For Quick Alerts
  ALLOW NOTIFICATIONS  
  For Daily Alerts

  'ಚೌಕ'ದ ಮೊಹಮ್ಮದ್ ಅನ್ವರ್ ಗೆ 'ಬೇಗಂ' ಆಗ್ತಾರಾ ದೀಪಾ ಸನ್ನಿಧಿ?

  By Suneetha
  |

  ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಚೌಕ' ಚಿತ್ರದ ಕೆಲಸಗಳು ಬಹಳ ಬಿರುಸಿನಿಂದ ಸಾಗಿವೆ. ಮೊನ್ನೆ ಮೊನ್ನೆಯಷ್ಟೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ಎಲ್ಲಾ ನಟರ ಪರಿಚಯ ಮಾಡಿಕೊಟ್ಟಿದ್ದರು.

  ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ 5 ಸ್ಟಾರ್ ನಟರು ಸೇರಿದಂತೆ 5 ಛಾಯಾಗ್ರಾಹಕರ ಕ್ಯಾಮರಾ ಕೈ ಚಳಕ ಮತ್ತು 5 ಸಂಗೀತ ನಿರ್ದೇಶಕರ ಸಂಗೀತ ಸಂಯೋಜನೆಯಲ್ಲಿ 'ಚೌಕ' ಚಿತ್ರ ವಿಭಿನ್ನವಾಗಿ ಮೂಡಿಬರಲಿದೆ.[ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ]

  ಅಂದಹಾಗೆ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಈ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ನಟಿ ದೀಪಾ ಸನ್ನಿಧಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  ದೀಪಾ ಸನ್ನಿಧಿ ಅವರು ದರ್ಶನ್ ಅವರ 'ಚಕ್ರವರ್ತಿ' ಚಿತ್ರಕ್ಕೆ ಬರುವ ಮುಂಚೆ ಸದ್ದು-ಸುದ್ದಿ ಮಾಡದೇ 'ಚೌಕ' ಚಿತ್ರದ ಸೆಟ್ ಗೆ ಹಾಜರಾಗಿ ತಮ್ಮ ಭಾಗದ ಶೂಟಿಂಗ್ ಮುಗಿಸಿದ್ದಾರೆ. 'ಚೌಕ' ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು ಮುಸ್ಲಿಂ ಯುವಕ ಮೊಹಮ್ಮದ್ ಅನ್ವರ್ ಎಂಬ ಪಾತ್ರ ಪೋಷಣೆ ಮಾಡುತ್ತಿದ್ದಾರೆ. ಇವರಿಗೆ ದೀಪಾ ಸನ್ನಿಧಿ ಅವರು 'ಬೇಗಂ' ಆಗಲಿದ್ದಾರೆ.['ಚಕ್ರವರ್ತಿ' ಜೀವನದಲ್ಲಿ ಶಾಂತಿಯ 'ದರ್ಶನ']

  ಈ ಮೊದಲು ನಟಿ ಐಂದ್ರಿತಾ ರೇ ಅವರು ನಟ ಲವ್ಲಿ ಸ್ಟಾರ್ ಪ್ರೇಮ್ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರಿಗೆ ನಟಿ ದೀಪಾ ಸನ್ನಿಧಿ ಅವರು ನಾಯಕಿಯಾಗಿ ಮಿಂಚಲಿದ್ದಾರೆ.[ಪ್ರಜ್ವಲ್ ದೇವರಾಜ್ ಮೇಲೆ ಜೇನು ಹುಳಗಳ ದಾಳಿ]

  ಇನ್ನುಳಿದಂತೆ ಇನ್ನಿಬ್ಬರು ನಾಯಕರಾದ ವಿಜಯ ರಾಘವೇಂದ್ರ ಮತ್ತು ದಿಗಂತ್ ಅವರ ಜೊತೆ ಯಾರು ರೋಮ್ಯಾನ್ಸ್ ಮಾಡಲಿದ್ದಾರೆ ಅನ್ನೋದು ತಿಳಿದು ಬಂದಿಲ್ಲ. ಜೊತೆಗೆ ಕಿಚ್ಚ ಸುದೀಪ್ ಅವರು ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡುತ್ತಿದ್ದಾರೆ.[50ನೇ ಚಿತ್ರದಲ್ಲಿ ಸಿನಿರಸಿಕರಿಗೆ ಮೋಡಿ ಮಾಡಲಿದ್ದಾರೆ ದ್ವಾರಕೀಶ್]

  ಒಟ್ನಲ್ಲಿ ವಿಭಿನ್ನ ಕಥಾ ಹಂದರವನ್ನು ಹೊಂದಿರುವ 'ಚೌಕ' ತರುಣ್ ಸುಧೀರ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾದರೆ, ದ್ವಾರಕೀಶ್ ಅವರ ನಿರ್ಮಾಣದ 50ನೇ ಚಿತ್ರವಾಗಿದೆ. ಮಾತ್ರವಲ್ಲದೇ ಸ್ಟಾರ್ ನಟ-ನಟಿಯರು ಈ ಚಿತ್ರದಲ್ಲಿ ಇರುವುದರಿಂದ ಅಭಿಮಾನಿಗಳು ಕೂಡ ಸ್ವಲ್ಪ ಜಾಸ್ತೀನೇ ಎಕ್ಸೈಟ್ ಆಗಿದ್ದಾರೆ.

  English summary
  Actress Deepa Sannidhi has acted as the Heroine opposite Kannada Actor Prajwal Devaraj in Kannada Movie 'Chowka'. The multi starrer 'Chowka' Produced by Dwarakish and Directed by Tarun Sudhir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X