»   » ನಟಿ ಖುಷ್ಬು ವಿರುದ್ಧ ಸುಪ್ರೀಂ ಕೋರ್ಟ್ ಗರಂ

ನಟಿ ಖುಷ್ಬು ವಿರುದ್ಧ ಸುಪ್ರೀಂ ಕೋರ್ಟ್ ಗರಂ

Posted By:
Subscribe to Filmibeat Kannada

'ಹೆಣ್ಣು ಮಕ್ಕಳಿಗೆ ವಿವಾಹ ಪೂರ್ವಲೈಂಗಿಕತೆ ತಪ್ಪಲ್ಲ" ಎಂದು ನಟಿ ಖುಷ್ಬು ಐದು ವರ್ಷಗಳ ಹಿಂದೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸುಪ್ರೀಂ ಕೋರ್ಟ್ ಗರಂ ಆಗಿದೆ. ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಹೇಳಿಕೆ ನೀಡುವ ಅಗತ್ಯ ಏನಿತ್ತು ಎಂದು ಖುಷ್ಬು ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಮುಖ್ಯ ನಾಯ್ಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರಿದ್ದ ನ್ಯಾಯಪೀಠ ಕನ್ಯತ್ವದ ಬಗ್ಗೆ ಇಂತಹ ಗಂಭೀರ ಹೇಳಿಕೆ ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದೆ. 'ವಿವಾಹ ಪೂರ್ವ ಲೈಂಗಿಕತೆ' ಬಗ್ಗೆ ಖುಷ್ಬು ಕೊಟ್ಟ ಹೇಳಿಕೆಗೆ ದೇಶದಾದ್ಯಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಖುಷ್ಬು ವಿರುದ್ಧ 23 ನಾನಾ ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಖುಷ್ಬು ಸುಪ್ರೀಂಕೋರ್ಟ್ ನ ಮೊರೆಹೋಗಿದ್ದರು.

ತಮ್ಮ ವಿವಾದಾತ್ಮಕ ಹೇಳಿಕೆ ಸಂಬಂಧಿಸಿದ ಸಂದರ್ಶನದ ನಕಲು ಪ್ರತಿಗಳನ್ನು ಎರಡು ವಾರಗಳಲ್ಲಿ ಕೋರ್ಟ್ ಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಈ ರೀತಿಯ ಬೇಜವಾಬ್ದಾರಿ, ಕೆರಳಿಸುವ ಹೇಳಿಕೆಗಳನ್ನು ಕೊಟ್ಟ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ.

Please Wait while comments are loading...