»   » ಯುವಕನಿಗೆ ಪ್ರಿಯಾಂಕಾ ಚೋಪ್ರಾ ಕಪಾಳಮೋಕ್ಷ

ಯುವಕನಿಗೆ ಪ್ರಿಯಾಂಕಾ ಚೋಪ್ರಾ ಕಪಾಳಮೋಕ್ಷ

Posted By:
Subscribe to Filmibeat Kannada

ಚಿತ್ರೀಕರಣ ವೇಳೆ ಅಸಭ್ಯವಾಗಿ ವರ್ತಿಸಿದವನಿಗೆ ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾ ಕಪಾಳಮೋಕ್ಷ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿಕೊಂಡು ಅವರು ತೆರಳುತ್ತಿರಬೇಕಾದರೆ ಇಪ್ಪತ್ತರ ಹರೆಯದ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಕ್ಕೆ ಪ್ರಿಯಾಂಕಾ ಕಪಾಳಕ್ಕೆ ಸರಿಯಾಗಿ ಬೀಸಿದ್ದಾರೆ.

ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಝಯೀದ್ ಖಾನ್ ಜೊತೆ ಪ್ರಿಯಾಂಕಾ ಅಭಿನಯಿಸುತ್ತಿರುವ ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರಿಯಾಂಕಾ ಬಟ್ಟೆ ಬದಲಿಸಿಕೊಂಡು ಹೊರಬರುತ್ತಿರಬೇಕಾದರೆ ಯುವಕನೊಬ್ಬ ಓಡಿಬಂದು ''ನೀನು ನನ್ನ ಬಳಿ ಮಾತನಾಡಲೇ ಬೇಕು!'' ಎಂದು ಬೇಡಿಕೊಂಡಿದ್ದಾನೆ. ಅಷ್ಟೆ....

ಯುವಕನ ಮೇಲೆ ಕೈಎತ್ತುವುದಕ್ಕೂ ಮುನ್ನ ಪ್ರಿಯಾಂಕಾ ಅಲ್ಲಿಂದ ಆದಷ್ಟು ಕಾಲುಕೀಳಲು ನೋಡಿದ್ದಾರೆ. ಆದರೆ ಯುವಕ ಆಕೆಯನ್ನು ಬಿಡದೆ ತೋಳನ್ನು ಹಿಡಿದು ಮುಂದಕ್ಕೆ ಎಳೆದುಕೊಂಡಿದ್ದಾನೆ. ಇನ್ನೇನು ಅಪ್ಪಿಕೊಳ್ಳಬೇಕು ಎನ್ನುವಷ್ಟರಲ್ಲಿ ಯುವಕನ ಕೆನ್ನೆಗೆ ಪ್ರಿಯಾಂಕಾ ಒಲವಿನ ಉಡುಗೊರೆಯನ್ನೇ ಕೊಟ್ಟು ಮುಖ ಊದಿಸಿದ್ದಾರೆ.

ದೂರದಿಂದ ನೋಡುತ್ತಿದ್ದ ಚಿತ್ರತಂಡ ತಕ್ಷಣ ಪ್ರಿಯಾಂಕಾ ರಕ್ಷಣೆಗಾಗಿ ಧಾವಿಸಿದೆ. ಯುವಕನನ್ನು ಕರೆದೊಯ್ದ ಚಿತ್ರತಂಡ ಮರೆಯಲ್ಲಿ ಮೊದಲೆ ಟೊಮಾಟೋ ಹಣ್ಣಿನಂತಾಗಿದ್ದ ಮುಖವನ್ನು ಹಿಂಡಿ ಹಿಪ್ಪೆ ಮಾಡಿದ್ದಾರೆ. ಬಳಿಕ ಆತನ ಪಾಡಿಗೆ ಆತನನ್ನು ಬಿಟ್ಟುಬಿಟ್ಟಿದ್ದಾರೆ. ಪ್ರಿಯಾಂಕಾರ ಅಧಿಕೃತ ವಕ್ತಾರ ಯುವಕನಿಗೆ ಥಳಿಸಿದ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಆದರೆ ಈ ಸಂಬಂಧ ಪ್ರಿಯಾಂಕಾ ಯಾವುದೇ ಪೊಲೀಸ್ ದೂರನ್ನು ಕೊಟ್ಟಿಲ್ಲ. ಸಮಸ್ಯೆಯನ್ನು ಮತ್ತಷ್ಟು ಜಟಿಲವಾಗಿಸುವುದು ಪ್ರಿಯಾಂಕಾರಿಗೆ ಇಷ್ಟವಿಲ್ಲವಂತೆ. ಪ್ರಿಯಾಂಕಾರ ಖಾಸಾ ಗೆಳೆಯನೊಬ್ಬನ ಪ್ರಕಾರ, ಯುವಕನ ಕೆನ್ನೆಗೆ ಪ್ರಿಯಾಂಕಾ ತಾಟಿದ ಏಟಿಗೆ ಆತ ಚಳಿಜ್ವರ ಬಂದು ಆಸ್ಪತ್ರೆಗೆ ದಾಖಲಾಗಿರಬೇಕು ಎಂದು ಗುಮಾನಿ ವ್ಯಕ್ತಪಡಿಸಿದ್ದಾನೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada