For Quick Alerts
  ALLOW NOTIFICATIONS  
  For Daily Alerts

  ಮಾಂಸ ದಂಧೆಯಲ್ಲಿ ಕನ್ನಡ ಸಿನಿ ತಾರೆಗಳು!

  By Rajendra
  |

  ಕೇವಲ ತಮಿಳು, ತೆಲುಗು ಚಿತ್ರರಂಗದಲ್ಲಷ್ಟೇ ಅಲ್ಲ ನಮ್ಮ ಗಾಂಧಿನಗರದಲ್ಲೂ ಕೆಲವು ನಟಿಯರು ಕತ್ತಲಲ್ಲಿ ಮೈ ಮಾರಿಕೊಳ್ಳುತ್ತಿದ್ದಾರೆ ಎಂಬ ಅಂಶ ಟಿವಿ9 ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ರಹಸ್ಯ ಕ್ಯಾಮೆರಾದಲ್ಲಿ ಚಿತ್ರೀಕರಿಸಿರುವ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಟಿವಿ9 ವಾಹಿನಿ ಸೋಮವಾರ (ಏ.11) ರಾತ್ರಿ ಪ್ರಸಾರ ಮಾಡಿ ಕನ್ನಡ ಚಿತ್ರೋದ್ಯಮವನ್ನು ಬೆಚ್ಚಿ ಬೀಳಿಸಿದೆ.

  ಕದ್ದು ಮುಚ್ಚಿ ನಡೆಯುತ್ತಿರುವ ಮಾಂಸ ದಂಧೆಯಲ್ಲಿ ಬಹಳಷ್ಟು ಕನ್ನಡ ಸಿನಿಮಾ ತಾರೆಯರು ಶಾಮೀಲಾಗಿರುವುದಾಗಿ ಟಿವಿ9 ಬಯಲು ಮಾಡಿದೆ. ಕೇವಲ ಎರಡು ಗಂಟೆಗಳ ಕಾಲಾವಧಿಯ 'ಅನುಭವ'ಕ್ಕೆ ನಟಿಯೊಬ್ಬಳು ರು.2 ಲಕ್ಷ ಚಾರ್ಜ್ ಮಾಡುವ ಅಂಶವೂ ಬಯಲಾಗಿದೆ. ಸ್ಥಳೀಯರೊಂದಿಗೆ ಪಲ್ಲಂಗ ಹಂಚಿಕೊಂಡರೆ ಎಲ್ಲಿ ತಮ್ಮ ಬುಡಕ್ಕೆ ಕೊಡಲಿ ಏಟು ಬೀಳುತ್ತದೋ ಎಂಬ ಕಾರಣಕ್ಕೆ ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ. ಇವರಿಗೆ ಪರ ರಾಜ್ಯದವರು, ಪರದೇಶದವರೇ ಬೇಕಾಗಿತ್ತು ಎಂಬ ರೋಚಕ ಸಂಗತಿಗಳು ಬೆಳಕು ಕಂಡಿವೆ.

  ಎರಡು ಗಂಟೆಗೆ ಎರಡು ಲಕ್ಷ ರು.ಗಳನ್ನು ಕೊಡುವುದರ ಜೊತೆಗೆ ಹೊಟೇಲ್ ಬಿಲ್, ತಿಂಡಿ 'ತೀರ್ಥ'ಗಳನ್ನು ಗಿರಾಕಿಯೇ ನೋಡಿಕೊಳ್ಳಬೇಕು. ಅವರನ್ನು ಕರೆತರುವ ಚಾರ್ಜುಗಳನ್ನು ಅವನೇ ಭರಿಸಬೇಕು. ಬೆಂಗಳೂರಿನಲ್ಲೇ ಮಜಾ ಮಾಡಬೇಕಾದರೆ ಕೊಂಚ ರಿಯಾಯಿತಿ ಇರುತ್ತದೆ. ಹೊರ ರಾಜ್ಯಗಳಿಗೆ ಕರೆದೊಯ್ಯಬೇಕು ಎಂದರೆ ಎಕ್ಸ್‌ಟ್ರಾ ಕೊಡಬೇಕು. ಪಿಂಪ್‌ಗಳ ಮೂಲಕವೇ ವ್ಯವಹಾರ ಕುದುರಿಸಬೇಕು. ಇವಿಷ್ಟು ಅಂಶಗಳು ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿವೆ.

  ನಟಿಯ ಹೆಸರನ್ನು ಹೇಳದೆ ಆಕೆಯ ಮುಖವನ್ನು ಮಸುಕು ಮಾಡಿ ತೋರಿಸಲಾಯಿತು. ಆರಂಭದಲ್ಲಿ ಆಕೆ ಇಂಗ್ಲಿಷ್‌ನಲ್ಲಿ ಮಾತನಾಡಿ ಕೊನೆಗೆ ಕನ್ನಡದಲ್ಲೂ ಮಾತನಾಡಿದಳು. ಈಕೆ ಕನ್ನಡ ಹಾಗೂ ತಮಿಳಿನ ವಿಜಯಕಾಂತ್ ಚಿತ್ರದಲ್ಲಿ ನಟಿಸಿದ್ದಾಳಂತೆ! ಈಗಲೂ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದಾಗಿ ತಿಳಿಸಿದಳು. ಆದರೆ ಈಕೆ ಯಾರು ಕುಲಗೊತ್ರ ಏನು ಎಂಬುದನ್ನು ಮಾತ್ರ ಟಿವಿ9 ಬಹಿರಂಗಪಡಿಸಿಲ್ಲ. ಗಾಂಧಿನಗರಲ್ಲಿ ರಾತ್ರಿ ರಾಣಿಯರ ವ್ಯವಹಾರ ಹೀಗೂ ನಡೆಯುತ್ತಿದೆ ಎಂಬುದು ಮಾತ್ರ ಜಗಜ್ಜಾಹೀರಾಗಿದೆ.

  ಕೆಲ ತಿಂಗಳ ಹಿಂದೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿ ಉತ್ತಮ ಮತ್ತು ಸಾತ್ವಿಕ ನಟಿ ಎಂಬ ಹೊಗಳಿಕೆಗೆ ಪಾತ್ರಳಾಗಿದ್ದ ಯಮುನಾ ಇಂಥದೇ ದಂಧೆಯಲ್ಲಿ ಭಾಗಿಯಾಗಿ ರೆಡ್ ಹ್ಯಾಂಡಾಗಿ ಸಿಕ್ಕುಬಿದ್ದಿದ್ದಳು. ಇಂಥದೊಂದು ವ್ಯಾಪಾರವನ್ನು ಬಯಲು ಮಾಡಿ, ನಟಿಮಣಿಯರ ಬಂಡವಾಳವನ್ನು ಬೆತ್ತಲು ಮಾಡಿದ ಟಿವಿ9ಗೆ ಅಭಿನಂದನೆಗಳು.

  English summary
  A sting operation by TV9 Kannada channel has revealed that several Kannada actresses are involved in flesh trade. Indeed, a shocking news. The actress in the subject has acted in Kannada and in Tamil movies with Vijayakanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X