»   » ಅಮೂಲ್ಯ, ರತ್ನಜ ಚುಂಬನ ಅಸಲಿ ಅಲ್ಲ ಗುರು ನಕಲಿ

ಅಮೂಲ್ಯ, ರತ್ನಜ ಚುಂಬನ ಅಸಲಿ ಅಲ್ಲ ಗುರು ನಕಲಿ

Posted By:
Subscribe to Filmibeat Kannada

ಮಾಧ್ಯಮಗಳಲ್ಲಿ ಭಾರಿ ಸುದ್ದಿ ಮಾಡಿದ್ದ ಚಿತ್ರನಟಿ ಅಮೂಲ್ಯ ಮತ್ತು ಚಿತ್ರನಿರ್ದೇಶಕ ರತ್ನಜ ಅವರ ಚುಂಬನ ದೃಶ್ಯಗಳು ಅಸಲಿ ಅಲ್ಲ ನಕಲಿ ಎಂಬುದನ್ನು ತಜ್ಞರು ದೃಢಪಡಿಸಿದ್ದಾರೆ. ಚುಂಬನ ದೃಶ್ಯಗಳನ್ನ್ನು ತಿರುಚಿ ಸೃಷ್ಟಿಸಲಾಗಿದೆ. ಆದರೆ ಈ ಅಸಹ್ಯ ಚಿತ್ರಗಳಿಂದ ನಟಿ ಅಮೂಲ್ಯ ಅವರಿಗೆ ಆದ ನಷ್ಟ ಮಾತ್ರ ಅಷ್ಟಿಷ್ಟಲ್ಲ.

ಈ ದೃಶ್ಯಗಳು ನಕಲಿ ಎಂದು ಹೇಳುವ ವೇಳೆಗಾಗಲೆ ಕಾಲ ಮಿಂಚಿ ಹೋಗಿತ್ತು. ಚಿತ್ರದಲ್ಲಿರುವುದು ಅಮೂಲ್ಯ ಅವರೆ ಎಂದು ಬಿಂಬಿಸಲಾಗಿತ್ತು. ಇದರಿಂದ ಅಮೂಲ್ಯ ತೀವ್ರವಾಗಿ ನೊಂದುಕೊಂಡಿದ್ದಾರೆ. ಆಕೆಯ ವ್ಯಕ್ತಿತ್ವಕ್ಕೆ ಈ ನಕಲಿ ಚಿತ್ರಗಳು ಮಸಿಬಳಿದಿವೆ. ಅಮೂಲ್ಯ ಎಳೆ ಮನಸ್ಸನ್ನು ಘಾಸಿಗೊಳಿವೆ ಈ ನಕಲಿ ಚಿತ್ರಗಳು.

ಕಳೆದ ನಾಲ್ಕು ದಿನಗಳಿಂದ ಹಲವಾರು ಚಾನಲ್ ಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಈ ಚಿತ್ರಗಳನ್ನು ತೋರಿಸಲಾಗುತ್ತಿದೆ ಎಂದು ಅಮೂಲ್ಯ ತೀವ್ರವಾಗಿ ನೊಂದು ನುಡಿದಿದ್ದಾರೆ. ಈ ಘಟನೆಯ ಆಘಾತದಿಂದ ನಮ್ಮ ತಾಯಿಯವರು ಇನ್ನೂ ಹೊರಬಂದಿಲ್ಲ. ನಮ್ಮ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ ಎಂದಿದ್ದಾರೆ.

ಚಿತ್ರರಂಗದಲ್ಲಿರುವವರೆ ಹೀಗೆ ಮಾಡುತ್ತಾರೆ ಎಂದರೆ ನನಗೆ ಇನ್ನೂ ನಂಬಿಕೆ ಬರುತ್ತಿಲ್ಲ. ಈ ರೀತಿ ನಕಲಿ ಛಾಯಾಚಿತ್ರಗಳನ್ನು ಸೃಷ್ಟಿಸಿ ಉದಯೋನ್ಮುಖ ಕಲಾವಿದರನ್ನು ತುಳಿದು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ನೊಂದು ನುಡುದಿದ್ದಾರೆ.

ವಿಡಿಯೋ : ಅಮೂಲ್ಯ, ರತ್ನಜ ಚುಂಬನ

ಕಳೆದ ಕೆಲತಿಂಗಳ ಹಿಂದಷ್ಟೆ ಅಮೂಲ್ಯ ಅವರ ತಂದೆಯನ್ನು ಕಳೆದುಕೊಂಡಿದ್ದರು. ಮೊದಲೇ ದುಃಖದಲ್ಲಿದ್ದ ಅಮೂಲ್ಯ ಅವರಿಗೆ ಈ ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಘಟನೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಯ ಕೈವಾಡವಿಲ್ಲ. ನನಗೂ ರತ್ನಜ ಅವರಿಗೆ ಗೊತ್ತಿರುವ ವ್ಯಕ್ತಿಯೇ ಈ ಕೆಲಸವನ್ನು ಮಾಡಿದ್ದಾನೆ ಎಂದು ಅಮೂಲ್ಯ ಹೇಳಿದ್ದಾರೆ.

ನನ್ನ ವಿರುದ್ಧ ನಡೆದ ಪಿತೂರಿಯಿದು. ಆದರೆ ಈ ರೀತಿಯ ಒಳಸಂಚುಗಳು ನನ್ನ ಅಭಿನಯವನ್ನು ನಿಲ್ಲಿಸಲಾರವು. ತಾನೊಬ್ಬ ಉತ್ತಮ ನಟಿ ಎಂಬುದನ್ನು ನಿರೂಪಿಸಿಕೊಳ್ಳುತ್ತೇನೆ ಎಂದು ಅಮೂಲ್ಯ ಆತ್ಮವಿಶ್ವಾಸದಿಂದ ನುಡಿದಿದ್ದಾರೆ. ಇತ್ತೀಚೆಗೆ ತೆರೆಕಂಡ ಅಮೂಲ್ಯ ಅಭಿನಯದ 'ನಾನು ನನ್ನ ಕನಸು' ಚಿತ್ರಕ್ಕೆ ಎಲ್ಲಡೆಯಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿರುವುದು ಆಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada