚಿತ್ರೀಕರಣ ವೇಳೆ ಖೈದಿ ಪರಾರಿ

'ಪೆರೋಲ್' ಚಿತ್ರೀಕರಣ ವೇಳೆ ಖೈದಿ ಪರಾರಿ

Subscribe to Filmibeat Kannada

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 'ಪೆರೋಲ್' ಚಿತ್ರೀಕರಣದ ವೇಳೆ ನಾಗರಾಜ್ ಎಂಬ ವಿಚಾರಣಾಧೀನ ಖೈದಿ ಪರಾರಿಯಾಗಿದ್ದಾನೆ. ಮನೆಗೆ ಬೆಂಕಿ ಹಚ್ಚಿಚ ಪ್ರಕರಣದ ಆರೋಪವನ್ನು ನಾಗರಾಜ್ ಎದುರಿಸುತ್ತಿದ್ದ. ಈತ ಚಿತ್ರೀಕರಣದ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.

ಕಳೆದ ಎರಡು ದಿನಗಳಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ 'ಪೆರೋಲ್' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಇಂದು ಕಾರಾಗೃಹದಲ್ಲಿ ಖೈದಿಗಳ ಕೌಂಟ್ ಮಾಡಿದಾಗ ನಾಗರಾಜ್ ನಾಪತ್ತೆಯಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಹೆಸರುಘಟ್ಟ ನಿವಾಸಿಯಾದ ನಾಗರಾಜ್ ಮೇಲೆ ಈಗಾಗಲೇ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.

ವಿಚಾರಣಾಧೀನ ಖೈದಿ ನಾಗರಾಜ್ ಗಾಗಿ ಪೊಲೀಸರ ಹುಡುಕಾಟ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜೈಲಿನಿಂದ ಪರಾರಿಯಾಗಿರುವ ನಾಗರಾಜ್ ಸಹ 'ಪೆರೋಲ್' ಚಿತ್ರೀಕರಣದಲ್ಲಿ ಭಾಗವಹಿಸಿದ್ದ. ಕಾರಾಗೃಹದ ಒಳಗೆ ಮತ್ತು ಹೊರಗೆ ಚಿತ್ರೀಕರಣ ನಡೆಯುತ್ತಿತ್ತು.

''ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಸಿಬ್ಬಂದಿ ಕೊರತೆ ಇದೆ. ಇದರಿಂದ ಅಲ್ಲಿನ ಖೈದಿಗಳ ಮೇಲೆ ಹದ್ದಿನ ಕಣ್ಣಿಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ರೀತಿಯ ಪ್ರಕರಣ ನಡೆದಿದೆ'' ಎಂಬುದು ಪರಪ್ಪನ ಅಗ್ರಹಾರ ಪೊಲೀಸರ ವಿವರಣೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿರುವ ನಾಗರಾಜ್ ಗಾಗಿ ಹುಡುಕಾಟ ಪ್ರಾರಂಭವಾಗಿದೆ.

ಸುದ್ದಿಯಾಗುತ್ತಲೇ ಇದೆ 'ಪೆರೋರ್'
ಪೆರೋಲ್ ಚಿತ್ರದ ಗಮನಾರ್ಹ ಪಾತ್ರದಲ್ಲಿ ನಟಿಸುತ್ತಿರುವ ಬಿ ಸುರೇಶ್ ಚಿತ್ರೀಕರಣದ ವೇಳೆ ವ್ಯಕ್ತಿಯೊಬ್ಬನ ಮೇಲೆ ಕೈಮಾಡಿದ್ದರು ಎಂಬ ಸುದ್ದಿ ಈಗಾಗಲೇ ಬಹಿರಂಗಗೊಂಡಿತ್ತು. ಸುರೇಶ್ ಅರಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಗವಿಪುರಂ ಗುಟ್ಟಹಳ್ಳಿಯಲ್ಲಿ ಚಿತ್ರೀಕೃತವಾಗುತ್ತಿತ್ತು.

ಇದೇ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಾಜಶೇಖರ್ ಅವರ ಗೆಳೆಯನೊಬ್ಬ ಚಿತ್ರೀಕರಣಕ್ಕೆ ಅಡ್ಡಿಪಡಿಸುತ್ತಿದ್ದ ಎಂಬ ಕಾರಣಕ್ಕೆ ಸುರೇಶ್ ಅವರ ಕೈಮಾಡಿದ್ದರು. ನಂತರ ಸುರೇಶ್ ಆ ವ್ಯಕ್ತಿಯ ಬಳಿ ಕ್ಷಮೆಯಾಚಿಸಿದ್ದರು. ಈ ಘಟನೆಗೂ ಎರಡು ದಿನಗಳ ಮುನ್ನ ಚಿತ್ರದ ನಾಯಕ ನಟರ ನಡುವೆ ಗುದ್ದಾಟ ನಡೆದಿತ್ತು.

ಪೆರೋಲ್ ಚಿತ್ರದ ನಾಯಕ ನಟರಾದ ಲಿಖಿತ್, ವಿಶ್ವಾಸ್, ಪ್ರದೀಪ್ ಮತ್ತು ಶರತ್ ಚಿತ್ರೀಕರಣ ವೇಳೆ ಒಬ್ಬರ ಮೇಲೊಬ್ಬರು ಕಿತ್ತಾಡಿದ್ದರು. ನಂತರ ಪೊಲೀಸ್ ಭದ್ರತೆಯಲ್ಲಿ ಪೆರೋಲ್ ಚಿತ್ರೀಕರಣ ನಡೆದಿತ್ತು. ನಂತರ ಈ ನಾಯಕ ನಟರು ನಮ್ಮನಮ್ಮ ನಡುವೆ ಹೊಡೆದಾಟ, ಬಡಿದಾಟ ಏನೂ ನಡೆಯಲಿಲ್ಲ. ಸುಮ್ಮನೆ ನಾವು ಒಬ್ಬರನ್ನೊಬ್ಬರು ತಳ್ಳಿಕೊಂಡೆವು ಎಂದು ವಿವರಣೆ ಕೊಟ್ಟಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada