For Quick Alerts
ALLOW NOTIFICATIONS  
For Daily Alerts

ಪರಾರಿಯಾದ ನಟ ಒರಟ ಪ್ರಶಾಂತ್ ಇನ್ನೂ ಪತ್ತೆಯಿಲ್ಲ

By Rajendra
|

ಪೋಲಿಸ್ ಠಾಣೆ ಕಾಂಪೌಂಡ್ ಹಾರಿ ಪರಾರಿ ಆಗಿರುವ ನಟ ಒರಟ ಪ್ರಶಾಂತ್ ಇನ್ನೂ ಪತ್ತೆಯಾಗಿಲ್ಲ. ಡಾಲರ್ಸ್ ಕಾಲೋನಿಯ ಫ್ಲಾಟ್‌ನಲ್ಲಿ ತನ್ನ ಗೆಳತಿ ಯುವರಾಣಿ ಜೊತೆ ಇದ್ದಾಗ ಪ್ರಶಾಂತ್ ಪತ್ನಿ ಶಶಿರೇಖಾ ದಾಳಿ ಮಾಡಿ ರೆಡ್ ಹ್ಯಾಂಡೆಡ್ ಆಗಿ ಹಿಡಿದಿದ್ದರು.

ಬಳಿಕ ಪ್ರಶಾಂತ್‌ನನ್ನು ಸಂಜಯನಗರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಅಂದು ಕಾಂಪೌಂಡ್ ಹಾರಿ ಪರಾರಿಯಾಗಿರುವ ನಟ ಇದುವರೆಗೂ ಸಿಗದೆ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಶಾಂತ್ ಪತ್ನಿ ಶಶಿರೇಖಾ ಅವರು ಹಲಸೂರುಗೇಟ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೊಟ್ಟ ದೂರಿನ ಅನ್ವಯ ಪೊಲೀಸರು ಪ್ರಶಾಂತ್‌ಗಾಗಿ ಬಲೆ ಬೀಸಿದ್ದಾರೆ.

ಹಲಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಾಗಿದೆ. ಪ್ರಶಾಂತ್ ಹಾಗೂ ಶಶಿರೇಖಾ ಮದುವೆಯಾಗಿ ಎಂಟು ವರ್ಷ ಕಳೆದಿದೆ. ದಂಪತಿಗೆ ಐದು ವರ್ಷದ ಮಗು ಇದೆ. ಕಳೆದ ಕೆಲವು ತಿಂಗಳಿಂದ ಪತಿ ಪತ್ನಿಯರಿಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಇವರಿಬ್ಬರಿಗೂ ಕೋರ್ಟ್ ವಿವಾಹ ವಿಚ್ಛೇದನ ನೀಡಿರಲಿಲ್ಲ. ನಾಗಶೆಟ್ಟಿಹಳ್ಳಿಯಲ್ಲಿ ಪ್ರಶಾಂತ್ ಒಂದು ಕಚೇರಿಯನ್ನು ನಿರ್ವಹಿಸುತ್ತಿದ್ದರು. ಅಲ್ಲಿಗೆ ಆತನ ಪತ್ನಿ ಶಶಿರೇಖಾ ಆಗಾಗ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು.

ಒಂದು ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿರುವ ಆ ಕಚೇರಿಯಲ್ಲಿ ಮತ್ತೊಬ್ಬ ಯುವತಿಯೊಂದಿಗೆ ಪ್ರಶಾಂತ್ ಆತ್ಮೀಯವಾಗಿರುತ್ತಿರುವುದನ್ನು ಮನಗಂಡ ಶಶಿರೇಖಾ, ತನ್ನ ಬಂಧು ಮಿತ್ರರ ಸಹಾಯದೊಂದಿಗೆ ಪೊಲೀಸರೊಂದಿಗೆ ಬಂದು ಪ್ರಶಾಂತ್‌ನನ್ನು ಸಂಜಯನಗರ ಪೊಲೀಸ್ ಠಾಣೆಗೆ ಕರೆತಂದಿದ್ದರು.

ಕೋರ್ಟ್‌ನಲ್ಲಿ ಕೇಸಿದೆ, ಶಶಿರೇಖಾ ಹಾಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರ ಕಣ್ಣಿಗೆ ಮಂಕುಬೂದಿ ಎರಚಿ ಪ್ರಶಾಂತ್ ಪೊಲೀಸ್ ಠಾಣೆಯಿಂದ ಗೋಡೆ ಹಾರಿ ಪರಾರಿಯಾಗಿದ್ದ. ಪ್ರಶಾಂತ್ ತಪ್ಪಿಸಿಕೊಳ್ಳಲು ಪೊಲೀಸರ ನಿರ್ಲಕ್ಷ್ಯವೇ ಕಾರಣ. ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಶಿರೇಖಾ ದೂರು ದಾಖಲಿಸಿದ್ದರು. ಪ್ರಶಾಂತ್ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು. ಒಂದು ವೇಳೆ ಪ್ರಶಾಂತ್ ಪೊಲೀಸರಿಗೆ ಸಿಕ್ಕಿದರೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ. (ಒನ್‌ಇಂಡಿಯಾ ಕನ್ನಡ)

English summary
It seems that the trend of assaulting wives is getting higher in Kannada film industry. After Darshan, another Kannada actor Prasanth have been accused of beating up his wife Shashirekha. On the other hand, shockingly the police authorities claim that the couple never even came to the station. Prasanth and Shashirekha have been married for eight years and have a five-year-old child.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more