»   »  ಸಂಜು ವೆಡ್ಸ್ ಗೀತಾ ಚಿತ್ರದಿಂದ ರಮ್ಯಾ ಕೊಕ್?

ಸಂಜು ವೆಡ್ಸ್ ಗೀತಾ ಚಿತ್ರದಿಂದ ರಮ್ಯಾ ಕೊಕ್?

Subscribe to Filmibeat Kannada

ನಟಿ ರಮ್ಯಾ ಉದ್ಧಟತನಕ್ಕೆ ಬೆಲೆ ತೆರಬೇಕಾದ ಪರಿಸ್ಥಿತಿ ಬಂದಿದೆಯೇ? ಹೌದು ಎನ್ನುತ್ತಿವೆ ಗಾಂಧಿನಗರದ ಮೂಲಗಳು. ಜಸ್ಟ್ ಮಾತ್ ಮಾತಲ್ಲಿ ಚಿತ್ರೀಕರಣ ವೇಳೆ ಅಸಭ್ಯವಾಗಿ ನಡೆದುಕೊಂಡಿಕ್ಕೆ ಸಂಜು ವೆಡ್ಸ್ ಗೀತಾ ಚಿತ್ರದಿಂದ ಆಕೆಗೆ ಗೇಟ್ ಪಾಸ್ ನೀಡಲಾಗಿದೆಯಂತೆ. ಈ ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ ಎಂಬುದು ಗೊತ್ತೇ ಇದೆ.

ನೃತ್ಯ ನಿರ್ದೇಶಕ ಹರ್ಷ ಅವರೊಂದಿಗೆ ರಮ್ಯಾ ಅಸಂಬದ್ಧವಾಗಿ ನಡೆದುಕೊಂಡಿರುವುದಕ್ಕೆ ಬೇಸರಗೊಂಡು ಸಂಜು ವೆಡ್ಸ್ ಗೀತಾ ಚಿತ್ರದಿಂದ ಆಕೆಯನ್ನು ಕೈಬಿಡಲಾಗಿದೆಯಂತೆ. ಹೊಸ ನಾಯಕಿಯ ಅನ್ವೇಷಣೆಯಲ್ಲಿ ಚಿತ್ರದ ನಿರ್ದೇಶಕರು ತೊಡಗಿದ್ದಾರೆ ಎಂಬಸುದ್ದಿ ಗಾಂಧಿನಗರದಲ್ಲಿ ಸ್ಫೋಟಗೊಂಡಿದೆ. ಆದರೆ ಈ ಮಾತನ್ನು ಸಾರಾಸಗಟಾಗಿ ಸಂಜು ವೆಡ್ಸ್ ಗೀತಾ ಚಿತ್ರದ ನಿರ್ದೇಶಕ ನಾಗಶೇಖರ್ ತಳ್ಳಿಹಾಕಿದ್ದಾರೆ.

ರಮ್ಯಾ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸಂಜು ವೆಡ್ಸ್ ಗೀತಾ ಚಿತ್ರಕತೆಯನ್ನು ರಚಿಸಲಾಗಿದೆ. ಆಕೆಯನ್ನು ಬದಲಾಯಿಸುವ ಯೋಚನೆಯೇ ಇಲ್ಲ. ನಿರ್ದೇಶಕನಾಗಿ ಆಕೆ ನನ್ನನ್ನು ಗೌರವ ಭಾವದಿಂದ ಕಾಣುತ್ತಾಳೆ. ಆಕೆಯ ಬಗ್ಗೆ ನಟಿಯಾಗಿ ನನಗೂ ಗೌರವವಿದೆ. ನಮ್ಮನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಇಷ್ಟಕ್ಕೂ ನಾನೇಕೆ ಆಕೆಯನ್ನು ಬದಲಾಯಿಸಬೇಕು ಎಂಬುದು ನಾಗಶೇಖರ್ ಕೊಡುವ ವಿವರಣೆ.

ಅತ್ತ ಸುದೀಪ್ ಏನೋ ರಮ್ಯಾ ಇಲ್ಲದೇನೇ ಜಸ್ಟ್ ಮಾತ್ ಮಾತಲ್ಲಿ ಚಿತ್ರ ಮುಗಿಸುವುದಾಗಿ ತಿಳಿಸಿದ್ದಾರೆ. ಹಾಡುಗಳ ಚಿತ್ರೀಕರಣಕ್ಕಾಗಿ ಸಿಂಗಪುರದಲ್ಲಿ ಜಸ್ಟ್ ಮಾತ್ ಮಾತಲ್ಲಿ ಚಿತ್ರತಂಡ ಇಳಿದಿದೆ. ರಮ್ಯಾ ಅವರನ್ನು ಇಲ್ಲೇ ಬಿಟ್ಟ್ಟು ಸುದೀಪ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇತ್ತ ರಮ್ಯಾ ಸಹಾ ಸುಮ್ಮನೆ ಕುಳಿತಿಲ್ಲ. ಪ್ರಕಾಶ್ ರೈ ಅವರ ಚೊಚ್ಚಲ ನಿರ್ದೇಶನದ ನಾನು ನನ್ನ ಕನಸು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಪ್ರಕಾಶ್ ರೈ ಜತೆ ನಟಿಸಲು ಅವಕಾಶ ಸಿಕ್ಕಿರುವುದಕ್ಕೆ ರಮ್ಯಾ ಸಖತ್ ಖುಷಿಯಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada