»   » ಒಂದೇ ದಿನದಲ್ಲಿ 'ಕೋಟಿಗೊಬ್ಬ 2' ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದೆಷ್ಟು.?

ಒಂದೇ ದಿನದಲ್ಲಿ 'ಕೋಟಿಗೊಬ್ಬ 2' ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದೆಷ್ಟು.?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ 2' ಸಿನಿಮಾ ನಿನ್ನೆ ತೆರೆಕಂಡಿದೆ, ಸಿನಿಮಾ ಕೂಡ ತುಂಬಾ ಚೆನ್ನಾಗಿದೆ ಅಂತ ಸಿನಿಮಾ ನೋಡಿದವರೆಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಹೇಳಿ-ಕೇಳಿ ಈ ಸಿನಿಮಾ ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆ ಕಂಡಿದೆ, ಎಂದಾಗ ಫಸ್ಟ್ ಡೇ ಕಲೆಕ್ಷನ್ ಎಷ್ಟಾಗಿರಬಹುದು ಅಂತ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತೆ.

ಚಿತ್ರದಲ್ಲಿ ಸುದೀಪ್ ಅವರು ಸತ್ಯ ಮತ್ತು ಶಿವ ಎಂಬ ಎರಡು ಪಾತ್ರಗಳಲ್ಲಿ ತೆರೆ ಮೇಲೆ ಅಬ್ಬರಿಸಿದಂತೆ, ಬಾಕ್ಸಾಫೀಸ್ ನಲ್ಲೂ ಅಕ್ಷರಶಃ ಅಬ್ಬರಿಸಿದ್ದಾರೆ. ಇದೀಗ ಗಾಂಧಿನಗರದ ಗಲ್ಲಾಪೆಟ್ಟಿಗೆ ಎಕ್ಸ್ ಪರ್ಟ್ ಗಳು ಹೇಳುವ ಪ್ರಕಾರ 'ಕೋಟಿಗೊಬ್ಬ 2', ಬರೋಬ್ಬರಿ 20 ಕೋಟಿ (ಗ್ರಾಸ್) ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನುತ್ತಿದ್ದಾರೆ.[ವಿಮರ್ಶಕರ ಮನ ಲೂಟಿ ಮಾಡಿದನಾ 'ಈ' ಕೋಟಿಗೊಬ್ಬ.?]


Actor Sudeep's 'Kotigobba 2' first day box office collection report

ಇಡೀ ವಿಶ್ವದಾದ್ಯಂತ ಸುಮಾರು 1200 ಚಿತ್ರಮಂದಿರಗಳಲ್ಲಿ ತೆರೆಕಂಡ 'ಕೋಟಿಗೊಬ್ಬ 2' ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿತ್ತು. ತಮಿಳುನಾಡಿನಲ್ಲಿ ಸುಮಾರು 600 ಚಿತ್ರಮಂದಿರ ಹಾಗೂ ಕರ್ನಾಟಕದಲ್ಲಿ ಸುಮಾರು 350 ಚಿತ್ರಮಂದಿರಗಳಲ್ಲಿ ತೆರೆಕಂಡ ಕಿಚ್ಚನ 'ಕೋಟಿಗೊಬ್ಬ 2' ಎರಡೂ ಕಡೆಯಲ್ಲೂ ಧೂಳೆಬ್ಬಿಸಿದೆ.[ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]


Actor Sudeep's 'Kotigobba 2' first day box office collection report

ಈ ಚಿತ್ರದಲ್ಲಿ ಎರಡೆರಡು ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿದ ಕಿಚ್ಚ ಸುದೀಪ್ ಅವರು, ಮತ್ತೊಮ್ಮೆ ಅಭಿನಯ ಚಕ್ರವರ್ತಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸುದೀಪ್ ಅವರಿಗೆ ನಾಯಕಿಯಾಗಿ ನಿತ್ಯಾ ಮೆನನ್ ಅವರು ಕಾಣಿಸಿಕೊಂಡಿದ್ದು, ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ನ ಆಕ್ಷನ್-ಕಟ್ ಹೇಳಿದ್ದರು.[ಅಚ್ಚರಿ : ಸುದೀಪ್ ನಟನೆಯ 'ಕೋಟಿಗೊಬ್ಬ-2' ಚಿತ್ರದಲ್ಲಿ 'ಶಿವಣ್ಣ'.!]


Actor Sudeep's 'Kotigobba 2' first day box office collection report

ಒಟ್ನಲ್ಲಿ ಒಂದೇ ದಿನಕ್ಕೆ ಅಲ್ಲೂ ಧೂಳ್, ಇಲ್ಲೂ ಧೂಳ್ ಅಂತ ಬರೋಬ್ಬರಿ 20 ಕೋಟಿ ರೂಪಾಯಿ ಕಮಾಯಿಸಿ ಬಾಕ್ಸಾಫೀಸ್ ನಲ್ಲಿ ಸುದೀಪ್ ಅವರು ಧೂಳೆಬ್ಬಿಸುತ್ತಿದ್ದಾರೆ.

English summary
According to the Trade Experts in Sandalwood, Actor Sudeep and Actress Nithya menen starrer, KS Ravi Kumar directorial 'Kotigobba 2' First Day Collection is predicted around Rs.20 (Gross) crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada