»   »  ಪುಸ್ತಕ ರೂಪದಲ್ಲಿ 'ಶ್ರುತಿಯ ಪ್ರೇಮಾಯಣ'

ಪುಸ್ತಕ ರೂಪದಲ್ಲಿ 'ಶ್ರುತಿಯ ಪ್ರೇಮಾಯಣ'

Subscribe to Filmibeat Kannada

ನಟಿ ಶ್ರುತಿ ಅವರ ಜೀವನಗಾಥೆ ಪುಸ್ತಕ ರೂಪದಲ್ಲಿ ಹೊರಬಂದಿದೆ. ಶ್ರುತಿ ಮಹೇಂದರ್ ಅವರ ಪ್ರೇಮ ಪ್ರಕರಣ, ವೈವಾಹಿಕ ಬದುಕು, ದಾಂಪತ್ಯದಲ್ಲಿ ಮೂಡಿದ ಒಡಕು...ಹೀಗೆ ಶ್ರುತಿ ಅವರ ಜೀವನದ ಎಲ್ಲ ಹಂತಗಳನ್ನು ದಾಖಲಿಸುವ ಪುಸ್ತಕವೊಂದು ಈಗಾಗಲೇ ಬಿಡುಗಡೆಯಾಗಿದೆ.

'ವಿಕ್ರಾಂತ ಕರ್ನಾಟಕ' ವಾರ ಪತ್ರಿಕೆ ಈ ಹಿಂದೆ ನಟಿ ಶೃತಿ ಅವರ ಜೀವನವನ್ನು ಧಾರಾವಾಹಿಯಾಗಿ ಪ್ರಕಟಿಸಿತ್ತು.'ಶ್ರುತಿ ಅವರ ಜೀವನದ ಹೆಜ್ಜೆ ಗುರುತುಗಳ'ನ್ನು ಲೇಖಕ ಕಗ್ಗೆರೆ ಪ್ರಕಾಶ್ ದಾಖಲಿಸಿದ್ದರು. ಈಗ ಮತ್ತೊಂದಿಷ್ಟು ಲೇಖಗಳನ್ನು ಸೇರಿಸಿ 'ಶ್ರುತಿಯ ಪ್ರೇಮಾಯಣ' ಎಂಬ ಪುಸ್ತಕ ಮೈದಳೆದಿದೆ.

ಶ್ರುತಿ ತನ್ನ ಗಂಡ ಮಹೇಂದರ್ ಗೆ ವಿವಾಹ ವಿಚ್ಛೇದನ ನೀಡುತ್ತಿರುವುದಾಗಿ ಪ್ರಕಟಿಸಿದ್ದರು. ಹಾಗೆಯೇ ಪತ್ರಕರ್ತ ಚಂದ್ರಚೂಡ್ ಅವರನ್ನು ಮದುವೆಯಾಗುತ್ತ್ತೇನೆ ಎಂದು ಘಂಟಾಗೋಷವಾಗಿ ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಶ್ರುತಿಯ ವೈವಾಹಿಕ ಬದುಕು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada