»   » ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ವಿಜಯ್

ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ವಿಜಯ್

Posted By:
Subscribe to Filmibeat Kannada

ಚಿತ್ರನಟ ದುನಿಯಾ ವಿಜಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಗುಲ್ಲು ರಾಜ್ಯದಾದ್ಯಂತ ಮಿಂಚಿನ ಸಂಚಾರ ಉಂಟುಮಾಡಿದೆ. ಎಸ್ಸೆಂಎಸ್ ಗಳಲ್ಲಿ ಹರಿದಾಡಿದ ಈ ಸುದ್ದಿ ವಿಜಯ್ ಅಭಿಮಾನಿಗಳನ್ನು ದಂಗುಬಡಿಸಿತ್ತು. ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ. ಇದು ಕಿಡಿಗೇಡಿಗಳ ಕೃತ್ಯ ಎಂದು ದುನಿಯಾ ವಿಜಯ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ದುನಿಯಾ ವಿಜಯ್ ವಿವರ ನೀಡಿದ್ದು, ನನ್ನ ಏಳಿಗೆಯನ್ನು ಸಹಿಸದ ಕಿಡಿಗೇಡಿಗಳು ಈ ರೀತಿ ಎಸ್ಸೆಂಎಸ್ ಮೂಲಕ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುಳ್ಳು ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡುರುವುದಾಗಿ ದುನಿಯಾ ವಿಜಯ್ ತಿಳಿಸಿದ್ದಾರೆ.

ನಾನು ಆರಾಮವಾಗಿದ್ದೇನೆ. ನಾನು ಯಾವತ್ತೂ ಆತ್ಮಹತ್ಯೆಗೆ ಪ್ರಯತ್ನಿಸಿದವನೇ ಅಲ್ಲ ಎಂದು 'ಕರಿಚಿರತೆ ' ಚಿತ್ರೀಕರಣ ವೇಳೆ ವಿಜಯ್ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಬೆಂಗಳೂರು ಶ್ರೀರಾಂಪುರದಲ್ಲಿ 'ಕರಿಚಿರತೆ' ಚಿತ್ರೀಕರಣ ಭರದಿಂದ ಸಾಗಿದೆ.

ಇದೊಂದು ಸೈಬರ್ ಅಪರಾಧವಾಗಿದ್ದು ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಎಸ್ಸೆಂಎಸ್ ಮೂಲಕ ಸುಳ್ಳು ಸಂದೇಶಗಳನ್ನು ರವಾನಿಸುತ್ತಿರುವವರನ್ನು ಪತ್ತೆ ಹಚ್ಚಿ ಶೀಘ್ರದಲ್ಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಸುನಿಲ್ ಅಗರವಾಲ್ ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada