»   »  ಜಯಮಾಲಾ, ಶಬರಿಮಲೆ ವಿವಾದ ಅಧಿಕಾರಿ ಬಂಧನ

ಜಯಮಾಲಾ, ಶಬರಿಮಲೆ ವಿವಾದ ಅಧಿಕಾರಿ ಬಂಧನ

Posted By:
Subscribe to Filmibeat Kannada

ತಿರುವನಂತಪುರಂ, ಜು. 23 : ನಟಿ ಜಯಮಾಲಾ ಅವರು ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿ ಪ್ರವೇಶಿಸಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಗುಲದ ಮಾಜಿ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ವಿ ಎಸ್ ರಾಜಗೋಪಾಲ್ ಅವರನ್ನು ಅಪರಾಧ ಪತ್ತೆ ವಿಭಾಗದ ಪೊಲೀಸರು ಕೊಟ್ಟಾಯಂ ನಲ್ಲಿ ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಒಬ್ಬ ಜ್ಯೋತಿಷಿಯು ಸೇರಿದಂತೆ ಮೂವರು ವ್ಯಕ್ತಿಗಳ ಸಂಚಿನ ಫಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ದೇವಾಲಯಕ್ಕೆ ಸಂಬಂಧಿಸಿ ದೇವಪ್ರಶ್ನೆ ಕಾರ್ಯಕ್ರಮ ನಡೆಸಿದಾಗ ರಾಜಗೋಪಾಲ್ ಅವರು ಜಯಮಾಲಾ ಅವರ ಬೆಂಗಳೂರಿನ ನಿವಾಸಕ್ಕೆ ದೂರವಾಣಿ ಕರೆಮಾಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ದೇವಪ್ರಶ್ನೆ ವೇಳೆ ಮಹಿಳೆಯೊಬ್ಬರು ಗರ್ಭಗುಡಿ ಪ್ರವೇಶಿಸಿದ್ದರು ಎಂದು ಕಂಡುಬಂದಿತ್ತು.

ಶಬರಿಮಲೆ ದೇವಾಲಯದಲ್ಲಿ 10 ರಿಂದ 50 ವರ್ಷವರೆಗಿನ ಮಹಿಳೆಯರು ಗರ್ಭಗುಡಿ ಪ್ರವೇಶಿಸುವಂತಿಲ್ಲ. ಜನಜಂಗುಳಿಯ ವೇಳೆ ನನ್ನನ್ನು ಗರ್ಭಗುಡಿಯ ಒಳಗೆ ತಳ್ಳಲಾಗಿತ್ತು ಎಂದು ಜಯಮಾಲಾ ಆಡಳಿತ ಮಂಡಳಿಗೆ ಫ್ಯಾಕ್ಸ್ ಸಂದೇಶ ಕಳುಹಿಸಿದ್ದರು. ಜಯಮಾಲಾ ಅವರನ್ನು ಆರೋಪಿಯೆಂದು ಪೊಲೀಸರು ಪರಿಗಣಿಸದೆ ಕೇಸ್ ವಾಪಾಸ್ ಪಡೆದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada