Don't Miss!
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಿವಣ್ಣನ ಅಂದರ್ ಬಾಹರ್ ಚುಟ್ಟ ಸೀನ್‌ಗೆ ಆಕ್ಷೇಪ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೇಟೆಸ್ಟ್ ಚಿತ್ರ 'ಅಂದರ್ ಬಾಹರ್'. ಈ ಚಿತ್ರದಲ್ಲಿ ಶಿವಣ್ಣ ಚುಟ್ಟ ಸೇದುವ ದೃಶ್ಯವಿದೆ ಎಂಬ ಕಾರಣಕ್ಕೆ ಭಾರಿ ಚರ್ಚೆಗೆ ಕಾರಣವಾಗಿದೆ. ನಾಯಕ ನಟನ ಸ್ಟೈಲ್ ಹಲವರ ಅನುಕರಣೆಗೂ ಕಾರಣವಾಗಬಹುದು ಎಂಬ ಆತಂಕವೇ ಇದಕ್ಕೆ ಕಾರಣ.
ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ 'ಅಂದರ್ ಬಾಹರ್' ಚಿತ್ರ ಸೆಟ್ಟೇರಿತು. ಹೊಗೆಯಾಡುತ್ತಿರುವ ಚುಟ್ಟ ಹಿಡಿದ ಶಿವಣ್ಣನ ಪೋಸ್ಟರ್‌ಗಳು ಹಲವರ ಕಣ್ಣು ಕುಕ್ಕಿದವು. ಇದು ತಪ್ಪಲ್ಲವೆ ಎಂದು ಚಿತ್ರತಂಡವನ್ನು ಪ್ರಶ್ನಿಸಿದರು. ಇದಕ್ಕೆ ಚಿತ್ರತಂಡ ಚುಟ್ಟ ಆತಂಕವನ್ನು ಕೊಂಚ ಮಟ್ಟಿಗೆ ನಿವಾರಿಸುವ ಪ್ರಯತ್ನ ಮಾಡಿತು.
ಅದೇನೆಂದರೆ, ಇದು ಕೇವಲ ಫೋಟೋ ಶೂಟ್‌ಗಾಗಿ ತೆಗೆದ ದೃಶ್ಯಗಳು. ಆದರೆ ಚಿತ್ರದಲ್ಲಿ ಈ ರೀತಿಯ ದೃಶ್ಯಗಳಿರುವುದಿಲ್ಲ ಎಂದಿದ್ದಾರೆ ಶಿವಣ್ಣ. ಈ ರೀತಿಯ ದೃಶ್ಯಗಳನ್ನು ಸೆನ್ಸಾರ್ ಮಂಡಳಿ ಬೆಂಬಲಿಸುವುದಿಲ್ಲ ಎಂಬ ಮಾತುಗಳನ್ನು ಅರುಂಧತಿ ನಾಗ್ ವ್ಯಕ್ತಪಡಿಸಿದ್ದಾರೆ.
ಮುಹೂರ್ತ ಸಮಾರಂಭದಲ್ಲಿ ಚಿತ್ರದ ನಾಯಕಿ ಪಾರ್ವತಿ, ನಟ ಶಶಿಕುಮಾರ್, ಹಿರಿಯ ಕಲಾವಿದೆ ಅರುಂಧತಿ ನಾಗ್, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಚಿತ್ರರಂಗದ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. (ಏಜೆನ್ಸೀಸ್)