»   » ನನಗೆ ಹೃದಯಾಘಾತ ಆಗಿಲ್ಲ: ಅಂಬರೀಷ್

ನನಗೆ ಹೃದಯಾಘಾತ ಆಗಿಲ್ಲ: ಅಂಬರೀಷ್

Posted By:
Subscribe to Filmibeat Kannada

'ನನಗೇನೂ ಆಗಿಲ್ಲ. ಹಾರ್ಟ್ ಅಟ್ಯಾಕ್ಟ್ ಇಲ್ಲ ಏನೂ ಇಲ್ಲ ನಾನು ಚೆನ್ನ್ನಾಗೇ ಇದ್ದೀನಿ. ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಅಷ್ಟೇ' ಎಂದು ಕಲಿಯುಗ ಕರ್ಣ ,ಮಳವಳ್ಳಿ ಗಂಡು , ರೆಬೆಲ್ ಸ್ಟಾರ್, ಎಂಎಚ್ ಅಮರನಾಥ್ ಉರುಫ್ ಅಂಬರೀಷ್ ಪ್ರತಿಕ್ರಿಯೆ ನೀಡುವವರೆಗೂ ಅವರ ಅಭಿಮಾನಿಗಳಿಗೆ ಜೀವ ಇರಲಿಲ್ಲ.

ಇಂದು ಮಧ್ಯಾಹ್ನದ ಹೊತ್ತಿಗೆ ಗಾಳಿಸುದ್ದಿ ಎಲ್ಲೆಡೆ ಹರಡಿ, ಖಾಸಗಿ ಸುದ್ದಿ ವಾಹಿನಿಯ ಒಳಹೊಕ್ಕು 'ಅಂಬರೀಷ್ ಗೆ ಹೃದಯಾಘಾತ' ಎಂದು ಒಮ್ಮೆ ಪರದೆ ಮೇಲೆ ಮೂಡಿ ನಂತರ ಇದು ಸುಳ್ಳು ಸುದ್ದಿ , ಅಂಬರೀಷ್ ಅವರು ಚೆನ್ನಾಗಿದ್ದರಂತೆ ಅವರೇ ನಮ್ಮೊಡನೆ ದೂರವಾಣಿ ಮೂಲಕ ಸಂಪರ್ಕಿಸಿ, ತಮ್ಮ ಆರೋಗ್ಯ ಸುಸ್ಥಿತಿಯಲ್ಲಿರುವುದನ್ನು ಖಾತ್ರಿ ಪಡಿಸಿದ್ದಾರೆ ಎಂದು ಒನ್ ಲೈನ್ ನ ಬ್ರೇಕಿಂಗ್ ಸಂದೇಶಗಳು ಬಿತ್ತರಗೊಳ್ಳತೊಡಗಿದವು.

ಗಾಂಧಿನಗರದಲ್ಲಿ ಈ ರೀತಿ ಸುಳ್ಳುಸುದ್ದಿ ಹರಡುವುದು ಹೊಸದೇನಲ್ಲ. ಇತ್ತೀಚೆಗೆ ದುನಿಯಾ ವಿಜಯ್ ಅವರು ಅತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ ಎಂಎಸ್ ಎಲ್ಲರಿಗೂ ಹರಡಿ, ಗೊಂದಲ ಉಂಟಾಗಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada