»   » ಪ್ರಕಾಶ್ ರೈ, ಲಲಿತಾ ವಿವಾಹ ವಿಚ್ಛೇದನಕ್ಕೆ ಒಪ್ಪಿಗೆ

ಪ್ರಕಾಶ್ ರೈ, ಲಲಿತಾ ವಿವಾಹ ವಿಚ್ಛೇದನಕ್ಕೆ ಒಪ್ಪಿಗೆ

Subscribe to Filmibeat Kannada

ನಟ, ನಿರ್ದೇಶಕ ಮತ್ತು ನಿರ್ಮಾಪಕ ಪ್ರಕಾಶ್ ರೈ ಅವರಿಗೆ ಕಡೆಗೂ ಪತ್ನಿ ಲಲಿತಾ ಕುಮಾರಿಯಿಂದ ವಿವಾಹ ವಿಚ್ಛೇದನ ದೊರಕಿದೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶ ಬಿ ರಾಮಲಿಂಗಂ ಅವರು ಪ್ರಕಾಶ್ ರೈ ಮತ್ತು ಲಲಿತಾ ಕುಮಾರಿ ವಿವಾಹ ವಿಚ್ಛೇದನಕ್ಕೆ ಬುಧವಾರ ಅನುಮತಿ ನೀಡಿದ್ದಾರೆ.

ಈ ಹಿಂದೆ ಪ್ರಕಾಶ್ ರೈ ದಂಪತಿಗಳನ್ನು ಒಂದು ಮಾಡಲು ಕಾನೂನನ್ನು ಬದಿಗಿಟ್ಟ್ಟು ವಕೀಲರು ಸಾಕಷ್ಟು ಶ್ರಮಿಸಿದ್ದರು. ಆದರೆ ಅವರ ಪ್ರಯತ್ನ ಫಲಕಾರಿಯಾಗದೆ ವಿವಾಹ ವಿಚ್ಛೇದನದಲ್ಲಿ ಅಂತ್ಯವಾಗಿದೆ. ಒಪ್ಪಂದ ಪತ್ರಗಳನ್ನು ನೋಡಿದ ಬಳಿಕ ನ್ಯಾಯಾಧೀಶ ರಾಮಲಿಂಗಂ ಅವರು ಪ್ರಕಾಶ್ ರೈ ದಂಪತಿಗಳೊಂದಿಗೆ ವೈಯಕ್ತಿಕವಾಗಿ ಮಾತನಾಡಿ ನವೆಂಬರ್ 18ಕ್ಕೆ ತೀರ್ಪನ್ನು ಮುಂದೂಡಿದ್ದರು.

ಒಡಂಬಡಿಕೆ ಪ್ರಕಾರ ಪ್ರಕಾಶ್ ರೈ ಅವರು ಮಕ್ಕಳ ಪೋಷಣೆಗಾಗಿ ಪ್ರತಿ ತಿಂಗಳು ಇಂತಿಷ್ಟು ಎಂದು ಹಣ ಕೊಡಬೇಕಾಗುತ್ತದೆ. ಪ್ರಕಾಶ್ ರೈ ಅವರು ಲಲಿತಾ ಕುಮಾರಿ ಅವರನ್ನು ಡಿಸೆಂಬರ್ 25, 1994ರಲ್ಲಿ ಮದುವೆಯಾಗಿದ್ದರು. ಮದುವೆಯಾದ 15 ವರ್ಷಗಳ ಬಳಿಕ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ ಒಂದು ವರ್ಷದಿಂದ ಲಲಿತಾ ಅವರೊಂದಿಗೆ ಪ್ರಕಾಶ್ ರೈ ವಾಸಿಸುತ್ತಿಲ್ಲ.

ಪ್ರಕಾಶ್ ರೈ ತನಗೆ ಪ್ರತಿ ತಿಂಗಳು ರು.2 ಲಕ್ಷ ಜೀವನಾಂಶ ಕೊಡಬೇಕು ಎಂದು ಲಲಿತಾ ಕುಮಾರಿ ಅವರು ಅರ್ಜಿಯಲ್ಲಿ ಬೇಡಿಕೆ ಸಲ್ಲಿಸಿದ್ದರು. ಒಟ್ಟಿನಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ತಾರಾ ಜೋಡಿ ವಿವಾಹ ವಿಚ್ಛೇದನದ ಮೂಲಕ ದೂರವಾಗುತ್ತಿರುವು ವಿಪರ್ಯಾಸ. ಪ್ರಕಾಶ್ ರೈ ದಂಪತಿಗಳಿಗೆ ಮೂರು ಮಕ್ಕಳು (ಗಂಡು ಮಗು ಮೃತಪಟ್ಟಿದೆ) ಇದ್ದಾರೆ. ಇದೀಗ ಆ ಮಕ್ಕಳನ್ನು ಲಲಿತಾ ಕುಮಾರಿ ಅವರ ಸುಪರ್ದಿಗೆ ಒಪ್ಪಿಸಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada