ಪ್ರಣೀತಾ ಮೇಲೆ ಓಂ ಪ್ರಕಾಶ್ ಕೆಟ್ಟ ಪದ ಪ್ರಯೋಗ

ಜನ ಕೂಡ ಓಂ ಪ್ರತಿಜ್ಞೆಯನ್ನು ಆ ಕಿವಿಯಲ್ಲಿ ಹಾಕಿಕೊಂಡು ಈ ಕಿವಿಯಲ್ಲಿ ಬಿಟ್ಟಿದ್ದರು. ಈಗ ಮತ್ತೊಮ್ಮೆ ನಟಿ ಪ್ರಣೀತಾ ಮೇಲೆ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ ಎನ್ನಲಾಗಿದೆ. ದುನಿಯಾ ವಿಜಯ್ ಮುಖ್ಯಭೂಮಿಕೆಯಲ್ಲಿರುವ 'ಭೀಮಾ ತೀರದಲ್ಲಿ' ಎಂಬ ಚಿತ್ರದಲ್ಲಿ ಪ್ರಣೀತಾ ನಾಯಕಿ.
ಈ ಚಿತ್ರದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಪ್ರಣೀತಾ ಅವರನ್ನು ಓಂ ಕೆಟ್ಟ ಪದವೊಂದರಿಂದ ಕರೆದಿದ್ದಾರಂತೆ. ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದ ಪ್ರಣೀತಾ ಸುಮ್ಮನಾಗಿದ್ದಾರೆ. ಹಾಗಾಗಿ ಈ ಪ್ರಕರಣ ಬಯಲಿಗೆ ಬಂದಿಲ್ಲ ಎನ್ನುತ್ತವೆ ಗಾಂಧಿನಗರ ಮೂಲಗಳು. ಸದ್ಯಕ್ಕೆ ಆ ಕೆಟ್ಟ ಪದ ಏನು ಎಂಬುದು ನಿಗೂಢವಾಗಿದೆ. (ಏಜೆನ್ಸೀಸ್)
English summary
Sources says that Kannada film director Om Prakash Rao uses foul languages on actress Praneetha. He used dirty language in his upcoming movie Bheema Theeradalli pressmeet.


Click it and Unblock the Notifications