»   » ಶಾರುಖ್ ಖಾನ್ ಸಿನಿಮಾ ಜಿಹಾದಿಗಳಿಗೆ ಸ್ಫೂರ್ತಿ

ಶಾರುಖ್ ಖಾನ್ ಸಿನಿಮಾ ಜಿಹಾದಿಗಳಿಗೆ ಸ್ಫೂರ್ತಿ

Posted By:
Subscribe to Filmibeat Kannada

ಶಾರುಖ್ ಖಾನ್ ನಾಯಕತ್ವದ ಮೈ ನೇಮ್‌ಇಸ್‌ಖಾನ್ ಚಿತ್ರ ಯುವ ಜಿಹಾದಿಗಳ ಬ್ರೈನ್ ವಾಶ್ ಮಾಡಲು ಬಳಸಲಾಗುತ್ತಿದೆ ಎಂದು ಭಯೋತ್ಪಾದಕನ ಹೇಳಿಕೆ ಶಿವಸೇನೆ ನಾಯಕರ ಕಣ್ಣು ಕೆಂಪಾಗಿಸಿದೆ.

ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಕಿಡಿಕಾರಿರುವ ಠಾಕ್ರೆ, ಮೈ ನೇಮ್ ಇಸ್ ಖಾನ್ ಚಿತ್ರ ಬಿಡುಗಡೆಗೆ ಸಹಕರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಉತ್ತರಿಸಬೇದು ಒತ್ತಾಯಿಸಿದ್ದಾರೆ. ಶಾರುಖ್ ಸಿನಿಮಾ ಭಾರತದ ವಿರುದ್ಧ ಹೋರಾಡುವಂತೆ
ಮುಸ್ಲಿಂ ಯುವಕರನ್ನು ಪ್ರೇರೇಪಿಸಲು ಬಳಸಲಾಗುತ್ತಿದೆ ಎಂದು ಭಯೋತ್ಪಾದಕ ಹೇಳಿರುವುದರಿಂದ ಕರಣ್ ಜೋಹರ್ ಹಾಗೂ ಶಾರೂಖ್ ಇದಕ್ಕೆ ಉತ್ತರ ನೀಡಬೇಕೆಂದು ಒತ್ತಾಯಿಸಿದ್ದು, ಸಿನಿಮಾ ಬಿಡುಗಡೆಗೆ ಸಹಕರಿಸಿದ ಸಿಎಂ ಚೌಹಾಣ್,ಇದೀಗ ಯಾಕೆ ಸುಮ್ಮನಿದ್ದಾರೆ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

ಶಾರುಖ್ ಖಾನ್ ಅವರ ಮೈ ನೇಮ್ ಇಸ್ ಖಾನ್ ಚಿತ್ರ ಬಳಸಿ ಯುವ ಜಿಹಾದಿಗಳಿಗೆ ಸ್ಫೂರ್ತಿ ತುಂಬಲಾಗುತ್ತಿದೆ ಎಂದು ಉಗ್ರನೊಬ್ಬನ್ನು ತಪ್ಪೊಪ್ಪಿಗೆ ನೀಡಿರುವ ಬಗ್ಗೆ ವರದಿ ಬಂದಿರುವ ಹಿನ್ನೆಲೆಯಲ್ಲಿ ಶಾರುಖ್ ಹಾಗೂ ಕರಣ್ ಇಬ್ಬರೂ ತಪ್ಪಿತಸ್ಥರು. ಅವರಿಗೆ ಸಹಾಯ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಠಾಕ್ರೆ ಕಿಡಿಕಾರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada