»   »  ಚಿತ್ರೋದ್ಯಮದಲ್ಲಿ ಕಾಲೆಳೆಯುವವರೇ ಜಾಸ್ತಿ: ಚಂದ್ರು

ಚಿತ್ರೋದ್ಯಮದಲ್ಲಿ ಕಾಲೆಳೆಯುವವರೇ ಜಾಸ್ತಿ: ಚಂದ್ರು

Posted By:
Subscribe to Filmibeat Kannada

ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಪ್ರೇಮ್ ಕಹಾನಿ'. ಬಿಡುಗಡೆಯಾಗಿ ಕೆಲವು ದಿನಳಷ್ಟೇ ಆಗಿದೆ. ಆದರೆ ಪ್ರೇಮ್ ಕಹಾನಿ ನಿರೀಕ್ಷಿಸಿದ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತ್ತಿಲ್ಲ ಎಂಬ ಮಾತು ಚಿತ್ರೋದ್ಯಮದಲ್ಲಿ ಕೇಳಿಬರುತ್ತಿದೆ. ಆದರೆ ಈ ಮಾತುಗಳನ್ನು ಚಿತ್ರದ ನಿರ್ದೇಶಕ ಆರ್ ಚಂದ್ರು ಸಾರಾಸಗಟಾಗಿ ತಳ್ಳಿ ಹಾಕುತ್ತಾರೆ.

''ಚಿತ್ರೋದ್ಯಮ ಪ್ರೇಮ್ ಕಹಾನಿಯನ್ನು ಪ್ಲಾಪ್ ಚಿತ್ರ ಎಂದು ತೀರ್ಮಾನಿಸಿದೆ. ನಾನು ಈ ಹಿಂದೆ ತಮ್ಮ ಚಿತ್ರ 25 ವಾರ ಪೂರೈಸುತ್ತೆ ಎಂದು ಹೇಳಿದ್ದೆ. ಈ ಮಾತಿಗೆ ನಾನು ಈಗಲೂ ಬದ್ಧ. ತಮ್ಮ ಚಿತ್ರ ಖಂಡಿತ ಈಗುರಿಯನ್ನು ತಲುಪುತ್ತದೆ. ಚಿತ್ರವನ್ನು ಯಶಸ್ವಿಯತ್ತ ಕೊಂಡೊಯ್ಯುತ್ತೇನೆ'' ಎಂದು ಚಂದ್ರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫ್ಲಾಪ್ ಚಿತ್ರ ಮಾಡುತ್ತೇನೆ ಎಂದು ಯಾವ ನಿರ್ದೇಶಕನೂ ಹೇಳುವುದಿಲ್ಲ. ಸಂದೇಶಾತ್ಮಕ ಚಿತ್ರವೊಂದನ್ನುನೀಡಿದ್ದೇನೆ. ಪ್ರೇಕ್ಷಕರಿಗೆ ಅಸಲಿ ಪ್ರೇಮ ಕಥೆಯನ್ನು ಕೊಟ್ಟಿದ್ದೇನೆ. ಚಿತ್ರದ ಉತ್ತಮ ಅಂಶಗಳ ಬಗ್ಗೆ ನಾನೇ ಮಾತನಾಡದಿದ್ದರೆ ಪ್ರೇಕ್ಷಕ ಚಿತ್ರಮಂದಿರಕ್ಕೆ ಹೇಗೆ ಬರುತ್ತಾನೆ? ಚಿತ್ರೋದ್ಯಮದಲ್ಲಿ ಕಾಲೆಳೆಯುವವರೇ ಹೆಚ್ಚಾಗಿದ್ದಾರೆ ಎಂದು ಚಂದ್ರು ಪ್ರತಿಕ್ರಿಯಿಸಿದ್ದಾರೆ.

ನನ್ನ ಚಿತ್ರ ಬಿಡುಗಡೆಯಾದ ದಿನವೇ ಫ್ಲಾಪ್ ಚಿತ್ರ ಎಂದು ಹಣೆಪಟ್ಟಿ ಕಟ್ಟಿದ್ದರು. ನನಗೆ ಇದರಿಂದ ನಿಜಕ್ಕೂ ನೋವುಂಟಾಯಿತು. ತಮ್ಮ ಮುಂದಿನ ಚಿತ್ರ 'ಮಳೆ'ಗೆ ಯಾವುದೇ ಪ್ರಚಾರ ಕೊಡಬಾರದು ಎಂದು ತೀರ್ಮಾನಿಸಿದ್ದೇನೆ. ಚಿತ್ರ ಮುಗಿಯುವವರೆಗೂ ನಾನು ಏನೂ ಮಾತನಾಡುವುದಿಲ್ಲ ಎಂದು ಚಂದ್ರು ಗಂಭೀರವಾಗಿ ಉತ್ತರಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X