For Quick Alerts
  ALLOW NOTIFICATIONS  
  For Daily Alerts

  ನಟಿ ಯಮುನಾ ಡೀಲ್ ಕುದುರಿಸುತ್ತಿದ್ದದ್ದು ಹೀಗೆ

  By Rajendra
  |

  ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಬೆಂಗಳೂರು ಪೊಲೀಸರಿಗೆ ಸೆರೆಸಿಕ್ಕಿರುವ ನಟಿ ಯಮುನಾ ಪಕ್ಕಾ ವ್ಯವಹಾರ ಚತುರೆ ಎಂಬ ಅಂಶ ಬೆಳಕಿಗೆ ಬಂದಿದೆ. ಪಕ್ಕಾ ಪ್ಲಾನ್ ಪ್ರಕಾರ ಈಕೆ ಡೀಲ್‌ಗಳನ್ನು ಕುದುರಿಸುತ್ತಿದ್ದರು. ಪೊಲೀಸರಿಗೆ ಎಲ್ಲೂ ಸುಳಿವು ಸಿಗದ ಹಾಗೆ ಇಷ್ಟು ದಿನ ಈ ದಂಧೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ.

  ಒಬ್ಬ ಗಿರಾಕಿಯನ್ನು ಆಕೆ ಒಮ್ಮೆ ಮಾತ್ರ ಸಂಪರ್ಕಿಸುತ್ತಿದ್ದಳು.ಪುನಃ ಆತನೊಂದಿಗೆ ಯಾವುದೇ ಕಾರಣಕ್ಕೂ ಸಂಬಂಧವಿಟ್ಟುಕೊಳ್ಳುತ್ತಿರಲಿಲ್ಲ. ಹಾಗಾಗಿ ಆಕೆಗೆ ರೆಗ್ಯುಲರ್ ಗಿರಾಕಿಗಳು ಯಾರೂ ಇರಲಿಲ್ಲ. ಎಷ್ಟೇ ದುಡ್ಡು ಕೊಡುತ್ತೀನಿ ಎಂದರೂ ಆಕೆ ಬಿಲ್ ಕುಲ್ ಒಪ್ಪುತ್ತಿರಲಿಲ್ಲ ಎಂಬ ಅಂಶಗಳು ಪೊಲೀಸರು ಬಹಿರಂಗ ಪಡಿಸಿದ್ದಾರೆ.

  ಗಿರಾಕಿ ತನಗೆ ಒಪ್ಪುಗೆಯಾದರೆ ಮಾತ್ರ ಆಕೆ ಮುಂದುವರಿಯುತ್ತಿದ್ದಳು. ಒಬ್ಬ ಗಿರಾಕಿಯೊಂದಿಗೆ ಆಕೆ ಒಮ್ಮೆ ಮಾತ್ರ ಕಳೆಯುತ್ತಿದ್ದರು. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಸಂಪರ್ಕಿಸುತ್ತಿರಲಿಲ್ಲ. ಇಷ್ಟೆಲ್ಲಾ ಜಾಗ್ರತೆ ವಹಿಸಿದ್ದರೂ ಆಕೆ ಪೊಲೀಸರಿಗೆ ಸಿಕ್ಕಿಬಿದ್ದದ್ದು ಹೇಗೆ? ಎಂಬ ಪ್ರಶ್ನೆ ಮಾತ್ರ ಹಾಗೆ ಉಳಿದಿದೆ.

  ಆಕೆಯ ಏಜೆಂಟ್ ಸುರಕ್ಷಿತ್ ಗಿರಾಕಿಗಳ ಪಟ್ಟಿಯನ್ನು ನಿರಂತರವಾಗಿ ಅಪ್ ಡೇಟ್ ಮಾಡುತ್ತಿದ್ದ. ಯಾವುದೇ ಕಾರಣಕ್ಕೂ ಗಿರಾಕಿಗಳಿಗೆ ಎರಡನೇ ಛಾನ್ಸ್ ಕೊಡುತ್ತಿರಲಿಲ್ಲ. ಈತನಿಗೆ ಯಮುನಾ ಸೇರಿದಂತೆ ಮುಂಬೈ ಮತ್ತು ದೆಹಲಿ ಮೂಲದ ಹಲವಾರು ಹುಡುಗಿಯರು ಸಂಪರ್ಕದಲ್ಲಿದ್ದರು ಎನ್ನುತ್ತವೆ ಮೂಲಗಳು.

  ತಮ್ಮ ದಂಧೆಗೆ ಕೇವಲ ವಾರಾಂತ್ಯದ ದಿನಗಳನ್ನು ಮಾತ್ರ ಸುರಕ್ಷಿತ್ ಆಯ್ಕೆ ಮಾಡಿಕೊಳ್ಳುತ್ತಿದ್ದ. ಪಂಚತಾರಾ, ಸಪ್ತತಾರಾ ಹೋಟೆಲ್‌ಗಳ ಕೊಠಡಿಗಳನ್ನು ತನ್ನ ಹೆಸರಿನಲ್ಲೇ ಬುಕ್ ಮಾಡುತ್ತಿದ್ದ. ಇಂತಿಷ್ಟೆ ಗಂಟೆಗಳಂತೆ ಮಾತ್ರ 'ವ್ಯವಹಾರ' ನಡೆಯುತ್ತಿದ್ದ ಕಾರಣ ಈತನ ಮೇಲೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ.

  ಈತನ ಸೂಚನೆ, ಸಲಹೆಗಳ ಮೇರೆಗೆ ಯಮುನಾ ಕೂಡ ನಡೆದುಕೊಳ್ಳುತ್ತಿದ್ದರು. ಇಷ್ಟೆಲ್ಲಾ ಜಾಗ್ರತೆ ವಹಿಸಿದ್ದರೂ ಬೆಂಗಳೂರು ಪೊಲೀಸರು ಹೈಟೆಕ್ ವೇಶ್ಯಾಜಾಲದ ವಾಸನೆ ಹಿಡಿದಿದು ಇವರೆಲ್ಲರನ್ನೂ ಬಂಧಿಸಿರುವುದು ನಿಜಕ್ಕೂ ಗ್ರೇಟ್. ಆದರೆ ಸದ್ಯಕ್ಕೆ ಯಮುನಾ ಜಾಮೀನು ಪಡೆದು ಪೊಲೀಸ್ ಬಂಧನದಿಂದ ಹೊರಬಂದಿದ್ದಾರೆ.[ವೇಶ್ಯಾವಾಟಿಕೆ]

  English summary
  Bangalore police sources says that Actress Yamuna never would offered her services for a second time to the same client. Also her agent Surakshit, never allowed clients a second time even with his other girls. Actress Yamuna remanded to custody, but are out on bail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X