For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ?

  By Staff
  |
  "ನಾನು ದರ್ಶನ್ ಗೆ ತಾಯಿ ಇದ್ದ ಹಾಗೆ. ನನ್ನ ಮಗನಿಂದ ನಾನು ಕೆಟ್ಟದನ್ನು ನಿರೀಕ್ಷಿಸುವುದಿಲ್ಲ" ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಎಫ್ ಸಿಸಿ ಹೊರತಂದಿರುವ 75 ಕನ್ನಡ ಪುಸ್ತಕಗಳಲ್ಲಿ ತೂಗುದೀಪ ಶ್ರೀನಿವಾಸ್ ಸೇರಿದಂತೆ ಕನ್ನಡದ ಹಲವಾರು ಖಳ ನಟರ ಪುಸ್ತಕಗಳುಇಲ್ಲದಿರುವ ಬಗ್ಗೆ ದರ್ಶನ್ ಖಾರವಾಗಿ ಪ್ರತಿಕ್ರಿಯಿಸಿ, ''ಜಯಮಾಲಾಗೆ ಏನೇ ಆದರೂ ಮೇಕಪ್ ಅಳಿಸಲ್ಲ'' ಎಂದಿದ್ದರು.

  ತಮ್ಮ ತಂದೆಯವರ ಬಗ್ಗೆ ಕೆಎಫ್ ಸಿಸಿ ಪುಸ್ತಕ ತರದೆ ಇರುವ ಬಗ್ಗೆ ಖಳ ನಟರ ಮಕ್ಕಳು ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಸೋಮವಾರ(ಮಾ.16) ಪ್ರತಿಭಟಿಸಿದ್ದರು. ಖಳ ನಟರ ಮಕ್ಕಳು ಜಯಮಾಲಾ ವಿರುದ್ಧ ಸಿಡಿದುಬಿದ್ದಿದ್ದರು. ಈ ಬೆಳವಣಿಗೆಗಳ ಬಗ್ಗೆ ಜಯಮಾಲಾ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.

  ಜಯಮಾಲಾ ಮಾತನಾಡುತ್ತಾ, ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ? ಅವರ ತಂದೆ ಇಡೀ ಕನ್ನಡ ಚಿತ್ರರಂಗಕ್ಕೆ ತಂದೆಯಂತೆ ನಡೆದುಕೊಂಡವರು. ಅವರು ತೆರೆಯ ಮೇಲೆ ಖಳನಟರಾದರೂ ನಿಜ ಜೀವನದಲ್ಲಿ ಅಪ್ಪಟ ನಾಯಕನ ಗುಣಗಳಿದ್ದಂತಹ ವ್ಯಕ್ತಿ. ಆದರೆ ದರ್ಶನ್ ಇದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದರು.

  ''ತಾಯಿಯನ್ನು ಮಗ ಸಾಯಿಸುವ ಮಟ್ಟಕ್ಕೆ ಬಂದರೆ, ಅದಕ್ಕೆ ನಾನಾದರೂ ಏನು ಮಾಡಕ್ಕಾಗುತ್ತೆ?'' ಎಂದು ಜಯಮಾಲಾ ಕಣ್ಣೀರಿಟ್ಟರು. ದರ್ಶನ್ ಮತ್ತವರ ಗುಂಪು ಕೆಎಫ್ ಸಿಸಿ ಕಚೇರಿಗೆ ಬಂದಾಗಲೂ ಕೆಟ್ಟದಾಗಿ ನಡೆದುಕೊಂಡಿರು. ಮುಂದಿನ ಸಂಚಿಕೆಗಳಲ್ಲಿ ತಮ್ಮ ತಂದೆಯವರ ಪುಸ್ತಕ ತರದೆ ಇದ್ದರೆ ನಾನು ಏನು ಮಾಡಲು ಹೇಸುವುದಿಲ್ಲ ಎಂದು ದರ್ಶನ್ ಗುಡುಗಿದ್ದಾಗಿ ಜಯಮಾಲ ಆರೋಪಿಸಿದರು.

  ಈ ರೀತಿಯ ನಡವಳಿಕೆ ನಾನು ದರ್ಶನ್ ರಿಂದ ನಿರೀಕ್ಷಿಸಿರಲಿಲ್ಲ.ಇಷ್ಟಕ್ಕೂ ದರ್ಶನ್ ಏನು ಮಾಡ್ತಾನೆ? ನನ್ನನ್ನು ಕೊಲೆ ಮಾಡುತ್ತಾನಾ? ಎಂದು ಜಯಮಾಲಾ ಸಿಟ್ಟಾದರು. ನನ್ನ ವೃತ್ತಿ ಜೀವನದ ಮೂರುವರೆ ದಶಕಗಳ ಕಾಲ ಯಾರೂ ನನ್ನ ಬಳಿ ಇಷ್ಟೊಂದು ಕೆಟ್ಟದಾಗಿ ನಡೆದುಕೊಂಡಿಲ್ಲ. ನನ್ನನ್ನು ಏಕವಚನದಲ್ಲಿ ಕರೆದು ನಿಂದಿಸಿಲ್ಲ. ಆದರೆ ದರ್ಶನ್ ನಿಜ ಜೀವನದಲ್ಲಿ ಖಳನಟನಂತೆ ವರ್ತಿಸಿಬಿಟ್ಟ. ನನ್ನ ಸಾವಿಗೆ ದರ್ಶನ್ ಮೇಕಪ್ ಅಳಿಸಬೇಕಿಲ್ಲ.ಅವರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದು ಜಯಮಾಲಾ ವಿರಮಿಸಿಕೊಂಡರು.

  (ದಟ್ಸ್ ಕನ್ನಡ ಚಿತ್ರವಾರ್ತೆ)

  ಕೆಎಫ್ ಸಿಸಿ ನಿರ್ಲಕ್ಷ್ಯ ಧೋರಣೆಗೆ ದರ್ಶನ್ ಬೇಸರ
  ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?
  ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
  ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X