»   » ಸಾಯಿ ಪ್ರಕಾಶ್ ಗೆ ಒತ್ತಡ ಹೇರಿಲ್ಲ; ತ್ಯಾಗರಾಜ

ಸಾಯಿ ಪ್ರಕಾಶ್ ಗೆ ಒತ್ತಡ ಹೇರಿಲ್ಲ; ತ್ಯಾಗರಾಜ

Posted By:
Subscribe to Filmibeat Kannada

ಬಾಕಿ ಹಣ ಹಿಂತಿರುಗಿಸುವಂತೆ ನಿರ್ದೇಶಕ ಸಾಯಿ ಪ್ರಕಾಶ್ ಅವರಿಗೆ ಎಲ್ಲೂ ಒತ್ತಡ ಹೇರಿಲ್ಲ ಎಂದು ನಿರ್ಮಾಪಕ ಕಮ್ ಲೇವಾದೇವಿ ವ್ಯವಹಾರಸ್ಥ ತ್ಯಾಗರಾಜು ಸ್ಪಷ್ಟಪಡಿಸಿದ್ದಾರೆ. ಇವರು ಶಿವರಾಜ್ ಕುಮಾರ್ ಮತ್ತು ಮೀರಾ ಜಾಸ್ಮಿನ್ ಮುಖ್ಯಭೂಮಿಕೆಯ 'ದೇವರು ಕೊಟ್ಟ ತಂಗಿ' ಚಿತ್ರದ ವಿತರಕ. ಸಾಯಿ ಪ್ರಕಾಶ್ ಅವರು ಇತ್ತೀಚೆಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಈ ಹಿಂದೆ ನಿರ್ಮಾಪಕ ಜಾಯ್ ಸಿಮೋನ್ ಮಾತನಾಡುತ್ತಾ, ನಿದ್ದೆ ಮಾತ್ರ ಸೇವಿಸುವುದಕ್ಕೂ ಮುನ್ನ ಸಾಯಿ ಪ್ರಕಾಶ್ ಅವರು ನನಗೆ ಎಸ್ ಎಂಎಸ್ ಮಾಡಿದ್ದರು. '' ಹಣ ಹಿಂತಿರುಗಿಸುವಂತೆ ತ್ಯಾಗು ತೀವ್ರ ಒತ್ತಡ ಹೇರುತ್ತಿದ್ದಾರೆ. ನಾನು ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ''ಎಂದು ಎಸ್ ಎಂ ಎಂ ಸಂದೇಶದಲ್ಲಿ ತಿಳಿಸಿದ್ದರು ಎಂದು ಹೇಳಿದ್ದರು. ಆದರೆ ತ್ಯಾಗರಾಜ್ ಈ ಎಲ್ಲಾ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಇದೀಗ ತ್ಯಾಗರಾಜು ಅವರು ಗಣೇಶ್ ನಾಯಕ ನಟನಾಗಿರುವ 'ಉಲ್ಲಾಸ ಉತ್ಸಾಹ' ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ನಾನೂ ಸಹ ಹಣಕಾಸು ತೊಂದರೆಗೆ ಸಿಲುಕಿದ್ದೇನೆ. ಪರಿಸ್ಥಿತಿ ಹೀಗಿದ್ದರೂ ನಾನು ಸಾಯಿ ಪ್ರಕಾಶ್ ಅವರ ಮೇಲೆ ಹಣ ಹಿಂತಿರುಗಿಸುವಂತೆ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲ ಚಿತ್ರಗಳ ವಿತರಣೆಯಿಂದ ನಾನೂ ಸಹ ಹಣ ಕಳೆದುಕೊಂಡು ಲಾಸಾಗಿದ್ದೇನೆ. ಸಾಯಿ ಪ್ರಕಾಶ್ ಅವರ ಚಿತ್ರವನ್ನು ಬಿಡುಗಡೆ ಮಾಡಲು ನಾನು ಹಣ ಸಹಾಯ ಮಾಡಿದ್ದೆ. ಈಗಲೂ ಸಾಯಿ ಪ್ರಕಾಶ್ ಅವರು ಕೆಲ ದಿನಗಳಲ್ಲೇ ಹಣ ಹಿಂತಿರುಗಿಸುವ ಭರವಸೆಯನ್ನು ನೀಡಿದ್ದಾಗಿ ತ್ಯಾಗರಾಜ್ ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada