ಅಣ್ಣಾಬಾಂಡ್ ಚಿತ್ರದಲ್ಲಿ ಈ ರೀತಿಯ ದೃಶ್ಯ ಬೇಕಿತ್ತಾ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣಾಬಾಂಡ್' ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಚಿತ್ರದ ಅಧಿಕೃತ ಟ್ರೇಲರ್ ಈಗಾಗಲೆ ಬಿಡುಗಡೆಯಾಗಿದ್ದು ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಈ ಟ್ರೇಲರ್‌ನಲ್ಲಿನ ಒಂದು ದೃಶ್ಯ ಭಯಾನಕವಾಗಿದೆ.
ಡಾ.ರಾಜ್ ಸಂಸ್ಥೆಯ ಚಿತ್ರಗಳೆಂದರೆ ಮನೆಮಂದಿಯಲ್ಲಾ ಕೂತು ನೋಡಬಹುದು ಎಂಬ ಅಭಿಪ್ರಾಯವಿದೆ. ಆದರೆ 'ಅಣ್ಣಾಬಾಂಡ್' ಚಿತ್ರದ ಟ್ರೇಲರ್ ಈ ಮಾತಿಗೆ ಕೊಂಚ ಅಪವಾದ ಎಂಬಂತಿದೆ. ಇಷ್ಟಕ್ಕೂ ಆ ದೃಶ್ಯದಲ್ಲಿ ಏನಿದೆ ಅಂತಹದ್ದು ಎಂದರೆ ನೀವೇ ನೋಡಿ.
ಚಿತ್ರದ ನಾಯಕ ಪುನೀತ್ ರಾಜ್‌ಕುಮಾರ್ ವಿಲನ್ ಜೊತೆ ಹೊಡೆದಾಡುತ್ತಾ, ಅವನ ತಲೆಯನ್ನು ಕೆಸರಿನಲ್ಲಿ ಹೊಸಕಿ ಹಾಕುತ್ತಾನೆ. ಈ ದೃಶ್ಯ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗಬಹುದುದೇನೋ, ಆದರೆ ಮಕ್ಕಳು ಹಾಗೂ ಮಹಿಳೆಯರ ಮೇಲೆ ಈ ದೃಶ್ಯ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಆದರೆ ಚಿತ್ರಕ್ಕೆ ಇನ್ನೂ ಸೆನ್ಸಾರ್ ಆಗಿಲ್ಲ. ಸೆನ್ಸಾರ್ ಬಳಿಕ ಈ ಹಿಂಸಾತ್ಮಕ ದೃಶ್ಯಗಳನ್ನು ತೆಗೆಯುತ್ತಾರೋ ಅಥವಾ ಹಾಗೆಯೇ ಬಿಡುತ್ತಾರೋ ಎಂಬುದನ್ನು ಕಾದುನೋಡೋಣ. ಏ.26ಕ್ಕೆ ಅಣ್ಣಾಬಾಂಡ್ ತೆರೆಗೆ ಅಪ್ಪಳಿಸುತ್ತಿದೆ. ಡಾ.ರಾಜ್‌ಕುಮಾರ್ ಅರ್ಪಿಸುವ ಪೂರ್ಣಿಮಾ ಎಂಟರ್‌ಪ್ರೈಸಸ್ ಚಿತ್ರವಿದು. (ಒನ್‌ಇಂಡಿಯಾ ಕನ್ನಡ)


Click it and Unblock the Notifications











