ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ನಿರ್ಮಾಪಕರು!

ಈ ಪುಣ್ಯಾತಗಿತ್ತಿಯ ಹೆಸರು ಜೆನ್ನಿ ಡಿ ಅಂತ. ಈಕೆಯ ಈ ರೀತಿಯ ಮಾತುಗಳಿಗೆ ಕಾರಣವಾಗಿರುವುದು ನಟಿ ನಿಖಿತಾ ಪ್ರಕರಣ. ಆಕೆಯನ್ನು ಕನ್ನಡ ಚಲನಚಿತ್ರ ನಿರ್ಮಾಪಕರು ನಿಷೇಧಿಸಿದ ಬಗ್ಗೆ ಏನೋ ಒಂಥರಾ ಆಗಿ ಹೀಗೆ ಅಂದಿದ್ದಾರೆ. ಕನ್ನಡ ಚಲನಚಿತ್ರ ನಿರ್ಮಾಪಕ ಮುನಿರತ್ನ ಅವರನ್ನು ಈಡಿಯಟ್ ಎಂದೂ ಈಕೆ ಜರಿದಿದ್ದಾರೆ.
ದಕ್ಷಿಣದ (ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ) ಚಿತ್ರಗಳಲ್ಲಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಪ್ರವೃತ್ತಿ ಜೋರಾಗಿ ನಡೆಯುತ್ತಿದೆ. ಕಳೆದ ಮೂರು ತಿಂಗಳಲ್ಲಿ ತಮ್ಮನ್ನು ಏನಿಲ್ಲವೆಂದರೂ ಕನ್ನಡ, ತೆಲುಗು, ತಮಿಳಿನ 10 ಮಂದಿ ನಿರ್ಮಾಪಕರು ಮಂಚಕ್ಕೆ ಆಹ್ವಾನಿಸಿದ್ದಾರೆ. ನಾಯಕಿ ಸ್ಥಾನ ಬೇಕು ಎಂದರೆ ನಿರ್ಮಾಪಕರ ಲೈಂಗಿಕ ಬಯಕೆ ಈಡೇರಿಸಬೇಕು. ಇಲ್ಲದಿದ್ದರೆ ಅವಕಾಶ ಸಿಗುವುದಿಲ್ಲ ಎಂದಿದ್ದಾರೆ ಜೆನ್ನಿ.
ಅಂದಹಾಗೆ ಜೆನ್ನಿ ಈ ಹಿಂದೆ 'ಆರಕ್ಷಣ್' ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿ ಬೆತ್ತಲಾಗಿದ್ದಳು. ಮೀಸಲಾತಿ ಕುರಿತ ಚಳವಳಿಗಾಗಿ ಆಕೆ ಹೀಗೆ ಮಾಡಿದ್ದರು. ಈಕೆಯ ದೇಹದ ಮೇಲಿನ, ಕೆಳಗಿನ ಭಾಗಗಳನ್ನು ಮುಚ್ಚಿದ ಪೋಸ್ಟರ್‌ಗಳು ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡಿದ್ದವು. ಇಂತಹವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇದೆ ಅಂತೀರಾ? (ಏಜೆನ್ಸೀಸ್)


Click it and Unblock the Notifications











