»   » ಶೀರ್ಷಿಕೆ ವಿವಾದದಲ್ಲಿ ಹ್ಯಾಟ್ರಿಕ್ ಹೀರೋ ಜೋಗಯ್ಯ!

ಶೀರ್ಷಿಕೆ ವಿವಾದದಲ್ಲಿ ಹ್ಯಾಟ್ರಿಕ್ ಹೀರೋ ಜೋಗಯ್ಯ!

Posted By:
Subscribe to Filmibeat Kannada

ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಅವರ 'ಜೋಗಯ್ಯ' ಶೀರ್ಷಿಕೆ ಕುರಿತು ಹೊಸ ವಿವಾದವೊಂದು ತಲೆಯೆತ್ತಿದೆ. ಜೋಗಯ್ಯ ಚಿತ್ರದ ಅಡಿಬರಹ ಹೀಗಿದೆ "The Legend of Underworld". ಭೂಗತ ಜಗತ್ತಿನ ದೊರೆಯೊಬ್ಬ ಹೇಗೆ ಜೀವಂತ ದಂತಕಥೆಯಾಗುತ್ತಾನೆ?(Legend) ಎಂಬ ಪ್ರಶ್ನೆಯನ್ನು ಬುದ್ದಿಜೀವಿಗಳು ಎತ್ತಿದ್ದಾರೆ.

ಖ್ಯಾತ ವ್ಯಕ್ತಿಗಳನ್ನು Legend ಎನ್ನಬೇಕೆ ಹೊರತು ಭೂಗತ ದೊರೆಯನ್ನು ಹಾಗೆ ಕರೆಯುವುದು ಎಷ್ಟು ಸರಿ? ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೌಡಿಗಳನ್ನು Legend ಎಂಡು ಕರೆಯುವುದು ಸರಿಯಲ್ಲ ಎಂಬ ಆರೋಪ ಪ್ರಜ್ಞಾವಂತರ ವಲಯದಿಂದ ಕೇಳಿಬಂದಿದೆ.

ಈ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಚಿತ್ರದ ನಿರ್ದೇಶಕ ಪ್ರೇಮ್, ನಾಯಕ ನಟ ಶಿವರಾಜ್ ಕುಮಾರ್ ಹಾಗೂ ನಿರ್ಮಾಪಕಿ ರಕ್ಷಿತಾ ಪ್ರೇಮ್ ತಡಬಡಾಯಿಸಿದ್ದಾರೆ. ಕಡೆಗೆ ಅವರವರ ದಾರಿಯಲ್ಲಿ ಎಲ್ಲರೂ Legendಗಳೆ ಎಂದು ಹೇಳಿ ನುಣಿಚಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.

ಕಡೆಗೆ ಪ್ರೇಮ್ ಹೇಳುವುದೇನೆಂದರೆ, ಮೊದಲು ಜೋಗಯ್ಯ ನೋಡಿ. ಬಳಿಕ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಎಂದಿದ್ದಾರೆ. ಜೋಗಯ್ಯ ಶೀರ್ಷಿಕೆಗೆ ಸಂಬಂಧಿಸಿದಂತೆ ಪ್ರಜ್ಞಾವಂತರು ಎತ್ತಿರುವ ಈ ಪ್ರಶ್ನೆ ಪ್ರೇಮ್ ಹಾಗೂ ರಕ್ಷಿತಾರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಭೂಗತ ದೊರೆಯೊಬ್ಬನನ್ನು ಜೀವಂತ ದಂತಕಥೆ ಎನ್ನುವುದು ಸರಿಯಲ್ಲ. ಅವನನ್ನು ಹಾಗೆ ಕರೆಯುವುದರಿಂದ ಜೀವಂತ ದಂತಕಥೆಯಾದ ಎಷ್ಟೋ ಮಂದಿಗೆ ಅವಮಾನ ಮಾಡಿದಂತೆ. ಇಲ್ಲ ಶೀರ್ಷಿಕೆಯನ್ನು "ಜೋಗಯ್ಯ -The Legend" ಎಂದಷ್ಟೆ ಇಡಿ ಎಂಬ ಸಲಹೆ ಕೊಡಲಾಗಿದೆ. ಪರಿಶೀಲಿಸುವುದಾಗಿ ಶಿವರಾಜ್ ಕುಮಾರ್ ಭರವಸೆ ನೀಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada