twitter
    For Quick Alerts
    ALLOW NOTIFICATIONS  
    For Daily Alerts

    ಇದು ಮೂರನೆ ದರ್ಜೆ ಪ್ರಶಸ್ತಿ: ಚಂದ್ರು ಮಂಜು

    By Staff
    |

    Nagathihalli Chandrashekar
    ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿಯ 'ಚಲನಚಿತ್ರ ಗುಣನ್ಯಾಯ ನಿರ್ಣಯ'ದಿಂದ ತೀವ್ರ ಅಸಮಾಧಾನಗೊಂಡಿರುವ ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರ ನಿರ್ಮಾಪಕ ಕೆ.ಮಂಜು, ಸಮಗ್ರ ಪ್ರಶಸ್ತಿ ಪಟ್ಟಿಯನ್ನು ಮರುಪರಿಶೀಲನೆಗೆ ಒಡ್ಡಬೇಕೆಂದು ಕರ್ನಾಟಕ ಸರಕಾರವನ್ನು ಇಂದಿಲ್ಲಿ ಒತ್ತಾಯಿಸಿದರು.

    ಪ್ರಶಸ್ತಿ ನಿರ್ಧರಿಸಲು ನೇಮಕಗೊಂಡ ಇಡೀ ಸಮಿತಿಯ ರಚನೆಯೇ ಹಾಸ್ಯಾಸ್ಪದ. ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲೇ ದೋಷಗಳಿರುವುದರಿಂದ ಪ್ರಶಸ್ತಿ ನಿರ್ಧಾರದಲ್ಲಿ ಅಪರಾತಪರಾ ಆಗಿದೆ ಎಂದು ಅವರು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಯ ದಕ್ಷತೆಯನ್ನೇ ಪ್ರಶ್ನಿಸಿದರು.

    ತಾವು ನಿರ್ಮಿಸಿದ ಮಾತಾಡ್ ಮಾತಾಡ್ ಮಲ್ಲಿಗೆ ಒಂದು ಅಗಾಧ ಅತ್ಯುತ್ತಮ ಚಿತ್ರ. ಅದಕ್ಕೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಘೋಷಿಸಿರುವುದರಿಂದ ತಮಗೆ ಹಾಗೂ ತಮ್ಮ ಇಡೀ ಚಿತ್ರ ತಂಡಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಅವರು ಬೆಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ಮಂಗಳವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಷಾದ ವ್ಯಕ್ತಪಡಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಇದೇ ಚಿತ್ರದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಪ್ರಶಸ್ತಿ ಸಮಿತಿಗೆ ಸವಾಲೆಸೆಯುವ 16 ಪ್ರಶ್ನೆಗಳನ್ನೊಳಗೊಂಡ ಒಂದು ತಕರಾರು ಪತ್ರವನ್ನು ಸಿದ್ಧಪಡಿಸಿದ್ದು ಅದನ್ನು ಪತ್ರಕರ್ತರ ಮುಂದಿಟ್ಟರು. ಈ ಪತ್ರವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖಾಂತರ ಸರಕಾರಕ್ಕೆ ಸಲ್ಲಿಸುವುದಾಗಿ ಚಂದ್ರು ಹೇಳಿದರು. ಅಗತ್ಯ ಬಿದ್ದರೆ ತಮಗೆ ಲಭ್ಯವಾಗಿರುವ 'ಮೂರನೆ ದರ್ಜೆ' ಪ್ರಶಸ್ತಿಯನ್ನು ಸರಕಾರಕ್ಕೆ ವಾಪಸ್ಸು ಮಾಡಲಾಗುವುದೂ ಎಂದೂ ಅವರು ಎಚ್ಚರಿಸಿದರು.

    ಸಿ.ಆರ್. ಸಿಂಹ ಅವರು ಆಯ್ಕೆ ಸಮಿತಿ ಅಧ್ಯಕ್ಷತೆಯಿಂದ ಹಿಂದೆ ಸರಿದನಂತರ ಅವರ ಜಾಗಕ್ಕೆ ಸೂಕ್ತರನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಓಬೀರಾಯನ ಕಾಲದಲ್ಲಿ ಯಾವುದೋ ಒಂದು ಚಿತ್ರ ಮಾಡಿದ ಕೇಸರಿ ಹರವು ಅಂಥಹವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಇಷ್ಟೆಲ್ಲ ತಪ್ಪು ನಿರ್ಣಯಗಳಿಗೆ ಕಾರಣವಾಯಿತು ಎಂದು ಕೆ. ಮಂಜು ಗಂಭೀರ ಆರೋಪ ಮಾಡಿದರು.

    ಎರಡನೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿರುವ ಮೊಗ್ಗಿನ ಜಡೆ ಮೂಲತಃ ಒಂದು ಮಕ್ಕಳ ಸಿನಿಮಾ. ಅದಕ್ಕೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೊಡಲಾಗಿದೆ. ಈ ಚಿತ್ರವನ್ನು ಮುಖ್ಯವಾಹಿನಿ ಚಿತ್ರಗಳ ಕಕ್ಷೆಯಲ್ಲಿ ತಂದಿದ್ದೇ ಮೊದಲ ತಪ್ಪು ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ, ಮೂರನೆ ಅತ್ಯುತ್ತಮ ಚಿತ್ರವಾಗಿಯಾದರೂ ಹೊರಹೊಮ್ಮಬೇಕಾಗಿದ್ದ ಮೊಗ್ಗಿನ ಜಡೆ ನಿಗೂಢವಾಗಿ ಎರಡನೇ ಸ್ಥಾನದಲ್ಲಿ ಬಂದು ಕುಳಿತಿರುವುದು ಅನೇಕ ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು.

    ಪ್ರತೀವರ್ಷ ಕಲಾತ್ಮಕ ಚಿತ್ರಗಳೇ (ಉದಾಹರಣೆಗೆ : ಗುಲಾಬಿ ಟಾಕೀಸ್, ಮೊಗ್ಗಿನ ಜಡೆ) ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಚಾಳಿಗೆ ಮಂಜು ಬೇಸರ ವ್ಯಕ್ತಪಡಿಸಿದರು. ವ್ಯಾಪಾರಿ ಸಿನಿಮಾಗಳು ಮತ್ತು ಕಲಾತ್ಮಕ ಚಿತ್ರಗಳು ಎಂದು ಎರಡು ವಿಭಾಗ ಮಾಡಿ ಎರಡಕ್ಕೂ ಪ್ರತ್ಯೇಕವಾಗಿ ಪ್ರಶಸ್ತಿ ನೀಡುವ ಪರಿಪಾಠ ಜಾರಿಗೆ ಬರಬೇಕು ಎಂದು ಅವರು ಸರಕಾರಕ್ಕೆ ಸಲಹೆ ಮಾಡಿದರು.

    (ದಟ್ಸ್ ಕನ್ನಡ ಚಿತ್ರವಾರ್ತೆ)
    ಪೂರಕ ಓದಿಗೆ
    ಗುಲಾಬಿ ಟಾಕೀಸ್ ಶ್ರೇಷ್ಠ ಚಿತ್ರ; ಪುನೀತ್ ಶ್ರೇಷ್ಠ ನಟ
    ಅಗ್ನಿ ಶ್ರೀಧರ್ ಮತ್ತು ಮಂಜುರಿಂದ ಪ್ರಶಸ್ತಿ ತಿರಸ್ಕಾರ

    Tuesday, January 13, 2009, 17:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X