»   »  ಸೆನ್ಸಾರ್ ಮೇಲೆ ಕೋಡ್ಲು ರಾಮಕೃಷ್ಣ ವಾಗ್ದಾಳಿ

ಸೆನ್ಸಾರ್ ಮೇಲೆ ಕೋಡ್ಲು ರಾಮಕೃಷ್ಣ ವಾಗ್ದಾಳಿ

Subscribe to Filmibeat Kannada
Kodlu Ramakrishna
ಚಿತ್ರದ ಉದ್ದೇಶ ಏನು ಎಂದು ಅರ್ಥ ಮಾಡಿಕೊಳ್ಳದೆ 'ಬೆಟ್ಟದಪುರದ ದಿಟ್ಟ ಮಕ್ಕಳು' ಚಿತ್ರಕ್ಕೆ ಮಕ್ಕಳ ಚಿತ್ರಎಂಬ ಸರ್ಟಿಫಿಕೇಟ್ ನೀಡುತ್ತಿಲ್ಲ ಎಂದು ನಿರ್ದೇಶಕ ಕೋಡ್ಲು ರಾಮಕೃಷ್ಣ ಸೆನ್ಸಾರ್ ಮಂಡಳಿಯ ಮೇಲೆ ವಾಗ್ದಾಳಿ ಮಾಡಿದ್ದಾರೆ. ಮಂಡಳಿಯ ಎಲ್ಲಾ ಸದಸ್ಯರು ಕೈಕಟ್ಟಿ ಕುಳಿತಿದ್ದಾರೆ. ಚಂದ್ರಶೇಖರ್ ಅವರನ್ನು ಹೊರತುಪಡಿಸಿ ಯಾರೂ ತುಟಿ ಬಿಚ್ಚುತ್ತಿಲ್ಲ. ಮಕ್ಕಳ ಚಿತ್ರಕ್ಕೆ ಅದರದೇ ಆದ ಮಾನದಂಡಗಳಿವೆ. ಅವು ಏನು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ವಿಚಾರಿಸಲು ಹೊರಟರೆ ನಿರಾಸೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಕೋಡ್ಲು.

ವರ್ಷದಲ್ಲಿ ಎರಡು ಮಕ್ಕಳ ಚಿತ್ರಗಳಿಗೆ ಸರಕಾರ ತಲಾ ರು.25 ಲಕ್ಷ ಸಬ್ಸಿಡಿ ನೀಡುತ್ತಿದೆ. ಆದರೂ ಮಕ್ಕಳ ಚಿತ್ರ ಎಂದು ಹೇಳಲು ಇರುವ ಮಾನದಂಡವಾದರೂ ಏನು ಎಂದು ವಾಣಿಜ್ಯ ಮಂಡಳಿಯನ್ನು ಕೇಳಿದರೆ, ಆ ರೀತಿಯ ಮಾನದಂಡಗಳೇನು ಸೆನ್ಸಾರ್ ಮಂಡಳಿ ವಿಧಿಸಿಲ್ಲ ಎನ್ನುತ್ತಾರೆ. ಯಾರಿಗೆ ಹೇಳಿಕೊಳ್ಳೋಣ ಹೇಳಿ ನಮ್ಮ ಕಷ್ಟ ಎನ್ನುತ್ತಾರೆ ಕೋಡ್ಲು.

ಬೆಟ್ಟದಪುರದ ದಿಟ್ಟ ಮಕ್ಕಳು ಚಿತ್ರದಲ್ಲಿ ಮನರಂಜನಾತ್ಮಕ ಅಂಶಗಳು ಇಲ್ಲವಂತೆ. ಹಾಗಾಗಿ ಮಕ್ಕಳ ಚಿತ್ರ ಎಂಬ ಸರ್ಟಿಫಿಕೇಟ್ ನೀಡುತ್ತಿಲ್ಲ ಎನ್ನುತ್ತದೆ ಸೆನ್ಸಾರ್ ಮಂಡಳಿ. ಒಂದು ವೇಳೆ ಚಿತ್ರದಲ್ಲಿ ತಾವುಹಾಡುಗಳನ್ನು ಸೇರಿಸಿದೆ ಮಕ್ಕಳ ಚಿತ್ರ ಎಂಬ ಸರ್ಟಿಫಿಕೇಟ್ ಕೊಡುತ್ತಾರಾ? ಈ ಬಗ್ಗೆ ಚಂದ್ರಶೇಖರ್ ಮಾತನಾಡಲು ಸಿದ್ಧರಿಲ್ಲ. ಇದು ಮಕ್ಕಳ ಚಿತ್ರ ಎಂದು ವರ್ಗೀಕರಿಸುವ ಯಾವ ವಿಭಾಗವೂ ಸೆನ್ಸಾರ್ ಮಂಡಳಿಯಲ್ಲಿಲ್ಲ. U ಸರ್ಟಿಫಿಕೇಟ್ ಪಕ್ಕ ಮಕ್ಕಳ ಚಿತ್ರ ಎಂದು ನಮೂದಿಸಬಹುದು ಅಷ್ಟೇ ಎನ್ನುತ್ತವೆ ಸೆನ್ಸಾರ್ ಮಂಡಳಿ ಮೂಲಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada