»   »  'ಜೊತೆಗಾರ' ಪ್ರೇಮ್ ಜೊತೆಗಾತಿ ರಮ್ಯಾ ನಾಪತ್ತೆ!

'ಜೊತೆಗಾರ' ಪ್ರೇಮ್ ಜೊತೆಗಾತಿ ರಮ್ಯಾ ನಾಪತ್ತೆ!

Posted By:
Subscribe to Filmibeat Kannada
Prem Kumar and Ramya in Jothegara
'ಜೊತೆಗಾರ'ನ ಪತ್ರಿಕಾಗೋಷ್ಠಿಗೆ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಮತ್ತು ನಟಿ ರಮ್ಯಾ ಗೈರುಹಾಜರಾಗಿದ್ದರು. ಬಿಡುವಿಲ್ಲದ ಕಾರಣ ಪತ್ರಿಕಾಗೋಷ್ಠಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂಬುದು ರಮ್ಯಾ ನೀಡಿರುವ ಕಾರಣ. 'ಜೊತೆಗಾರ'ನಿಂದ ಸಂಬಂಧ ಕಳೆದುಕೊಂಡಿರುವ ಪ್ರೇಮ್ ಕುಮಾರ್ ಈ ಚಿತ್ರದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ತಮ್ಮನ್ನು 'ಸಹ ನಟ' ಎಂದು ಕರೆದು ತಿರಸ್ಕಾರದಿಂದ ಮಾತನಾಡಿದ್ದಾರೆ ಎಂಬುದು ಪ್ರೇಮ್ ಆರೋಪ.

''ಪ್ರೇಮ್ ಕುಮಾರ್ ಈಗೇನು ಹೇಳುತ್ತಿದ್ದಾರೆ ಎಂಬ ಬಗ್ಗೆ ನನಗೆ ಆಸಕ್ತಿ ಇಲ್ಲ. ನನ್ನ ಮಟ್ಟಿಗೆ ಈ ಚಿತ್ರವಷ್ಟೇ ಮುಖ್ಯ. ಸತತ ಮೂರು ಚಿತ್ರಗಳ ಸೋಲಿನ ಸರದಾರ ಎಂದು ಪ್ರೇಮ್ ಅವರನ್ನು ನಾನು ಯಾವತ್ತೂ ತಿಳಿದುಕೊಂಡಿಲ್ಲ. ಕಥಾವಸ್ತು, ಚಿತ್ರ ನಿರ್ಮಾಣ ಮತ್ತು ರಮ್ಯಾ ಅವರ ಶಕ್ತಿ ಸಾಮರ್ಥ್ಯಗಳನ್ನು ಅರಿತು ಚಿತ್ರವನ್ನು ಮಾಡುತ್ತಿದ್ಡೇನೆ. ಸುಖಾ ಸುಮ್ಮನೆ ಪ್ರೇಮ್ ಇಲ್ಲಸಲ್ಲದ ಕಿರಿಕಿರಿ ಸೃಷ್ಟಿಸುತ್ತಿದ್ದಾರೆ'' ಎಂದು ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಹರಿಹಾಯ್ದರು.

ಆದರೆ ಪ್ರೇಮ್ ಹೇಳುವುದೇ ಬೇರೆ, 'ಜೊತೆಗಾರ'ಚಿತ್ರೀಕರಣದ ವೇಳೆ ತನಗೆ ಅಪಮಾನವಾಗಿದೆ. ಚಿತ್ರದ ನಿರ್ಮಾಪರು ನನ್ನ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿ ಹೆಸರು ಕೆಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಜೊತೆಗಾರ ಚಿತ್ರದ ನಿರ್ಮಾಪರ ಧೋರಣೆಯಿಂದ ನಾನು ಬೇಸತ್ತಿದ್ದೇನೆ ಎನ್ನುತ್ತಾರೆ. ಶೀಘ್ರದಲ್ಲೇ ಈ ಸಮಸ್ಯೆಯನ್ನು ಬಗೆಹರಿಸಲು ಪಿಆರ್ ಒ ನಾಗೇಂದ್ರ ಅವರು ಮಧ್ಯಸ್ಥಿಕೆ ವಹಿಸುವುದಾಗಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಜೊತೆಗಾರನಿಗೆ ಲವ್ಲಿಸ್ಟಾರ್ ಪ್ರೇಮ್ ಎಳ್ಳುನೀರು!
ನಂ.1 ಪಟ್ಟಕ್ಕಾಗಿ ನಟಿ ರಮ್ಯಾ ಹಾರಾಟ,ಹೋರಾಟ!
ಈ ಚಿತ್ರದ ನಾಯಕಿ ಯಾರೆಂದು ನೀವೇ ಊಹಿಸಿ!
ಕಿರುತೆರೆ ನಟಿ ಅಭಿನಯಾ ವೈವಾಹಿಕ ಜೀವನಕ್ಕೆ!
'ಜೊತೆಗಾರ'ನಿಗೆ ರು.1.50 ಲಕ್ಷ ಬಿಟ್ಟುಕೊಟ್ಟ ರಮ್ಯಾ!

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X