For Quick Alerts
  ALLOW NOTIFICATIONS  
  For Daily Alerts

  ಕೈ ಮೇಲಿನ 'ಪ್ರಭು' ಹಚ್ಚೆ ಅಳಿಸಲು ನಯನಿಗೆ ಸರ್ಜರಿ

  By Rajendra
  |

  ಸಿನಿಮಾ ತಾರೆ ನಯನತಾರಾ ಹಾಗೂ ಪ್ರಭುದೇವ ನಡುವಿನ ಸಂಬಂಧ ಹಳಸಿರುವ ವಿಷಯ ಗೊತ್ತೇ ಇದೆ. ಇವರಿಬ್ಬರ ನಡುವಿನ ಪ್ರೇಮ ವ್ಯವಹಾರ ಬಯಲಾಗಿದ್ದು ನಯನತಾರಾ ಎಡ ಮುಂಗೈ ಮೇಲೆ ಹಾಕಿಸಿಕೊಂಡಿದ್ದ ಒಂದು ಸಣ್ಣ ಹಚ್ಚೆಯಿಂದ. ಈಗ ಆ ಹಚ್ಚೆಯನ್ನು ಅಳಿಸಿಹಾಕಲು ನಯನತಾರಾ ಮುಂದಾಗಿದ್ದಾರಂತೆ.

  ತಮ್ಮ ಕೈಮೇಲೆ 'ಪ್ರಭು' ಎಂದು ನಯನತಾರಾ ಹಚ್ಚೆ ಹಾಕಿಸಿಕೊಂಡಿದ್ದರು. ಇದು ಮೊದಲು ಬಯಲಾಗಿದ್ದು ಮಾಧ್ಯಮಗಳಲ್ಲಿ. ಬಳಿಕ ಇಬ್ಬರೂ ತಮ್ಮ ಲವ್ ಸ್ಟೋರಿ ಒಪ್ಪಿಕೊಂಡಿದ್ದರು. ಇನ್ನೇನು ಮದುವೆಗೂ ಸಿದ್ಧತೆಗಳಾಗುತ್ತಿವೆ ಎನ್ನಲಾಗಿತ್ತು.

  ಕೊನೆಗೆ ಏನಾಯಿತೋ ಏನೋ ಇಬ್ಬರೂ ನಾನೊಂದು ತೀರ ನೀನೊಂದು ತೀರ ಎಂಬಂತಾದರು. ಸದ್ಯಕ್ಕೆ ಇವರಿಬ್ಬರ ಸಂಬಂಧ ಮುರಿದು ಬಿದ್ದಿದ್ದು ನಯನತಾರಾ ಈಗ ಹಳೆ ಹಚ್ಚೆಯನ್ನು ತೆಗೆಸಲು ಮುಂದಾಗಿದ್ದಾರೆ ಎನ್ನುತ್ತವೆ ಚೆನ್ನೈ ಮೂಲಗಳು. ಇದಕ್ಕಾಗಿ ಆಕೆ ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಿಸಿಕೊಳ್ಳಲಿದ್ದಾರಂತೆ. (ಏಜೆನ್ಸೀಸ್)

  English summary
  Nayantara is back in news again and again it is for a controversial reason. Well, the fairytale romance between her and Prabhu has reportedly come to an end. Now, it is heard that Nayan is going for plastic surgery and that has become a major news. Well, Nayan had got a tattoo done which had the name of Prabhu Deva on her arm. But now, she has reportedly decided to go in for a plastic surgery and get that removed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X