»   » ಬಯಲಾದ ಲವ್ಲಿ ಸ್ಟಾರ್ ಪ್ರೇಮ್ ಇನ್ನೊಂದು ಮುಖ..!

ಬಯಲಾದ ಲವ್ಲಿ ಸ್ಟಾರ್ ಪ್ರೇಮ್ ಇನ್ನೊಂದು ಮುಖ..!

Posted By:
Subscribe to Filmibeat Kannada

'ನೆನಪಿರಲಿ' ಅಂತ ಹಾಡುತ್ತಲೇ ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡ ಚಾಕಲೇಟ್ ಹೀರೋ ಲವ್ಲಿ ಸ್ಟಾರ್ ಪ್ರೇಮ್. ಹರೆಯದ ಹುಡುಗಿಯರ ನೆಚ್ಚಿನ ಡ್ರೀಂ ಬಾಯ್ ಆಗಿರುವ ಈ ನಟ ಲವಲವಿಕೆಯ ಪಾತ್ರಗಳಿಂದಲೇ ಹೆಸರುವಾಸಿ.

ಇಂತಿಪ್ಪ ಪ್ರೇಮ್, ಈಗ 'ಮಳೆ' ಮತ್ತು 'ಮೊಹಬ್ಬತ್' ಚಿತ್ರಗಳಲ್ಲಿ ಬಿಜಿ. 'ಚಾರ್ಮಿನಾರ್' ನಂತ್ರ ನಿರ್ದೇಶಕ ಚಂದ್ರು ಜೊತೆ 'ಮಳೆ' ಸಿನಿಮಾ ಮಾಡುತ್ತಿರುವ ಪ್ರೇಮ್, ಚಿತ್ರಕ್ಕಾಗಿ ಪಡೆದಿರುವ ಸಂಭಾವನೆ ಎಷ್ಟಿರಬಹುದು ಹೇಳಿ..? ಕೋಟಿ ಕೋಟಿ ಅಂತ ಲೆಕ್ಕ ಹಾಕಬೇಡಿ, ಪ್ರೇಮ್ ಆಪ್ತ ವಲಯಗಳು ಹೇಳುವ ಪ್ರಕಾರ 'ಮಳೆ' ಚಿತ್ರಕ್ಕೆ ಲವ್ಲಿ ಸ್ಟಾರ್ ಒಂದು ರೂಪಾಯಿ ಕೂಡ ಸಂಭಾವನೆ ರೂಪದಲ್ಲಿ ಪಡೆದಿಲ್ಲವಂತೆ..!


ಹೌದು, 'ಜೊತೆ ಜೊತೆಯಲಿ' ಚಿತ್ರದ ನಂತ್ರ ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನ ನೀಡಿದ್ದ ಪ್ರೇಮ್ ವೃತ್ರಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಚಿತ್ರ 'ಚಾರ್ಮಿನಾರ್'. ಪ್ರೀತಿಗೆ ಅದರ ರೀತಿಗೆ ಹೊಸ ವ್ಯಾಖ್ಯಾನ ಕೊಟ್ಟು ನಾಲ್ಕು ಪಿಲ್ಲರ್ ಗಳಿಂದ ಪ್ರೇಮ ಸೌಧ ಕಟ್ಟಿದ ನಿರ್ದೇಶಕ ಚಂದ್ರು ಫಾರ್ಮುಲಾ ಕ್ಲಿಕ್ ಆಯ್ತು.


Actor Prem's free Call-Sheet for R.Chandru's Male

ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಂಡ 'ಚಾರ್ಮಿನಾರ್' ಚಿತ್ರದ ಮೂಲಕ ಪ್ರೇಮ್ ಮರಳಿ ಟ್ರ್ಯಾಕ್ ಗೆ ಬರುವಂತಾಯ್ತು. ಅಂದಿನಿಂದ ನಿರ್ದೇಶಕ ಚಂದ್ರು ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಹೊಂದಿರುವ ಪ್ರೇಮ್, 'ಮಳೆ' ಚಿತ್ರಕ್ಕಾಗಿ ಫ್ರೀ ಕಾಲ್ ಶೀಟ್ ನೀಡಿದ್ದರಂತೆ. [ಲವ್ಲಿ ಸ್ಟಾರ್ ಪ್ರೇಮ್ ಜೊತೆಗಿನ ಲವ್ಲಿ ಸಂದರ್ಶನ ]


ಚಂದ್ರು ಹೋಮ್ ಪ್ರೊಡಕ್ಷನ್ ನಲ್ಲಿ 'ಮಳೆ' ಚಿತ್ರ ನಿರ್ಮಾಣವಾಗುತ್ತಿದೆ. ಚಂದ್ರು ಶಿಷ್ಯ ತೇಜಸ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಂದ್ರು ಸ್ನೇಹಕ್ಕಾಗಿ 'ಮಳೆ'ಯಲ್ಲಿ ನೆನೆಯುವುದಕ್ಕೆ ಒಪ್ಪಿಕೊಂಡ ಪ್ರೇಮ್, ಅದೇ ಸ್ನೇಹಕ್ಕಾಗಿ ನಯಾ ಪೈಸಾ ಕೂಡ ಪಡೆದಿಲ್ಲ. [ಫೆ.14 ನಂತರವಾದ್ರೂ ಪ್ರೇಮ ಮಳೆ ಶುರುವಾಗುತ್ತಾ?]


ನಟರು-ನಿರ್ದೇಶಕರು ಅಂದ್ರೆ ಬರೀ 'ವೃತ್ತಿಪರ' ಅನ್ನುವ ಮಾತೇ ಈಗಿನ ಕಾಲದಲ್ಲಿ ಹೆಚ್ಚಾಗಿ ಕೇಳಿಬರುತ್ತೆ. ಪೇಮೆಂಟ್ ಬರದೇ ಇದ್ದರೆ, ಕೆಲವರು ಶೂಟಿಂಗ್ ಸ್ಪಾಟ್ ಗೆ ಬರೋದೇ ಇಲ್ಲ. ಅಂಥದ್ರಲ್ಲಿ, ಸ್ನೇಹಕ್ಕಾಗಿ ಸಿನಿಮಾ ಮಾಡೋದಲ್ಲದೆ, ಫ್ರೀ ಕಾಲ್ ಶೀಟ್ ಅಂದ್ರೆ ತಮಾಷೆ ಅಲ್ಲ. ತೆರೆಮೇಲೆ ಮಾತ್ರ ಅಲ್ಲ, ನಿಜ ಜೀವನದಲ್ಲೂ ಪ್ರೇಮ್ ಸಹೃದಯಿ ಅಂತ ಈ ಮೂಲಕ ಬಯಲಾಗಿದೆ. (ಏಜೆನ್ಸೀಸ್)

English summary
Kannada Actor Prem Kumar is busy shooting for Kannada Movie 'Male'. According to the sources, Prem has given free call-sheet for Producer R.Chandru, because of his friendship with him since 'Charminar'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada