»   » ಸ್ಲಂಡಾಗ್ ಕೆಟ್ಟ ಚಿತ್ರ:ಗಿರೀಶ್ ಕಾರ್ನಾಡ್ !!

ಸ್ಲಂಡಾಗ್ ಕೆಟ್ಟ ಚಿತ್ರ:ಗಿರೀಶ್ ಕಾರ್ನಾಡ್ !!

Posted By:
Subscribe to Filmibeat Kannada

ಸ್ಲಂಡಾಗ್ ಮಿಲೇನಿಯರ್ ನಾನು ನೋಡಿದ ಅತ್ಯಂತ ಕೆಟ್ಟಚಿತ್ರ. ಭಾರತವನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಿರುವ ಆ ಚಿತ್ರಕ್ಕೆ ಹೇಗೆ ಆಸ್ಕರ್ ಬಂತೆಂದು ನನಗೆ ತಿಳಿಯದ ಎಂದು ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರಕ್ಕೆ ಮಂಗಳಾರತಿ ಮಾಡಿದವರು ಪದ್ಮಭೂಷಣ ಹಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್.

ರಂಗಭೂಮಿ, ಕಲೆ, ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿರುವ ಕಾರ್ನಾಡ್, ಪಣಜಿಯಲ್ಲಿ ನಡೆದ 'ವಸಾಹತುಶಾಹಿ ಸಂಸ್ಕೃತಿ' ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಭಾರತದ ಕಥಾನಕ ಹೊಂದಿದ್ದರೂ 'ಸ್ಲಂಡಾಗ್' ಭಾರತದಲ್ಲಿ ಅತಿ ಕಡಿಮೆ ಪ್ರದರ್ಶನ ಕಂಡಿದೆ. ನನ್ನ ವೃತ್ತಿ ಜೀವನದಲ್ಲಿ ಈ ಚಿತ್ರ ನಾನು ನೋಡಿದ ಅತ್ಯಂತ ಕೆಟ್ಟ ಮತ್ತು ಕಳಪೆ ಚಿತ್ರ ಎಂದು ಬಣ್ಣಿಸಿದ್ದಾರೆ.

ಶ್ರೀಮಂತ ಸಂಸ್ಕೃತಿ ಹೊಂದಿರುವ ನಾವು ಆಸ್ಕರ್, ಗ್ರ್ಯಾಮಿ ಪರಶಸ್ತಿಗಳ ಮೋಹಕ್ಕೆ ಒಳಗಾಗತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ. ನಮ್ಮ ಚಿತ್ರರಂಗ ವಿಶ್ವದ ಯಾವುದೇ ಸ್ಪರ್ಧೆಗೂ ಸವಾಲೊಡ್ಡಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಗಿರೀಶ್ ಕಾರ್ನಾಡ್ ಅಭಿಪ್ರಾಯಪಟ್ಟರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada