»   » ರಜನಿ ಪಾದಕ್ಕೆರಗಿ ಐಶ್ವರ್ಯ ರೈ ಶಿರಸಾಸ್ಟಾಂಗ ನಮಸ್ಕಾರ

ರಜನಿ ಪಾದಕ್ಕೆರಗಿ ಐಶ್ವರ್ಯ ರೈ ಶಿರಸಾಸ್ಟಾಂಗ ನಮಸ್ಕಾರ

Posted By:
Subscribe to Filmibeat Kannada

'ರಾಜ್ ನೀತಿ' ಚಿತ್ರ ಬಿಡುಗಡೆ ಸಂದರ್ಭದಲ್ಲಿ ಮನೋಜ್ ಬಾಜ್ ಪೈ ಅವರ ಕಾಲಿಗೆ ಕತ್ರಿನಾ ಕೈಫ್ ಬಿದ್ದು ಆಶೀರ್ವಚನ ಪಡೆದಿದ್ದರು. ಇದೀಗ ತಮಿಳು ಚಿತ್ರನಟ ರಜನಿಕಾಂತ್ ಕಾಲಿಗೆ ಐಶ್ವರ್ಯ ರೈ ಎರಗಿ ಶಿರಸಾಸ್ಟಾಂಗ ನಮಸ್ಕಾರ ಮಾಡಿದ ಘಟನೆ ವರದಿಯಾಗಿದೆ.

ರಜನಿಕಾಂತ್, ಐಶ್ವರ್ಯ ರೈ ಮುಖ್ಯಭೂಮಿಕೆಯಲ್ಲಿರುವ ಚಿತ್ರ 'ಎಂಧಿರನ್' ಚಿತ್ರೀಕರಣ ಮುಗಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಅನಿರೀಕ್ಷಿತ ಘಟನೆಯಿಂದ ರಜನಿಕಾಂತ್ ತಬ್ಬಿಬ್ಬಾಗಿದ್ದಾರೆ. ಬಳಿಕ ಸಾವರಿಸಿಕೊಂಡು ಆಶೀರ್ವದಿಸಿದ್ದಾಗಿ ಚೆನ್ನೈ ಮೂಲಗಳು ತಿಳಿಸಿವೆ.

ಸುದೀರ್ಘ ಎರಡು ವರ್ಷಗಳಿಂದ 'ಎಂಧಿರನ್' ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಕ್ತಾಯವಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಐಶ್ವರ್ಯ ರೈ ಕಾಲಿಗೆ ಎರಗಿದ ಬಳಿಕ ರಜನಿಕಾಂತ್ ಅವರಿಗೆ ಮಾತೆ ಹೊರಡಲಿಲ್ಲವಂತೆ. ಬಳಿಕ ಚೇತರಿಸಿಕೊಂಡು ನಿಮ್ಮ ಮಾವನವರ ನಟನೆ ಎಂದರೆ ನನಗಿಷ್ಟ ಎಂದರಂತೆ.

ಒಟ್ಟಿನಲ್ಲಿ ಈ ಬಹುನಿರೀಕ್ಷಿತ ಚಿತ್ರದ ಧ್ವನಿಸುರುಳಿ ಜುಲೈ 31ರಂದು ಕೌಲಾಲಂಪುರದಲ್ಲಿ ಬಿಡುಗಡೆಯಾಗಲಿದೆ. ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿರುವ ಚಿತ್ರ ಇದಾಗಿದೆ. ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಸಹ ಐಶ್ವರ್ಯ ರೈ ಅವರ ಅನಿರೀಕ್ಷಿತ ಘಟನೆಯಿಂದ ಚಕಿತರಾದರು ಎನ್ನುತ್ತವೆ ಮೂಲಗಳು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada