For Quick Alerts
  ALLOW NOTIFICATIONS  
  For Daily Alerts

  ಕಾರು ಚಾಲಕನಿಗೆ ಅಮೀಷಾ ಕಪಾಳಮೋಕ್ಷ

  By Rajendra
  |

  ಕನ್ನಡ ಚಿತ್ರರಂಗಕ್ಕೆ ಅಮೀಷಾ ಬರಲಿದ್ದಾರೆ ಎಂಬ ಸುದ್ದಿ ಹಿಂದೆಯೇ ಮತ್ತೊಂದು ಸುದ್ದಿ ಬಾಲಿವುಡ್ ಚಿತ್ರೋದ್ಯಮದಿಂದ ತೂರಿಬಂದಿದೆ. ಸಿಟ್ಟಿನಿಂದ ಕುದಿಯುತ್ತಿದ್ದ ಅಮೀಷಾ ಮನೋಸ್ಥಿಮಿತ ಕಳೆದುಕೊಂಡು ಕಾರು ಚಾಲನಕನ ಕಪಾಳಕ್ಕೆ ಹೊಡೆದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಶನಿವಾರ(ಮೇ.15) ಸಂಜೆ ನಡೆದಿದೆ.

  ಕಾರನ್ನು ಪಾರ್ಕ್ ಮಾಡಬೇಕಾದರೆ ಕಾರು ತರಚುಕೊಂಡಿದೆ. ಇದರಿಂದ ಕೋಪಗೊಂಡ ಆಕೆ ಕಾರು ಚಾಲನಕ ಮೇಲೆ ಸಿಕ್ಕಾಪಟ್ಟೆ ಎಗರಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಕಡೆಗೆ ಐವತ್ತು ವರ್ಷದ ಕಾರು ಚಾಲನಕನ ಮೇಲೆ ಕೈಮಾಡಿ ಕಪಾಳಕ್ಕೆ ಎರಡು ಬಿಗಿದ್ದಿದ್ದಾರೆ ಎನ್ನಲಾಗಿದೆ.

  ಈ ಘಟನೆಯನ್ನು ಪ್ರತ್ಯಕ್ಷ ಕಂಡವರು ಹೇಳುವುದೇನೆಂದರೆ, ಅಮೀಷಾರ ಹೊಸ ಕಾರನ್ನು ಜಿಮ್ ನ ಹೊರಗಡೆ ಪಾರ್ಕ್ ಮಾಡಲಾಗಿತ್ತು. ವ್ಯಾಯಾಮದ ಬಳಿಕ ಆಕೆ ಬಂದು ನೋಡಿದಾಗ ಕಾರಿಗೆ ತರಚು ಗುರುತುಗಳಾಗಿದ್ದವು. ಕಾರು ಚಾಲಕನನ್ನು ಕರೆದು ಹಿಗ್ಗಾಮುಗ್ಗಾ ಬೈದು ಕಾರಣ ಕೇಳಿದರಂತೆ. ತಡಬಡಾಯಿಸಿದ ಕಾರು ಚಾಲಕನ ಕೆನ್ನೆಗೆ ಬಲವಾಗಿ ಹೊಡೆದರು ಎಂದು ಘಟನೆಯನ್ನು ವಿವರಿಸಿದ್ದಾರೆ.

  ಕಾರು ಚಾಲಕರ ಮೇಲೆ ಹೀಗೆ ಅಮೀಷಾ ಸಿಕ್ಕಾಪಟ್ಟೆ ರಾಂಗಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಅಮೀಷಾ ಕಾರು ಚಾಲಕರ ಮೇಲೆ ಕೈಮಾಡಿದ್ದುಂಟು.ತೀರಾ ಇತ್ತೀಚೆಗೆ ದಾರಿತಪ್ಪಿ ತಪ್ಪು ವಿಳಾಸಕ್ಕೆ ಕರೆದೊಯ್ದ ಚಾಲಕನಿಗೆ ಹಿಗ್ಗಾಮುಗ್ಗ ಬೈದು ಥಳಿಸಿದ್ದರು. ಕಾರು ಚಾಲನಕನಿಗೆ ದೃಷ್ಟಿ ದೋಷ ಇತ್ತು. ಪರೀಕ್ಷಿಸಿ ಕನ್ನಡಕ ಹಾಕಿಸಿಕೊಳ್ಳುವಂತೆ ಹೇಳಿದ್ದೆ. ಆದರೆ ಅವನು ಕೇಳಲಿಲ್ಲ ಎಂದು ಅಮೀಷ್ ಪ್ರತಿಕ್ರಿಯಿಸಿದ್ದರು.

  ಅಮೀಷಾ ಬಳಿ ಕಾರು ಚಾಲಕನಾಗಿ ಈತ ಸುದೀರ್ಘ ಸಮಯದಿಂದ ಕೆಲಸ ಮಾಡುತ್ತಿದ್ದಾನೆ. ಒಮ್ಮೆ ಮುಂಬೈ ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಜೀಪೊಂದು ಇವರ ಕಾರಿನ ಮೇಲೆ ಹರಿದು ಬಂದಿತ್ತು. ಅದೃಷ್ಟವಶಾತ್ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು ಅಮೀಷಾ ಮತ್ತು ಚಾಲಕ.

  ಕಪಾಳಮೋಕ್ಷ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಮೀಷಾ, ಇದೆಲ್ಲಾ ಕಟ್ಟುಕತೆ. ಜಿಮ್ ಹಾಗೂ ನನ್ನ ಮನೆ ಕಾಲ್ನಡಿಗೆಯಷ್ಟು ದೂರದಲ್ಲಿದೆ. ಕೊಡೆ ಹಿಡಿಯಲು ನನ್ನ ಕಾರು ಚಾಲಕನನ್ನು ನನ್ನೊಂದಿಗೆ ಕರೆದೊಯ್ದಿದ್ದೆ. ನೀವು ಬೇಕಿದ್ದರೆ ಜಿಮ್ ಗೆ ಬಂದು ಅಕ್ಕಪಕ್ಕದವರನ್ನು ವಿಚಾರಿಸಬಹುದು ಎಂದಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X